ಇಬ್ಬರು ಬಾಲಕರ ಸಾವಿನ ಪ್ರಕರಣ
ದಾವಣಗೆರೆ, ಮೇ 20- ದೇವರಾಜ ಅರಸು ಬಡಾವಣೆ ಈಜುಕೊಳದ ನಿರ್ವಾಹಕರು ಹಾಗೂ ಸಿಬ್ಬಂದಿಗಳ ಮೇಲೆ ಬಸವನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ತನ್ನ ಮಗ ಮುಬಾರಕ್ ಹಾಗೂ ಆತನ ಸ್ನೇಹಿತ ತಾಜುದ್ದೀನ್, ದೇವರಾಜ ಅರಸು ಬಡಾವಣೆಯಲ್ಲಿನ ಈಜು ಕೊಳದಲ್ಲಿ ಈಜಾಡುತ್ತಿದ್ದಾಗ ಮೃತಪಟ್ಟಿದ್ದು, ಇವರ ಸಾವಿಗೆ ಈಜುಕೊಳ ನಿರ್ವಹಣೆ ಮಾಡುತ್ತಿರುವವರ ನಿರ್ಲಕ್ಷವೇ ಕಾರಣ.
ಯಾವುದೇ ಮುನ್ನೆಚ್ಚರಿಕೆ, ರಕ್ಷಣಾ ವ್ಯವಸ್ಥೆ, ತರಬೇತುದಾರರನ್ನು ನಿಯೋಜಿಸದೆ ಅಸಡ್ಡೆ ತೋರಿ ತನ್ನ ಮಗ ಹಾಗೂ ಆತನ ಸ್ನೇಹಿತನ ಸಾವಿಗೆ ನೇರ ಹೊಣೆಯಾಗಿರುವ ಈಜುಕೊಳದ ನಿರ್ವಾಹಕರು ಹಾಗೂ ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಬೀಡಿ ಲೇ ಔಟ್ನ ಮುಕ್ತಿಯಾರ್ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.