ರಾಣೇಬೆನ್ನೂರು, ಮೇ 10- ಶಾಸಕರ ಹುಟ್ಟೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆಯಲ್ಲಿ ಮತದಾರರನ್ನು ವಿಶೇಷವಾಗಿ ಆಕರ್ಷಿಸಲು ಗ್ರಾ.ಪಂ. ಕಾರ್ಯಾಲಯದಲ್ಲಿರುವ ಮತಗಟ್ಟೆಯನ್ನು ಪರಿಸರ ಸ್ನೇಹಿ ಮತ್ತು ಗ್ರಾಮೀಣ ಸೊಗಡಿನಿಂದ ಕೂಡಿದ ಮತಗಟ್ಟೆಯನ್ನಾಗಿ ಶೃಂಗರಿಸಲಾಗಿತ್ತು.
ತೆಂಗಿನ ಗರಿಯಲ್ಲಿ ಹೆಣೆದ ತಟ್ಟೆಗಳು, ಮಾವಿನ ತೋರಣ, ಬಾಳೆಯ ಕಂಬ, ಹುಲ್ಲು ಹೊದಿಕೆಯ ಚಪ್ಪರ, ಕೃಷಿ ಸಲಕರಣೆಗಳ ಜೋಡಣೆ, ತೂಗಾಡುತ್ತಿದ್ದ ಹಣ್ಣು ಹಂಪಲುಗಳ ಗೊಂಚಲು ಜೊತೆಗೆ ಮತದಾನ ಮಾಡಿದವರು ಪೋಟೋ ತೆಗೆದುಕೊಳ್ಳಲು ವಿಶೇಷವಾದ ಮಂಟಪ ನಿರ್ಮಿಸಲಾಗಿತ್ತು. ಆದರೆ ಆ ಮತಗಟ್ಟೆಯಲ್ಲಿ ಮತದಾರರ ಕೊರತೆ ಕಂಡುಬಂದಿತು.