ಮಾರುತಿ ನಗರದ ಶ್ರೀ ತುಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಗೋಪುರಕ್ಕೆ ಹೊನ್ನಾಳಿ ಚನ್ನಮಲ್ಲಿಕಾರ್ಜುನ ಶ್ರೀ, ದಿಂಡದಹಳ್ಳಿ ಪಶುಪತಿ ಶ್ರೀ, ಲಿಂಗನಾಯ್ಕನಹಳ್ಳಿ ಚನ್ನವೀರ ಶ್ರೀ, ಶನೇಶ್ಚರ ಮಠದ ಶಿವಯೋಗಿ ಶ್ರೀ ಹಾಗೂ ವಿವೇಕಾನಂದಾಶ್ರಮ ಪ್ರಕಾಶಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಇಂದು ಕಳಸಾರೋಹಣ ನೆರವೇರಿಸಲಾಗುವುದು.
ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಆರ್. ಶಂಕರ, ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ರೂಪಾ ಚಿನ್ನಿಕಟ್ಟಿ, ವರ್ತಕ ಎಂ.ಎಸ್. ಅರಕೇರಿ, ಡಾ.ನಾಗರಾಜ ದೊಡ್ಮನಿ, ತಹಶೀಲ್ದಾರ್ ಜಿ. ಶಂಕರ್ ಮತ್ತಿತರರು ಆಗಮಿಸುವರು.