ಒಂದೇ ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವುದು ಅವೈಜ್ಞಾನಿಕ ಹಾಗೂ ಅವಾಸ್ತವ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ವಿರೋಧ ವ್ಯಕ್ತಪಡಿಸಿದೆ.
5 ಕೋಟಿ ವೆಚ್ಚದಲ್ಲಿ ಲೇಸರ್ ಷೋ
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ನಗರದ ಗಾಜಿನ ಮನೆಗೆ ಮ್ಯೂಸಿಕಲ್ ಫೌಂಟೇನ್ ಹಾಗೂ ಲೇಸರ್ ಷೋ ಅಳವಡಿಸುವ 5 ಕೋಟಿ ರೂ.ಗಳ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು.
5 ಕೋಟಿ ವೆಚ್ಚದಲ್ಲಿ ಲೇಸರ್ ಷೋ
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ನಗರದ ಗಾಜಿನ ಮನೆಗೆ ಮ್ಯೂಸಿಕಲ್ ಫೌಂಟೇನ್ ಹಾಗೂ ಲೇಸರ್ ಷೋ ಅಳವಡಿಸುವ 5 ಕೋಟಿ ರೂ.ಗಳ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು.
ಕಿಟ್ಗೆೆ ನೂಕುನುಗ್ಗಲು: ಲಾಠಿ
ಹರಿಹರ : ನಗರದ ಎಪಿಎಂಸಿ ಆವರಣ ದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸುವಾಗ, ನೂಕು ನುಗ್ಗಲು ಹೆಚ್ಚಾದ ಕಾರಣ ಪೊಲೀಸರು ಜನರನ್ನು ಚದುರಿಸಲು ಲಾಠಿ ಬೀಸಿದ ಘಟನೆ ಇಂದು ನಡೆದಿದೆ.
ಸಚಿವರ, ಜಿಲ್ಲಾಧಿಕಾರಿಗಳ ಹೇಳಿಕೆ ದಿಕ್ಕು ತಪ್ಪಿಸುವ ಪ್ರಯತ್ನ
ಹರಿಹರ : ನಗರಕ್ಕೆ ವೈದ್ಯಕೀಯ ಕಾಲೇಜು ಸ್ಥಾಪನೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಜಮೀನು, ನೀರು ಇದ್ದ ತಕ್ಷಣ ಸರ್ಕಾರದ ನಿಬಂಧನೆಗಳನ್ನು ಮೀರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಿಕ್ಕೆ ಬರುವುದಿಲ್ಲ
ಬಿಸಲೇರಿ ಬಸಮ್ಮ ಭೀಮಪ್ಪ ಪ್ರೌಢಶಾಲೆ ಮಾನ್ಯತೆ ರದ್ದು
ಐಗೂರು ಗ್ರಾಮದ ಶ್ರೀ ಜಯಪ್ರಕಾಶ್ ನಾರಾ ಯಣ ವಿದ್ಯಾಸಂಸ್ಥೆ ಆಶ್ರಯದಲ್ಲಿ ಕಾಡಜ್ಜಿಯಲ್ಲಿ ನಡೆಯುತ್ತಿದ್ದ ಶ್ರೀ ಬಿಸಲೇರಿ ಬಸಮ್ಮ ಭೀಮಪ್ಪ ಪ್ರೌಢಶಾಲೆಗೆ 8 ರಿಂದ 10 ತರಗತಿಯವರೆಗೆ ನೀಡಲಾದ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಹಿಂಪಡೆಯಲಾಗಿದೆ
ಅಪ್ಪು ಶಾಲಾ ಮಾನ್ಯತೆ ರದ್ದು
ನಗರದ ಹೊಂಡದ ರಸ್ತೆಯಲ್ಲಿ ಶ್ರೀ ಗಂಗಾಜಿ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿದ್ದ ಅಪ್ಪು ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ (ಆಂಗ್ಲ) ಮಾಧ್ಯಮ ಶಾಲೆಗೆ 1 ರಿಂದ 8 ತರಗತಿಯವರೆಗೆ ನೀಡಲಾದ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಹಿಂಪಡೆಯಲಾಗಿದೆ.
ರಾಣೇಬೆನ್ನೂರಿನಲ್ಲಿ ಇಂದು ಮತ್ತು ನಾಳೆ ಕರ್ನಾಟಕ ವೈಭವ ವೈಚಾರಿಕ ಹಬ್ಬ
ಇಲ್ಲಿನ ಬಸ್ ನಿಲ್ದಾಣದ ಎದುರಿನ ರಾಜರಾಜೇಶ್ವರಿ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ವೈಭವ ವೈಚಾರಿಕ ಹಬ್ಬ ಸಮಾರಂಭವನ್ನು ಇಂದು ಮತ್ತು ನಾಳೆ ಆಯೋಜಿಸಲಾಗಿದೆ ಎಂದು ಸಂಯೋಜಕ ಕೆ.ಎನ್. ಪಾಟೀಲ್ ತಿಳಿಸಿದ್ದಾರೆ.
ಭರಮಸಾಗರದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಇಂದು
ಭರಮಸಾಗರದಲ್ಲಿ ಇಂದು ಸಂಜೆ 6.30ಕ್ಕೆ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ `ನ್ಯಾಯಾಲಯ ಮತ್ತು ಸಮಾಜ' ಶೀರ್ಷಿಕೆಯಡಿ ಐದನೇ ದಿನದ ಕಾರ್ಯಕ್ರಮ ನಡೆಯಲಿದೆ.
ಶ್ರೀ ಅಕ್ಕಮಹಾದೇವಿ ವಧು-ವರಾನ್ವೇಷಣಾ ಕೇಂದ್ರದ ರಜತೋತ್ಸವ : ಇಂದು ಸಮಾವೇಶ
ಪಿ.ಜೆ. ಬಡಾವಣೆಯಲ್ಲಿರುವ ಶ್ರೀ ಅಕ್ಕಮಹಾದೇವಿ ವಧು-ವರಾನ್ವೇಷಣಾ ಕೇಂದ್ರದ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ವಧು-ವರಾನ್ವೇಷಣೆ ಸಮಾವೇಶವು ಶ್ರೀಮತಿ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಲಿದೆ.
ನಗರದಲ್ಲಿ ಇಂದು ಕೊಟ್ಟೂರು ಪಾದಯಾತ್ರೆ ಸರ್ವ ಭಕ್ತರ ಸಭೆ
ದಾವಣಗೆರೆಯ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ವತಿಯಿಂದ 46ನೇ ಕೊಟ್ಟೂರು ಪಾದಯಾತ್ರೆಯ ಸರ್ವ ಭಕ್ತರ ಸಭೆಯು ಇಂದು ಸಂಜೆ 5 ಗಂಟೆಗೆ ಶ್ರೀ ವಿರಕ್ತಮಠದ ಆವರಣದಲ್ಲಿ ನಡೆಯಲಿದೆ
ನಗರದಲ್ಲಿ ನಾಳೆ ಧ್ಯಾನ ಕಾರ್ಯಾಗಾರ
ಬ್ರಹ್ಮಶ್ರೀ ಪಿತಾಮಹಾ ಸುಭಾಷ್ ಪ್ರತೀಜಿಯವರ ದಿವ್ಯ ಪ್ರೇರಣೆಯೊಂದಿಗೆ ನಾಡಿದ್ದು ದಿನಾಂಕ 9 ರಂದು ಬೆಳಿಗ್ಗೆ 9.30 ರಿಂದ ಸಂಜೆ 5 ರವರೆಗೆ ನಗರದ ನಿಜಲಿಂಗಪ್ಪ ಬಡಾವಣೆಯ ಶ್ರೀ ನಿಮಿಷಾಂಬ ಸಮುದಾಯ ಭವನದಲ್ಲಿ ಧ್ಯಾನ ಕಾರ್ಯಾಗಾರ ನಡೆಯಲಿದೆ
ಇಂದಿನಿಂದ ಕೊಟ್ಟೂರೇಶ್ವರ ಸ್ವಾಮಿ ಪ್ರವಚನ
ಕೊಟ್ಟೂರು ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ವತಿಯಿಂದ ಭಕ್ತರು ಪಾದಯಾತ್ರೆ ಕೈಗೊಳ್ಳುವ ಮುನ್ನ ವಿರಕ್ತಮಠದ ಆವರಣದಲ್ಲಿ ಇಂದಿನಿಂದ ಇದೇ ದಿನಾಂಕ 17 ರವರೆಗೆ ಪ್ರತಿ ದಿನ ಸಂಜೆ 6 ರಿಂದ 8.30 ರವರೆಗೆ ಶ್ರೀ ಕೊಟ್ಟೂರು ಗುರು ಬಸವೇಶ್ವರರ ಪುರಾಣ-ಪ್ರವಚನ ಹಮ್ಮಿಕೊಳ್ಳಲಾಗಿದೆ
`ದಾವಣಗೆರೆ ಗೃಹಿಣಿ’ ಸ್ಪರ್ಧೆಗೆ ಆಹ್ವಾನ
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ 8 ಶನಿವಾರ, 9 ಭಾನುವಾರ ದಾವಣಗೆರೆ ಗೃಹಿಣಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಕೃಷಿ ಉತ್ಸವ ಮುಂದೂಡಿಕೆ
ಹಸಿರೋತ್ಸವ ಫೋರಮ್ನಿಂದ ಇದೇ ದಿನಾಂಕ 19ರಿಂದ 23ರವರೆಗೆ ನಿಗದಿಯಾಗಿದ್ದ ಕೃಷಿ ಉತ್ಸವವನ್ನು ಮುಂದೂಡಲಾಗಿದೆ.
ಇಂದು ಗುರುಕುಲ ವೈಭವ
ಗುರುಕುಲ ವಸತಿಯುತ ಶಾಲೆ ವತಿಯಿಂದ ಗುರುಕುಲ ವೈಭವ 2ಕೆ 25 -2025 ಕಾರ್ಯಕ್ರಮವನ್ನು ಹೈಸ್ಕೂಲ್ ಮೈದಾನದಲ್ಲಿ ಇಂದು ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಇಂದು `ಶಿವಗೋಷ್ಠಿ-315 ಹಾಗೂ ಸ್ಮರಣೆ-90′
ಶಿವಗೋಷ್ಠಿ ಸಮಿತಿ ಹಾಗೂ ಸಾದರ ನೌಕರರ ಬಳಗದ ವತಿಯಿಂದ ತರಳಬಾಳು ಬಡಾವಣೆಯ ಶಿವಕುಮಾರ ಸ್ವಾಮೀಜಿ ಮಹಾಮಂಟಪದಲ್ಲಿ ಫೆ.8ರ ಇಂದು ಸಂಜೆ 6.30ಕ್ಕೆ `ಶಿವಗೋಷ್ಠಿ-315 ಹಾಗೂ ಸ್ಮರಣೆ-90' ಮಾಸಿಕ ಕಾರ್ಯಕ್ರಮ ನಡೆಯಲಿದೆ.
ತುಮ್ಮಿನಕಟ್ಟೆಯಲ್ಲಿ ಇಂದು ಜಾತ್ರೋತ್ಸವ
ರಾಣೇಬೆನ್ನೂರು ತಾಲ್ಲೂಕು ತುಮ್ಮಿನಕಟ್ಟೆ ಗ್ರಾಮದ ಬೆಲ್ಲದ ಪತೇಯಲ್ಲಿರುವ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಇಂದು ನಡೆಯಲಿದೆ.
ಇಂದು `ಶ್ರೀಕ್ಷೇತ್ರ ಇಟಗಿಯ ಇತಿಹಾಸ’ ಪುಸ್ತಕ ಪರಿಚಯ
ನಗರದ ರಾಷ್ಟ್ರೋತ್ಥಾನ ಶಾಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಶ್ರೀ ಕ್ಷೇತ್ರ ಇಟಗಿಯ ಇತಿಹಾಸ ಪುಸ್ತಕ ಪರಿಚಯ ಕಾರ್ಯಕ್ರಮ ನಡೆಯಲಿದೆ.
ನಗರದ ಎ.ಆರ್.ಜಿ.ಕಾಲೇಜಿನಲ್ಲಿ ಇಂದು
ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವು ಇಂದು ಬೆಳಿಗ್ಗೆ 11 ಗಂಟೆಗೆ ಕಾಲೇಜು ಆವರಣದಲ್ಲಿರುವ ಡಾ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ನಡೆಯಲಿದೆ.
`ಅನ್ಲಾಕ್ ರಾಘವ’ ಚಿತ್ರ ಇಂದು ತೆರೆಗೆ
ದಾವಣಗೆರೆ ಜಿಲ್ಲೆಯ ಹೆಮ್ಮೆಯ ಪ್ರತಿಭೆ ಮಿಲಿಂದ್ ಗೌತಮ್ ಅಭಿನಯಿಸಿರುವ ಚಿತ್ರ `ಅನ್ಲಾಕ್ ರಾಘವ' ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಇಂದು ಬಿಡುಗಡೆಯಾಗುತ್ತಿದೆ.

ಹೆಣ್ಣುಮಕ್ಕಳ ಪರ ಧ್ವನಿಯಾಗಿದ್ದ ಉಮಾ ವೀರಭದ್ರಪ್ಪ ವಿಧಿವಶ
ಶೋಷಣೆಗೊಳಗಾದ ಹೆಣ್ಣು ಮಕ್ಕಳ ಪರ ಧ್ವನಿಯಾಗಿದ್ದ ಸಾಮಾಜಿಕ ಸೇವಾ ಕಾರ್ಯಕರ್ತರಾದ ಶ್ರೀಮತಿ ಉಮಾ ವೀರಭದ್ರಪ್ಪ ಅವರು ನಿನ್ನೆ ರಾತ್ರಿ 11.30ಕ್ಕೆ ನಿಧನರಾದರು.

ಜಗಳೂರು ತಾ. ಹುಚ್ಚಂಗಿಪುರ ಸರ್ಕಾರಿ ಹೈಟೆಕ್ ಶಾಲೆಗೆ 25 ಲಕ್ಷ ರೂ. ವಿಶೇಷ ಅನುದಾನ
ಜಗಳೂರು : ತಾಲ್ಲೂಕಿನ ಹುಚ್ಚಂಗಿಪುರ ಗ್ರಾಮದ ಹೈಟೆಕ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಆರಂಭಿಸಿ, ಮೇಲ್ದರ್ಜೆಗೇರಿಸಿ ಶಾಲೆ ಅಭಿವೃದ್ಧಿಗೆ 25 ಲಕ್ಷ ಅನುದಾನ ನೀಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರಾಜ್ಯ ಸಚಿವ ಮಧು ಬಂಗಾರಪ್ಪ ಘೋಷಿಸಿದರು.

ಉಕ್ಕಡಗಾತ್ರಿ – ಮಲೇಬೆನ್ನೂರು ಬಸ್ ಸಂಚಾರಕ್ಕೆ ಶಾಸಕ ಹರೀಶ್ ಚಾಲನೆ
ಮಲೇಬೆನ್ನೂರು : ಸರ್ಕಾರಿ ಬಸ್ ಸೌಲಭ್ಯ ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿತ್ತು. ಹೋಬಳಿ ಕೇಂದ್ರವಾದ ಮಲೇಬೆನ್ನೂರಿಗೆ ಜನಸಾಮಾನ್ಯರು ಒಂದಿಲ್ಲೊಂದು ಕೆಲಸ ಕಾರ್ಯಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಇದೆ

ಪಂ. ಪುಟ್ಟರಾಜ ಸೇವಾ ಸಮಿತಿಯಿಂದ ಪಂ. ಪಂಚಾಕ್ಷರಿ ಗವಾಯಿ ಜಯಂತ್ಯೋತ್ಸವ
ಗಾನಯೋಗಿ ಶಿವಯೋಗಿ ಸಂಗೀತ ಜಗದ್ಗುರು ಪಂಡಿತ ಪಂಚಾಕ್ಷರಿ ಗವಾಯಿಗಳವರ 133ನೇ ಜಯಂತೊತ್ಸವವನ್ನು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಅಂಗವಿಕಲರ ಆಶಾ ಕಿರಣ ಟ್ರಸ್ಟ್ ವಿಶೇಷ ಮಕ್ಕಳೊಂದಿಗೆ ಹಣ್ಣು ವಿತರಿಸುವ ಮೂಲಕ ಆಚರಿಸಲಾಯಿತು.

ವಾಲ್ಮೀಕಿ ಜಾತ್ರೆಗೆ ಸಜ್ಜಾದ ರಾಜನಹಳ್ಳಿ ಮಠ : ಸಿದ್ಧತೆ ಪರಿಶೀಲಿಸಿದ ಡಿಸಿ, ಎಸ್ಪಿ
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇಂದು ಮತ್ತು ನಾಳೆ7ನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವ ಜರುಗಲಿದ್ದು, ಅದಕ್ಕಾಗಿ ಗುರುಪೀಠ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

ದೊಡ್ಡೇರಿಯಲ್ಲಿ ಇಂದು ಜ್ಞಾನವಾಹಿನಿ ಸಂಸ್ಥೆಯ 25ನೇ ವರ್ಷದ ಸಂಭ್ರಮಾಚರಣೆ
ನ್ಯಾಮತಿ : ತಾಲ್ಲೂಕಿನ ದೊಡ್ಡೇರಿಯ ಜ್ಞಾನವಾಹಿನಿ ಶಾಲಾ ಸಂಸ್ಥೆಯು ಪ್ರಾರಂಭವಾಗಿ 25 ವರ್ಷಗಳಾದ ಪ್ರಯುಕ್ತ ಫೆ.8ರ ಶನಿವಾರ ಸಂಜೆ 4.30ಕ್ಕೆ ಜ್ಞಾನವಾಹಿನಿ ಕಲಾಮಂದಿರದಲ್ಲಿ 25ನೇ ವರ್ಷದ ಸಂಭ್ರಮಾಚರಣೆ ನಡೆಯಲಿದೆ

ಹರಿಹರದಿಂದ ರಾಣೇಬೆನ್ನೂರಿಗೆ ಸಿದ್ದಾರೂಢರ ಜ್ಯೋತಿ ರಥಯಾತ್ರೆ
ಸಿದ್ದಾರೂಢರ ಕಥಾ ಮೃತದ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಜ್ಯೋತಿ ರಥ ಯಾತ್ರೆಯು ನಾಳೆ ಭಾನುವಾರ ರಾಣೇಬೆನ್ನೂರು ತಾಲ್ಲೂಕಿಗೆ ಆಗಮಿಸಲಿದ್ದು, ಸಿದ್ದಾರೂಢ ಸ್ವಾಮಿಯ ಭಕ್ತರು ಭಾಗವಹಿಸುವಂತೆ ಧರ್ಮದರ್ಶಿ ಸಿದ್ದನಗೌಡ ಮನವಿ ಮಾಡಿದ್ದಾರೆ.

12ಕ್ಕೆ ಹರಿಹರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ
ಹರಿಹರ ಕ್ಷೇತ್ರ ಪಾಲಕ ಹರಿಹರೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ಇದೇ ದಿನಾಂಕ 12ಕ್ಕೆ ಜರುಗಲಿದ್ದು, ರಥೋತ್ಸವ ನಿಮಿತ್ಯ ಈಗಾಗಲೇ ವಿವಿಧ ಪೂಜಾ ಪದ್ಧತಿಗಳು ಆರಂಭವಾಗಿವೆ.

ಸೈಕಲ್ ಸಂಚಾರಿ ರಮೇಶ್ ಪೂಜಾಗೆ ಸನ್ಮಾನ
ಬೆಳಗಾವಿ ಜಿಲ್ಲೆ ಸಂಕೇಶ್ವರ ಪಟ್ಟಣದಿಂದ ಕಡೂರಿನ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಸೈಕಲ್ ಮೂಲಕ ಏಕಾಂಗಿಯಾಗಿ ಪ್ರಯಾಣಿಸಿ, ಹಿಂದಿರುತ್ತಿದ್ದ ರಮೇಶ್ ಪೂಜಾ ಅವರಿಗೆ ನಗರದಲ್ಲಿ ಎಸ್.ಎಸ್ ಫಿಟ್ನೆಸ್ ಯೋಗ ಮತ್ತು ಸ್ಪೋರ್ಟ್ಸ್ ಸೆಂಟರ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ವಾಲ್ಮೀಕಿ ಜಾತ್ರೆ ಯಶಸ್ವಿಗೆ ಹರಪನಹಳ್ಳಿ ತಾ. ಸಮಾಜ ಕರೆ
7ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸ ವವು ಇಂದು ಮತ್ತು ನಾಳೆ ನಡೆಯ ಲಿದೆ ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ವೈ.ಡಿ. ಅಣ್ಣಪ್ಪ ಹಾಗೂ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಹಿರೇಮೇ ಗಳಗೆರೆ ಲಕ್ಕಳ್ಳಿ ಹನುಮಂತಪ್ಪ ತಿಳಿಸಿದ್ದಾರೆ.

ನಗರದ ಎಸ್ಬಿಸಿ ಕಾಲೇಜ್ನಲ್ಲಿ ಇಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿಂದ ಉಪನ್ಯಾಸ
ಎಸ್ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಅಥಣಿ ಸ್ನಾತಕೋತ್ತರ ಕೇಂದ್ರ, ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ.

ವಾಲ್ಮೀಕಿ ಜಾತ್ರೆ : ಮುಖಂಡರ ಶುಭಾಶಯ
ರಾಜನಹಳ್ಳಿ ವಾಲ್ಮೀಕಿ ಶ್ರೀಮಠದಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಗೆ ಕಾಂಗ್ರೆಸ್ ಮುಖಂಡರು ಶುಭ ಕೋರಿ ಕಾರ್ಯ ಕ್ರಮಗಳು ಯಶಸ್ವಿಯಾಗಲೆಂದು ಹಾರೈಸಿ, ಶ್ರೀಗಳ ಆಶೀರ್ವಾದ ಪಡೆದರು.

ಐರಣಿ ಹೊಳೆಮಠದಲ್ಲಿ ನಾಳೆಯಿಂದ ಮೂರು ದಿನ ನೂತನ ಸಿದ್ಧಾರೂಢ ಶ್ರೀಗಳ ಪಟ್ಟಾಭಿಷೇಕ ಕಾರ್ಯಕ್ರಮ
ರಾಣೇಬೆನ್ನೂರು : ನಾಡಿದ್ದು ದಿನಾಂಕ 8 ರಿಂದ 10 ರವರೆಗೆ ತಾಲ್ಲೂಕಿನ ಐರಣಿ ಹೊಳೆಮಠದ ನೂತನ ಸ್ವಾಮೀಜಿ ಪಟ್ಟಾಭಿಷೇಕ, ತುಲಾಭಾರ, ಧರ್ಮಸಭೆ ಸಮಾರಂಭವು ನಾಡಿನ ಹರ, ಗುರು, ಚರ ಮೂರ್ತಿಗಳ ಸಾನ್ನಿಧ್ಯ ಹಾಗೂ ಗಣ್ಯರ ಭಾಗವಹಿಸುವಿಕೆಯಲ್ಲಿ ನಡೆಯಲಿದೆ.

ರಾಣೇಬೆನ್ನೂರಿನಲ್ಲಿ ಮೂರು ದಿನ ಕರ್ನಾಟಕ ವೈಭವ ವೈಚಾರಿಕ ಹಬ್ಬ
ಇಲ್ಲಿನ ಬಸ್ ನಿಲ್ದಾಣದ ಎದುರಿನ ರಾಜರಾಜೇಶ್ವರಿ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ವೈಭವ ವೈಚಾರಿಕ ಹಬ್ಬ ಸಮಾರಂಭವನ್ನು ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದೆ

ಶಿಕ್ಷಕರು ಮಕ್ಕಳಲ್ಲಿ ಮನೋಬಲ ಹೆಚ್ಚಿಸಬೇಕು
ಹರಿಹರ : ಅಪ್ರಾಪ್ತ ಮಕ್ಕಳನ್ನು ಮದುವೆ ಮಾಡಲು ಮುಂದಾಗುತ್ತಿರುವುದನ್ನು ಹಾಗೂ ಅವರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಯಲು ಶಾಲೆಯಲ್ಲಿ, ಮಕ್ಕಳಿಗೆ ಶಿಕ್ಷಕರು ಮನೋಬಲ ಹೆಚ್ಚಿಸಲು ಮುಂದಾಗಬೇಕೆಂದು ಎಂ. ಅಪರ್ಣ ಕೊಳ್ಳ ಹೇಳಿದರು.

ಜ್ಞಾನ ಭಂಡಾರ ಮಾಸ್ಟರ್ ಆರ್ಯವರ್ಧನ್ ಕೋಟಿ
ವಿದ್ಯೆ ಸಾಧಕನ ಸೊತ್ತೇ ಹೊರತು ಸೋಮಾರಿಗಳದ್ದಲ್ಲ, ಹಣವಂತರದ್ದೂ ಅಲ್ಲ ಎಂಬ ಮಾತಿಗೆ 4 ವರ್ಷದ ಬಾಲ ಪ್ರತಿಭೆ ಗ್ರ್ಯಾಂಡ್ ಮಾ. ಆರ್ಯವರ್ಧನ್ ಕೋಟಿ ಸಾಕ್ಷಿಯಾಗಿದ್ದಾರೆ.

ನಾಳಿನ ವಾಲ್ಮೀಕಿ ಜಾತ್ರೆಗೆ ಭರದಿಂದ ಸಾಗಿರುವ ಸಿದ್ಧತೆ : ಶ್ರೀಗಳಿಂದ ಪರಿಶೀಲನೆ
ಮಲೇಬೆನ್ನೂರು : ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಾಡಿದ್ದು ದಿನಾಂಕ 8 ಮತ್ತು 9 ರಂದು ಜರುಗಲಿರುವ 7 ನೇ ವರ್ಷದ ವಾಲ್ಮೀಕಿ ಜಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಶ್ರೀಗಳೇ ಖುದ್ದು ನಿಂತು ಸಿದ್ಧತೆಗಳಿಗೆ ಅಂತಿಮ ರೂಪ ನೀಡಲು ನಿರ್ದೇಶನ ನೀಡುತ್ತಿದ್ದಾರೆ.

ದಾವಣಗೆರೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ ಲಿಂಗರಾಜ್ ವಾಲಿ
ಈಚೆಗೆ ನಡೆದ ದಾವಣಗೆರೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ ಅಧ್ಯಕ್ಷರಾಗಿ ಲಿಂಗರಾಜ್ ವಾಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಲೇಬೆನ್ನೂರಿನಲ್ಲಿ ವೈಭವದ ಉರುಸ್, ಖವ್ವಾಲಿ ನೋಡಲು ಜನಸಾಗರ
ಮಲೇಬೆನ್ನೂರು : ಸೌಹಾರ್ದತೆ ಸಾರುವ ಪಟ್ಟಣದ ಪ್ರಸಿದ್ಧ ಸೂಫಿ ಸಂತ ಹಜರತ್ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ಗಂಧ ಮತ್ತು ಉರುಸು ಅಂಗವಾಗಿ ಗುರುವಾರ ರಾತ್ರಿ ದರ್ಗಾ ಆವರಣದಲ್ಲಿ ಹಮ್ಮಿಕೊಂಡಿದ್ದ ಖವ್ವಾಲಿ ಕಾರ್ಯಕ್ರಮವನ್ನು ನೋಡಲು ಜನ ಸಾಗರವೇ ಹರಿದು ಬಂದಿತ್ತು.

ಸಿಂಗ್ರಿಹಳ್ಳಿಯಲ್ಲಿ ಸವಿತಾ ಮಹರ್ಷಿ ಜಯಂತಿ
ಹರಪನಹಳ್ಳಿ : ತಾಲ್ಲೂಕಿನ ಸಿಂಗ್ರಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಗವಾನ್ ಸವಿತಾ ಮಹರ್ಷಿ ಜಯಂತಿ ಆಚರಿಸಲಾಯಿತು.

ಶ್ರೀ ಅಕ್ಕಮಹಾದೇವಿ ವಧು-ವರಾನ್ವೇಷಣಾ ಕೇಂದ್ರದ ರಜತೋತ್ಸವ : ಸಮಾವೇಶ
ನಗರದ ಪಿ.ಜೆ. ಬಡಾವಣೆಯಲ್ಲಿರುವ ಶ್ರೀ ಅಕ್ಕಮಹಾದೇವಿ ವಧು-ವರಾನ್ವೇಷಣಾ ಕೇಂದ್ರದ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ವಧು-ವರಾನ್ವೇಷಣೆ ಸಮಾವೇಶವು ನಾಡಿದ್ದು ದಿನಾಂಕ 8ರ ಶನಿವಾರ ಶ್ರೀಮತಿ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಜಗತ್ತಿನಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಕನ್ನಡವೂ ಒಂದು
ಹರಪನಹಳ್ಳಿ : ಜಗತ್ತಿನಲ್ಲಿ ಹೆಚ್ಚು ಜನರು ಮಾತನಾಡುವ ಭಾಷೆಗಳಲ್ಲಿ ಕನ್ನಡವು ಪ್ರಮುಖವಾದುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಲೇಪಾಕ್ಷಪ್ಪ ಹೇಳಿದರು.

ಕೋರ್ಟ್ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ : ಸೆೇೇರೆ ಹಿಡಿದ ಪಾಲಿಕೆ ಸಿಬ್ಬಂದಿ
ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ಪಾಲಿಕೆ ಸಿಬ್ಬಂದಿ ಓಬಳಾನಾಯ್ಕ ಮತ್ತು ಶ್ರೀನಿವಾಸ ಅವರ ತಂಡದವರು ಆರು ಬೀದಿ ನಾಯಿಗಳನ್ನು ಬಲೆ ಬೀಸಿ ಸೆರೆ ಹಿಡಿದಿದ್ದಾರೆ.

ಶ್ರೀಶೈಲ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾಗಿ ವೆಂಕಟರೆಡ್ಡಿ, ಉಪಾಧ್ಯಕ್ಷರಾಗಿ ಪ್ರಕಾಶ್
ನಗರದ ಪ್ರತಿಷ್ಠಿತ ಕೋ-ಆಪ ರೇಟಿವ್ ಸೊಸೈಟಿಗಳಲ್ಲೊಂ ದಾದ ಶ್ರೀ ಶ್ರೀಶೈಲ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಯ ಅಧ್ಯಕ್ಷ ರಾಗಿ ಸಂಘದ ಹಾಲಿ ಅಧ್ಯಕ್ಷ ಆರ್. ವೆಂಕಟರೆಡ್ಡಿ, ಉಪಾಧ್ಯಕ್ಷರಾಗಿ ಸಂಘದ ಹಾಲಿ ಉಪಾಧ್ಯಕ್ಷ ವಿ. ಪ್ರಕಾಶ್ ಅವರುಗಳು ಮತ್ತೊಂದು ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

22ಕ್ಕೆ ಗುರು ಕೊಟ್ಟೂರೇಶ್ವರ ಮಹಾ ರಥೋತ್ಸವ
ಕೊಟ್ಟೂರು : ಇಲ್ಲಿನ ಕೊಟ್ಟೂರೇಶ್ವರ ಸ್ವಾಮಿಯ ಮಹಾ ರಥೋತ್ಸವವು ಇದೇ ದಿನಾಂಕ 22ರಂದು ನಡೆಯಲಿದ್ದು, ಪಾದಯಾತ್ರೆ ಮೂಲಕ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಬೇಕೆಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮಿರಾಜನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.

ಐಸಿಟಿ ಕಾಮಗಾರಿಗಳನ್ನು ಪರಿಶೀಲಿಸಿದ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಹುಲ್ಲುಮನೆ
ಸ್ಮಾರ್ಟ್ ಸಿಟಿ ವತಿಯಿಂದ ಅನುಷ್ಠಾನಗೊಳಿಸಿರುವ ಐಸಿಟಿ ಕಾಮಗಾರಿಗಳ ಪರಿಶೀಲನೆಯನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಲುಮನೆ ಗಣೇಶ್ ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ಹೊನ್ನಾಳಿಯಲ್ಲಿ ಇಡಗುಂಜಿ ಗಣಪತಿ ದೇವಸ್ಥಾನ ಉದ್ಘಾಟನೆ
ಹೊನ್ನಾಳಿ : ಪಟ್ಟಣದ ಬಾಲರಾಜ ಘಾಟನಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಂಘದಿಂದ ಇಡಗುಂಜಿ ಮಹಾ ಗಣಪತಿ ಮೂರ್ತಿ ಪ್ರಾಣ ಪ್ರತಿಷ್ಟಾಪನೆಯನ್ನು ಮಂಜುನಾಥ ದೇವರು ಹಿರೇಕಲ್ಮಠ ಇವರ ಸಾನಿಧ್ಯದಲ್ಲಿ ನೆರವೇರಿಸಲಾಯಿತು.

22ಕ್ಕೆ ಸರ್.ಎಂ.ವಿ ವೈಭವ
ನಗರದ ಬಿ.ಜೆ.ಎಂ. ಸ್ಕೂಲ್ ಮತ್ತು ಜಿ.ಎನ್.ಬಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆವರಣದಲ್ಲಿ ನಾಡಿದ್ದು ದಿನಾಂಕ 7ರ ಶುಕ್ರವಾರ ಸಂಜೆ 5 ಗಂಟೆಗೆ ಶಾಲಾ ವಾರ್ಷಿಕೋತ್ಸವ `ಅರಿವಿನ ಉತ್ಸವ' ಕಾರ್ಯಕ್ರಮ ನಡೆಯಲಿದೆ.

ಶಿವ ಸೊಸೈಟಿ ಚುನಾವಣೆ : 9 ಕ್ಷೇತ್ರದಲ್ಲಿ ಅವಿರೋಧ ಆಯ್ಕೆ, 6 ಕ್ಷೇತ್ರಕ್ಕೆ ಚುನಾವಣೆ
ಹೊನ್ನಾಳಿ : ಶಿವ-ಕೋ ಸೊಸೈಟಿಯ 15 ಕ್ಷೇತ್ರಗಳಲ್ಲಿ 9 ನಿರ್ದೇಶಕರ ಅವಿರೋಧ ಆಯ್ಕೆ ಮಾಡುವಲ್ಲಿ ಸಾದು ಸಮಾಜದ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕು ಅಧ್ಯಕ್ಷರು ಹಾಗೂ ಮುಖಂಡರ ನೇತೃತ್ವದ ಸಭೆಯು ಯಶಸ್ವಿಯಾಗಿದೆ.

22ಕ್ಕೆ ಸರ್.ಎಂ.ವಿ ವೈಭವ
ಹರಪನಹಳ್ಳಿ : ತಾಲ್ಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆಸದಿರುವುದನ್ನು ಖಂಡಿಸಿ ವಿವಿಧ ಇಲಾಖೆಯ ಸರ್ಕಾರಿ ನೌಕರರು ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿಯಿ ರುವ ಸಂಘದ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದರು.

ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಚದುರಂಗ ಆಟ ಸಹಕಾರಿ
ಮಕ್ಕಳಲ್ಲಿ ಚಾಣಾಕ್ಷತೆ ಹಾಗೂ ತಾಳ್ಮೆಯ ಮನೋ ಭಾವ ಬೆಳೆಯಲು ಚದುರಂಗ ಆಟ ಸಹಕಾರಿ ಎಂದು ಲಯನ್ಸ್ ಅಧ್ಯಕ್ಷ ಎಸ್.ಜಿ. ಉಳುವಯ್ಯ ಹೇಳಿದರು.

ಆವರಗೆರೆ : ಶ್ರೀ ಬಾಲ ಶನೇಶ್ವರಸ್ವಾಮಿ ಮಹಾಕ್ಷೇತ್ರದಲ್ಲಿ 3ನೇ ವಾರ್ಷಿಕೋತ್ಸವ
ಆವರಗೆರೆಯ (ಶ್ರೀ ಮಹಾಲಕ್ಷ್ಮೀ ಲೇ ಔಟ್ ಪಕ್ಕ) ಎತ್ತಿನ ಸಂತೆ ಹಿಂಭಾಗ ದಲ್ಲಿ ಶ್ರೀ ಗುರು ಬಾಲ ಶನೇಶ್ವರ ಸ್ವಾಮಿ ಮಹಾಕ್ಷೇತ್ರದಲ್ಲಿ 3ನೇ ವರ್ಷದ ವಾರ್ಷಿಕೋತ್ಸವ ಕಾರ್ಯ ಕ್ರಮವನ್ನು ನಾಡಿದ್ದು ದಿನಾಂಕ 7 ಮತ್ತು 8ರಂದು ಏರ್ಪಡಿಸಲಾಗಿದೆ.

33ನೇ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮಹಾನಗರ ಪಾಲಿಕೆಯ 15ನೇ ಹಣಕಾಸಿನ ಅನುದಾನದಲ್ಲಿ 33ನೇ ವಾರ್ಡಿನಲ್ಲಿ 55 ಲಕ್ಷದ ಅನುದಾನದಲ್ಲಿ ಜಯ ನಗರ `ಎ' ಬ್ಲಾಕ್ ನಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಗೆ 33ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಚಾಲನೆ ನೀಡಿದರು.