ರಾಷ್ಟ್ರೀಯ ರೋಲ್‌ಬಾಲ್ ಸ್ಕೇಟಿಂಗ್: ರಾಜ್ಯಕ್ಕೆ ತೃತೀಯ ಸ್ಥಾನ

ರಾಷ್ಟ್ರೀಯ ರೋಲ್‌ಬಾಲ್ ಸ್ಕೇಟಿಂಗ್: ರಾಜ್ಯಕ್ಕೆ ತೃತೀಯ ಸ್ಥಾನ

ದಾವಣಗೆರೆ, ಮೇ 26- ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ನಡೆದ ಅಂತರ ವಿಶ್ವವಿದ್ಯಾಲಯ ದಕ್ಷಿಣ ವಲಯ ರೋಲ್ ಬಾಲ್ ಸ್ಕೇಟಿಂಗ್  ಪಂದ್ಯಾವಳಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಲಭಿಸಿದೆ. 

ಬೇರೆ ಬೇರೆ ರಾಜ್ಯಗಳ ಮೂವತ್ತು ವಿವಿ ತಂಡಗಳು ಭಾಗವಹಿಸಿದ್ದು, ಈ ಪಂದ್ಯಾವಳಿಯಲ್ಲಿ ಬೆಂಗಳೂರು ಉತ್ತರ ವಿವಿ ತಂಡಕ್ಕೆ ದಾವಣಗೆರೆ ನಗರದ ಪೃಥ್ವಿಕಾಂತ್ ಕೊಟಗಿ ತರಬೇತಿ ಹಾಗೂ ಸೂಕ್ತ ಮಾರ್ಗದರ್ಶನ ನೀಡಿದ್ದು, ಪ್ರಥಮವಾಗಿ ಕರ್ನಾಟಕ ರಾಜ್ಯಕ್ಕೆ ತೃತೀಯ ಚಾಂಪಿಯನ್ ಶಿಪ್ ಲಭಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ವಲಯ ರೋಲ್‌ಬಾಲ್ ಸಂಸ್ಥೆ ಕಾರ್ಯದರ್ಶಿ ಸುಬ್ರಹ್ಮಣ್ಯ, ಕರ್ನಾಟಕ ರಾಜ್ಯದ ರೋಲ್‌ಬಾಲ್ ಕಾರ್ಯದರ್ಶಿ ಗೋವಿಂದಯ್ಯ, ದೇಶದ ರೋಲ್‌ಬಾಲ್ ಕಾರ್ಯದರ್ಶಿ ಚೇತನ್, ಈ ಆಟದ ಆವಿಷ್ಕಾರಿಗಳಾದ ರಾಜು ದೊಬಾಡೆ, ಪೋಷಕರು, ಸಹೋದರ ಆಕಾಶ್ ಸೇರಿದಂತೆ ಅಭಿಮಾನಿಗಳು ಅಭಿನಂದಿಸಿದ್ದಾರೆ.

error: Content is protected !!