ಹರಿಹರದಲ್ಲಿ ಲಾಕ್ಡೌನ್ ನಿರ್ಧಾರಕ್ಕೆ ಕೆಲ ವ್ಯಾಪಾರಸ್ಥರು ಮನ್ನಣೆ ನೀಡದೇ ಇರುವ ಕಾರಣ ಎಲ್ಲರಲ್ಲೂ ಗೊಂದಲ ಮನೆ ಮಾಡಿದೆ.
ಕೆಮ್ಮು, ನೆಗಡಿ, ಜ್ವರ ಬಂದರೆ ಕೊರೊನಾ ಬಂದಂತೇನಾ ?
ಜಗಳೂರು ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯತೆಗೆ ತರಾಟೆ.
ಕಾಶಿ ಮಠದಲ್ಲಿ ಕೊರೊನಾ ವಾರಿಯರ್ಸ್ಗೆ ಸನ್ಮಾನ
ಹರಪನಹಳ್ಳಿ : ಮಾನವೀಯತೆ ತೋರಿದ ಅಭಿನವ ಭಾರತೀಯ ಸಂಘಟಕರ ಸೇವೆ ಶ್ಲ್ಯಾಘನೀಯ
ಆಟೋ, ಟ್ಯಾಕ್ಸಿ ಚಾಲಕರ ಕಲ್ಯಾಣಕ್ಕೆ ಒತ್ತು ನೀಡಬೇಕು
ರಾಜ್ಯ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಸರ್ಕಾರಕ್ಕೆ ಆಗ್ರಹ
ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭ
ಕೊರೊನಾ ಸಾಮಾಜಿಕ ಅಂತರದ ನಡುವೆ ಪಿ.ಯು.ಸಿ. ಇಂಗ್ಲಿಷ್ ಪರೀಕ್ಷೆಗೆ ಹೋಲಿಸಿದರೆ, ಎಸ್ಸೆಸ್ಸೆಲ್ಸಿಯ ಮೊದಲ ದಿನದ ಇಂಗ್ಲಿಷ್ ಪರೀಕ್ಷೆ ಹೆಚ್ಚು ಶಿಸ್ತು ಬದ್ಧ ಹಾಗೂ ವ್ಯವಸ್ಥಿತವಾಗಿತ್ತು.
ನಿವೃತ್ತ ಇಂಜಿನಿಯರ್ ನಿವೃತ್ತಿ ಹಣ ಹೂಡಿಕೆ : ಲಾಭ ನೀಡುವುದಾಗಿ ವಂಚನೆ
ಲಾಭ ನೀಡುವುದಾಗಿ ನಂಬಿಸಿ ತಾವು ದುಡಿದ ಮತ್ತು ನಿವೃತ್ತಿಯ ಹಣವನ್ನು ಹೂಡಿಕೆ ಮಾಡಿಸಿಕೊಂಡು 21. 50 ಲಕ್ಷ ರೂ. ವಂಚಿಸಿರುವುದಾಗಿ ನಿವೃತ್ತ ಸಹಾಯಕ ಇಂಜಿನಿಯರ್ ಕೆ.ಎಂ. ಮುರುಗೇಂದ್ರಯ್ಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಗ್ಯ ಕಾರ್ಯಕರ್ತೆ ಸೇರಿ ಏಳು ಜನರಿಗೆ ಪಾಸಿಟಿವ್
ದಾವಣಗೆರೆ ನಗರದಲ್ಲಿ ಮೂರು, ಹೊನ್ನಾಳಿಯ ಕ್ಯಾಸಿನಕೆರೆಯಲ್ಲಿ ಎರಡು, ದಾವಣಗೆರೆ ತಾಲ್ಲೂಕಿನ ಮಾಗಾನಹಳ್ಳಿಯಲ್ಲಿ ಒಂದು ಪ್ರಕರಣ ಗಳು ದೃಢಪಟ್ಟಿವೆ. ಸೋಂಕು ದೃಢಪಟ್ಟಿರುವವರಲ್ಲಿ ಮಾಗಾನಹಳ್ಳಿಯ ಆರೋಗ್ಯ ಕಾರ್ಯಕರ್ತೆ ಸಹ ಸೇರಿದ್ದಾರೆ.
ಹರಪನಹಳ್ಳಿ: ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬರೆಸಿದ ಅಧಿಕಾರಿಗಳು
ಹರಪನಹಳ್ಳಿ : ತಾಲ್ಲೂಕಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು 13 ಪರೀಕ್ಷಾ ಕೇಂದ್ರಗಳಿಂದ 3788 ವಿದ್ಯಾ ರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಅದರಲ್ಲಿ 115 ಗೈರಾಗಿ, 3673 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಜಗಳೂರಿನಲ್ಲಿ ಇಂದು ಉರುಸ್
ಜಗಳೂರು ಪಟ್ಟಣದ ಪ್ರಸಿದ್ಧ ಹಜರತ್ ಸೈಯದ್ ಚಮನ್ ಷಾವಲಿ ಚಿಶ್ತಿ ಅವರ 113ನೇ ಉರುಸ್ ನಡೆಯಲಿದೆ. ಇಂದು ಸಂಜೆ ಸಂದಲ್ ಅರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಲಿದೆ.
ಪಾಲಿಕ್ಲಿನಿಕ್ ಲೈಸನ್ಸ್ ರದ್ದುಪಡಿಸಿ : ಸ್ಥಳೀಯರ ಸಮಸ್ಯೆ ಪರಿಹರಿಸಿ
ನಗರದ ಪಿ.ಜೆ ಬಡಾವಣೆಯ 7ನೇ ಮುಖ್ಯರಸ್ತೆಯಲ್ಲಿ 6ಕ್ಕೂ ಅಧಿಕ ಪಾಲಿ ಕ್ಲಿನಿಕ್ಗಳು ಹಾಗೂ ಹೊಸದಾಗಿ 1 ನರ್ಸಿಂಗ್ ಹೋಮ್ ಪ್ರಾರಂಭವಾಗಿದ್ದರಿಂದ ಇಲ್ಲಿಗೆ ಬರುವ ವಾಹನಗಳಿಂದ ತೀವ್ರತರದ ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಕ್ಕುವಾಡ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12 ಜನ ನಿರ್ದೇಶಕರು ಅವಿರೋಧ ಆಯ್ಕೆ
ತಾಲ್ಲೂಕಿನ ಕುಕ್ಕವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದಲ್ಲಿ ನಾಳೆ ಜಿಲ್ಲಾ ಕಾಂಗ್ರೆಸ್ ಪೂರ್ವಭಾವಿ ಸಭೆ
ಇದೇ 21ರಂದು ನಡೆಯುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾಂಗ್ರೆಸ್ ಪಕ್ಷದ ಬೃಹತ್ ಸಭೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೂರ್ವಭಾವಿ ಸಭೆಯನ್ನು 16ರ ಗುರುವಾರ 12 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಎಸ್.ಎಸ್.ಭವನದಲ್ಲಿ ಕರೆಯಲಾಗಿದೆ.
ಅಂಬಿಗರ ಚೌಡಯ್ಯ ಗುರುಪೀಠಕ್ಕೆ ಕಾಡಜ್ಜಿಯಿಂದ 1 ಕ್ವಿಂಟಾಲ್ ಅಕ್ಕಿ ವಿತರಣೆ
ನಾಳೆ ದಿನಾಂಕ 15 ರಿಂದ ಜರುಗಲಿರುವ ಅಂಬಿಗರ ಶರಣ ಸಂಸ್ಕೃತಿ ಉತ್ಸವ-2025 ಮತ್ತು ವಚನ ಗ್ರಂಥ ಮಹಾರಥೋತ್ಸವ ಸಮಾರಂಭಕ್ಕೆ ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಗ್ರಾಮದಿಂದ 1 ಕ್ವಿಂಟಾಲ್ ಅಕ್ಕಿ ಮತ್ತು 10 ಸಾವಿರ ರೂ.ಗಳನ್ನು ಗ್ರಾಮಸ್ಥರು ಕಳುಹಿಸಿಕೊಟ್ಟರು.
ಅಫಿಲಿಯೇಷನ್, ಪರೀಕ್ಷಾ ಶುಲ್ಕದ ಮೇಲೆ ಸರ್ಕಾರದ ಕಣ್ಣು
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಉಳಿಕೆಯಾಗಿರುವ ಹೆಚ್ಚುವರಿ 600 ಕೋಟಿ ಹಣವನ್ನು ಹಿಂಪಡೆಯಲು ಮುಂದಾಗಿರುವ ಸರ್ಕಾರದ ನಡೆಯನ್ನು ಎಐಡಿಎಸ್ಓ ಖಂಡಿಸಿದೆ.
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಾಮನೂರು ಟಿ. ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ನಾಡಿದ್ದು ದಿನಾಂಕ 16 ರಂದು ಬೆಳಿಗ್ಗೆ 11.30ಕ್ಕೆ ಜಿ.ಪಂ.ನಲ್ಲಿ ನಡೆಯಲಿದೆ.
ಜಿಲ್ಲಾ ಸಹಕಾರ ಒಕ್ಕೂಟದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ
ಜಿಲ್ಲಾ ಸಹಕಾರ ಒಕ್ಕೂಟದ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
19 ರಂದು ಸರ್ಕಾರಿ ನಿವೃತ್ತ ನೌಕರರ ಕ್ರೀಡಾಕೂಟ
ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಗಣರಾಜ್ಯೋತ್ಸವದ ಪ್ರಯುಕ್ತ ಇದೇ ದಿನಾಂಕ 19 ರಂದು ಬೆಳಿಗ್ಗೆ 9 ಗಂಟೆಗೆ ಎಂ.ಸಿ.ಸಿ. `ಬಿ' ಬ್ಲಾಕ್ ನಲ್ಲಿರುವ ಬಾಪೂಜಿ ಪ್ರೌಢ ಶಾಲಾ ಮೈದಾನದಲ್ಲಿ ಸರ್ಕಾರಿ ನಿವೃತ್ತ ನೌಕರರಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ
ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ಒತ್ತಾಯ
ಜಿಲ್ಲೆಯ ಕೆರೆಗಳ ಅಭಿವೃದ್ಧಿ ಹಾಗೂ ಕೆರೆಗಳನ್ನು ಹೆಚ್ಚು ಮಾಡುವಂತೆ ಆಗ್ರಹಿಸಿ ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನ ಒಕ್ಕೂಟ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ 1500 ರಿಂದ 2000 ಕೆರೆಗಳಿವೆ
ಇಂದು ನಗರದ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಎಸ್ಸಿ, ಎಸ್ಪಿ ಯೋಜನೆಯಡಿ ಹಾಗೂ ರಾಜ್ಯ ಶೈಕ್ಷಣಿಕ ಪ್ರವಾಸ ಕರ್ನಾಟಕ ದರ್ಶನ ಕಾರ್ಯಕ್ರಮದಡಿ ಎಸ್ಟಿ, ಎಸ್ಟಿ ವಿದ್ಯಾರ್ಥಿಗಳಿಗೆ ರಾಜ್ಯದ ವಿವಿಧ ಸ್ಥಳಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಗುವುದು.
ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ಇಂದು ಸೂರ್ಯ ನಮಸ್ಕಾರ
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ಇಂದು ಬೆಳಿಗ್ಗೆ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಲಿದೆ.
ಚಿತ್ರದುರ್ಗ ಬೃಹನ್ಮಠದಲ್ಲಿ ಇಂದು
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶ್ರೀ ಮುರಿಗಿ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಆವ ರಣದಲ್ಲಿ ಇಂದು ಬೆಳಿಗ್ಗೆ 8.30 ಕ್ಕೆ ಶ್ರೀ ಶಿವಯೋಗಿ ಸಿದ್ದರಾಮರ ಜಯಂತಿ ಆಚರಿಸಲಾಗುವುದು.
ಮಲೇಬೆನ್ನೂರಿನಲ್ಲಿ ಇಂದು ಆರೋಗ್ಯ ಮೇಳ
ಶ್ರೀ ಭದ್ರಕಾಳಿ ಸಮೇತ ವೀರ ಭದ್ರೇಶ್ವರ ದೇವಸ್ಥಾನದಲ್ಲಿ ಇಂದು ಸಂಕ್ರಾಂತಿಯ ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಕಾನೂನು ಪದವೀಧರರಿಗೆ ತರಬೇತಿ
ಹಿಂದುಳಿದ ವರ್ಗಗಳಿಗೆ ಸೇರಿದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ ಭತ್ಯೆ ನೀಡಲು ಅರ್ಹ ಕಾನೂನು ಪದವೀಧರ ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಹಿಳೆಯರಿಗೆ ಉಚಿತ ಕೈ ಕಸೂತಿ ತರಬೇತಿ
ಭಾರತ ವಿಕಾಸ ಪರಿಷತ್ ಗೌತಮ ಶಾಖೆ ದಾವಣಗೆರೆ ವತಿಯಿಂದ ಇಲ್ಲಿನ ವಿದ್ಯಾನಗರದಲ್ಲಿ ಮಹಿಳೆಯರಿಗೆ ಉಚಿತ ಕೈ ಕಸೂತಿ ತರಬೇತಿ ಅರ್ಜಿ ಆಹ್ವಾನಿಸಲಾಗಿದೆ.
ಎಕ್ಕೆಗೊಂದಿ : ಇಂದು ಆರೋಗ್ಯ ಶಿಬಿರ, ಸಿದ್ಧರಾಮೇಶ್ವರ ಉತ್ಸವ
ಶ್ರೀ ನಂದಿ ಸೌಹಾರ್ದ ಸಹಕಾರಿ ಸಂಘ (ಮಲೇಬೆನ್ನೂರು) ಮತ್ತು ಎಸ್.ಎಸ್.ಕೇರ್ ಟ್ರಸ್ಟ್ (ದಾವಣಗೆರೆ) ಇವರುಗಳ ಆಶ್ರಯದಲ್ಲಿ ಇಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸಂಶೋಧನೆ ಹೆಸರಲ್ಲಿ ಮಗುವಿಗೆ ಹಾನಿ: ಬೇಸತ್ತ ತಂದೆ ದಯಾಮರಣಕ್ಕೆ ಅರ್ಜಿ
ಪತ್ನಿ 8 ತಿಂಗಳ ಗರ್ಭಿಣಿಯಾಗಿದ್ದಾಗ ಆಸ್ಪತ್ರೆಗೆ ತೆರಳಿದ್ದಾಗ ಯಾವುದೇ ಮಾಹಿತಿ ನೀಡದೆ ಸಂಶೋಧನೆ ನಡೆಸುವ ನೆಪದಲ್ಲಿ ಮಗಳಿಗೆ ತೊಂದರೆ ಮಾಡಿದ್ದಾರೆ. ಇದರಿಂದಾಗಿ 1 ವರ್ಷದ ನನ್ನ ಹೆಣ್ಣು ಮಗು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದೆ
ನಗರದಲ್ಲಿ ಇಂದು ಚಿಂತನಾ ಗೋಷ್ಠಿ
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಲ್ಲಿ ಇಂದು ಸಂಜೆ 7 ರಿಂದ 9ರವ ರೆಗೆ ಆನ್ಲೈನ್ನಲ್ಲಿ ಶರಣ ಚಿಂತನ ಗೋಷ್ಠಿ ಕಾರ್ಯಕ್ರಮ ನಡೆಯಲಿದೆ
ವೃತ್ತಿ ರಂಗನಾಟಕ ರಚನಾ ಶಿಬಿರಕ್ಕೆ ಅರ್ಜಿ ಆಹ್ವಾನ
ಕರ್ನಾಟಕ ನಾಟಕ ಅಕಾಡೆಮಿ ಹಾಗೂ ವೃತ್ತಿ ರಂಗಭೂಮಿ ರಂಗಾಯಣದ ಸಹಯೋಗದಲ್ಲಿ 5 ದಿನಗಳ ಕಾಲ ನಡೆಯುವ ರಾಜ್ಯಮಟ್ಟದ `ವೃತ್ತಿ ರಂಗ ನಾಟಕ ರಚನಾ ಶಿಬಿರ'ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ನಾಳೆಯಿಂದ ಎಸ್ಎಸ್ವೈ ತರಬೇತಿ ಶಿಬಿರ
ನಗರದ ರಾಂ ಅಂಡ್ ಕೋ ವೃತ್ತದಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 15ರಿಂದ ಸಿದ್ಧ ಸಮಾಧಿ ಯೋಗ (ಎಸ್ಎಸ್ವೈ) ತರಬೇತಿ ಶಿಬಿರ ನಡೆಯಲಿದೆ
ಆಕಳ ಕೆಚ್ಚಲು ಕೊಯ್ದ ದುಷ್ಕೃತ್ಯ ಖಂಡಿಸಿ ಇಂದು ನಗರದಲ್ಲಿ ಬಿಜೆಪಿ ಪ್ರತಿಭಟನೆ
`ಹಸುಗಳ' ಕೆಚ್ಚಲನ್ನು ದುಷ್ಕರ್ಮಿಗಳು ಕೊಯ್ದು ಪೈಶಾಚಿಕ ಕೃತ್ಯವನ್ನು ಖಂಡಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಗೋವುಗಳೊಂದಿಗೆ ಬೃಹತ್ ಪ್ರತಿಭಟನೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ಡಾ. ಎಂ.ಸಿ. ಮೋದಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ
ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಕ್ಕೆ ಹರಾಜು
ದೇವನಗರಿ ಕ್ರೀಡಾ ಸಮಿತಿ, ಎಸ್.ಎಸ್. ಮಲ್ಲಿಕಾರ್ಜುನ್, ಮಣಿ ಸರ್ಕಾರ್ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 14, 15 ಹಾಗೂ 16 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡನೇ ಬಾರಿ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಕಬಡ್ಡಿ ಪ್ರೀಮಿಯರ್ ಲೀಗ್-2025 ಪಂದ್ಯಾವಳಿಯನ್ನು ಆಯೋಜಿಸಲಾಗಿದೆ
ಜಿಲ್ಲಾಡಳಿತದಿಂದ ನಗರದಲ್ಲಿ ಇಂದು ಶ್ರೀ ಶಿವಯೋಗಿ ಸಿದ್ದರಾಮ ಜಯಂತಿ
ದಾವಣಗೆರೆ ಜಿಲ್ಲಾಡಳಿತ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಶ್ರೀ ಶಿವಯೋಗಿ ಸಿದ್ದರಾಮ ಜಯಂತಿಯನ್ನು ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ತಿಳಿಸಿದ್ದಾರೆ.
ಕಲೆ, ವಾಸ್ತು ಶಿಲ್ಪಗಳ ಮೂಲಧ್ಯೇಯ ಜೀವನೋದ್ಧಾರ
ಪ್ರಾಚೀನ ಭಾರತೀಯರು ತಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಮಾಡುವುದರ ಹಿಂದೆ ಜೀವನೋದ್ಧಾರ, ಆತ್ಮೋನ್ನತಿ ಎಂಬ ಮಹತ್ತರ ಧ್ಯೇಯ ಹೊಂದಿದ್ದರು.
ಹರಿಹರದಲ್ಲಿ ಸಂಭ್ರಮದ ಸಂಕ್ರಾಂತಿ ಹಬ್ಬ ಆಚರಣೆ
ಹರಿಹರ : ನಗರದ ತುಂಗಭದ್ರಾ ನದಿ ದಡದಲ್ಲಿ ಮಂಗಳವಾರ ಸಹಸ್ರಾರು ಜನರು ಸೇರಿ ಗಂಗಾ ಪೂಜೆ ನೆರೆವೇರಿಸಿ, ಸಹ ಭೋಜನ ಮಾಡಿ ಮಕರ ಸಂಕ್ರಾಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ವಿಜೃಂಭಣೆಯ ಬನಶಂಕರಿ ದೇವಿ ರಥೋತ್ಸವ
ಕೊಟ್ಟೂರು : ಪಟ್ಟಣದ ಕೌಲುಪೇಟೆಯ ಶ್ರೀ ಬನಶಂಕರಿ ದೇವಿಯ ರಥೋತ್ಸವ ಸೋಮವಾರ ಸಂಜೆ ಗೋದೂಳಿ ಸಮಯದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ - ಸಂಭ್ರಮದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಉಕ್ಕಡಗಾತ್ರಿ ಅಜ್ಜಯ್ಯನಿಗೆ ನೂತನ ಬೆಳ್ಳಿ ಮಂಟಪ ಅರ್ಪಣೆ
ಮಲೇಬೆನ್ನೂರು : ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನಿಗೆ ಭಕ್ತರು ನೀಡಿದ ಕಾಣಿಕೆ ಹಣದಲ್ಲಿ ಹೊಸದಾಗಿ ಮಾಡಿಸಿರುವ 25 ಕೆಜಿ ತೂಕದ ಬೆಳ್ಳಿ ಮಂಟಪವನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.
ಅಂಬಿಗರ ಚೌಡಯ್ಯ ಗುರುಪೀಠಕ್ಕೆ ಮಲೇಬೆನ್ನೂರಿನಿಂದ ಅಕ್ಕಿ
ಮಲೇಬೆನ್ನೂರು : ಸುಕ್ಷೇತ್ರ ನರಸೀಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ನಾಳೆ ದಿನಾಂಕ 15 ರಿಂದ ಜರುಗಲಿರುವ ಅಂಬಿಗರ ಶರಣ ಸಂಸ್ಕೃತಿ ಉತ್ಸವ-2025 ಮತ್ತು ವಚನ ಗ್ರಂಥ ಮಹಾರಥೋತ್ಸವ ಸಮಾರಂಭಕ್ಕೆ ಮಲೇಬೆನ್ನೂರಿನ ಗಂಗಾಮತ ಸಮಾಜದವರು 101 ಪಾಕೇಟ್ ಅಕ್ಕಿಯನ್ನು ಸೋಮವಾರ ಕಳುಹಿಸಿಕೊಟ್ಟರು.
ರಾಮಚಂದ್ರಪ್ಪಗೆ ಕಲಾವಿದರ ಸಂಘದ ಸನ್ಮಾನ
14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎ.ಬಿ. ರಾಮಚಂದ್ರಪ್ಪ ಅವರಿಗೆ ಜಗಳೂರಿನಲ್ಲಿ ಕಲಾವಿದರ ಸಂಘ ಮತ್ತು ವಕೀಲರ ಸಂಘದಿಂದ ಸನ್ಮಾನಿಸಲಾಯಿತು.
ಮೌನೇಶ್ವರಿ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ
ರಾಜ್ಯಮಟ್ಟದ ವಿಶೇಷ ಚೇತನ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ ಶ್ರೀ ವಿನಾಯಕ ಎಜುಕೇಷನ್ ಸೊಸೈಟಿ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಮೌನೇಶ್ವರಿ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬುಡಕಟ್ಟು ಸಮುದಾಯದಲ್ಲಿ ಹೋರಾಟದ ಬದುಕು ಅಡಕ
ಜಗಳೂರು : ಬುಡಕಟ್ಟು ಸಮುದಾಯಗಳಲ್ಲಿ ವಿಶಿಷ್ಟ ಸಂಸ್ಕೃತಿ, ಹೋರಾಟದ ಬದುಕು ಅಡಗಿರುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿ ಮಲ್ಲಿಕಾರ್ಜುನ್ ಕಲಮರಹಳ್ಳಿ ತಿಳಿಸಿದರು.
ಮಲೇಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ವಿಶೇಷ ಸಂಕ್ರಾಂತಿ
ಮಲೇಬೆನ್ನೂರು : ಪಟ್ಟಣದ ಹೊರವಲಯದಲ್ಲಿರುವ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ ಆಚರಣೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ದಾಖಲೆ ಬರೆದರು.
ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವಿಯವರಿಗೆ ಬೆಳ್ಳಿ ಪ್ರಭಾವಳಿ
ಹೊನ್ನಾಳಿ : ಆದಿ ದೇವತೆಗಳಾದ ಶ್ರೀ ದುರ್ಗಮ್ಮ-ಶ್ರೀ ಮರಿಯಮ್ಮ ದೇವಿಯರ ಮುಖಗಳಿಗೆ ಭಕ್ತರ ಸಹಕಾರದೊಂದಿಗೆ 5 ಕೆ.ಜಿ ನೂತನ ಬೆಳ್ಳಿ ಕವಚ ಹಾಕಿ, ಹೊಸ ಬಟ್ಟೆ ಧರಿಸಿ, ವಿವಿಧ ಹೂಗಳಿಂದ ಅಲಂಕರಿಸಿ, ಅರ್ಚಕರು ವಿಶೇಷ ಪೂಜೆ ಮಾಡಲಿದ್ದಾರೆ.
ಪಲ್ಲಾಗಟ್ಟಿ : ಅಯ್ಯಪ್ಪ ಸ್ವಾಮಿ ಪಡಿಪೂಜೆೆ
ಜಗಳೂರು : ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮದ ಎಲ್ಐಸಿ ರಂಗಮಂದಿರದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ 25ನೇ ವರ್ಷದ ಶಬರಿಮಲೈ ಯಾತ್ರೆ ಪ್ರಯುಕ್ತ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಹಾಗೂ ಬೆಳ್ಳಿ ರಥದಲ್ಲಿ ವಿಜೃಂಭಣೆಯ ಮೆರವಣಿಗೆ ಮಾಡಲಾಯಿತು.
ದೇಶದ ಸಂಸ್ಕೃತಿ, ಪರಂಪರೆ ಹಾಗೂ ವೈಭವ ಅನಾವರಣ ಮಾಡಿದ ಚೇತನ ಶಾಲಾ ಮಕ್ಕಳು
ಕನ್ನಡಿಯ ಮುಂದೆ ನಿಂತ ಯುವತಿ ; ಮೈಕಿನ ಮುಂದೆ ನಿಂತ ಸಾಹಿತಿಗೆ ಇಲ್ಲ ಕಾಲದ ಮಿತಿ ಎಂದು ಹರಿಹರ ಎಸ್ಜೆವಿಪಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ್ ತಿಳಿಸಿದರು.
ನೇರ ಬ್ರಿಡ್ಜ್ ನಿರ್ಮಿಸುವಂತೆ ಒತ್ತಾಯಿಸಿ ಕುಂದುವಾಡ ಗ್ರಾಮಸ್ಥರ ಮನವಿ
ಗ್ರಾಮಗಳಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ನೇರ ಬ್ರಿಡ್ಜ್ ನಿರ್ಮಿಸುವಂತೆ ಒತ್ತಾಯಿಸಿ ಹಾಗೂ ಪ್ರಸ್ತುತ ಇರುವ ಕೆಳ ಸೇತುವೆ ಅವೈಜ್ಞಾನಿಕವಾಗಿದ್ದು, ಸರಿಯಾಗಿ ನಿರ್ಮಿಸುವಂತೆ ಹಳೇ ಕುಂದುವಾಡ ಗ್ರಾಮಸ್ಥರು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.
ತಾ. ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾಗಿ ಸರ್ವಮ್ಮ ಆಯ್ಕೆ
ಎಚ್.ಕೆ.ಆರ್ ಬಣದ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಎಂ. ಸರ್ವಮ್ಮ ಆಯ್ಕೆಯಾಗಿದ್ದಾರೆ.
ಕೊಂಡಜ್ಜಿಯಲ್ಲಿ ಇಂದು ಅಯ್ಯಪ್ಪ ಸ್ವಾಮಿ ಪಡಿಪೂಜೆ
ಕೊಂಡಜ್ಜಿಯ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ 17ನೇ ವರ್ಷದ ಶಬರಿಮಲೈ ಯಾತ್ರೆ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಪಡಿ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರ ಮವನ್ನು ಇಂದು ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಶ್ರೀ ಬನಶಂಕರಿ ದೇವಿಗೆ ವಿಶೇಷಾಲಂಕಾರ
ದಾವಣಗೆರೆ ಹಳೇ ಭಾಗದ ದೇವಾಂಗ ಪೇಟೆ ಶ್ರೀ ಬನಶಂಕರಿ ದೇವಿಗೆ ಬನದ ಹುಣ್ಣಿಮೆ ಪ್ರಯುಕ್ತ ಮಾಡಲಾಗಿದ್ದ ವಿಶೇಷ ಅಲಂಕಾರವು ಭಕ್ತರನ್ನು ಹಿಡಿದಿಟ್ಟುಕೊಂಡಿತ್ತು.
ಸಡಗರದ ಕಣ್ವಕುಪ್ಪೆ ಗವಿಮಠ ರಥೋತ್ಸವ
ಜಗಳೂರು : ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಶ್ರೀ ಗುರು ಶಾಂತಲಿಂಗೇಶ್ವರ ರಥೋತ್ಸವ ಅದ್ಧೂರಿ ಹಾಗೂ ಸಡಗರದಿಂದ ಜರುಗಿತು.
ನಮ್ಮ ಜೊತೆ ಬರುವುದು ನಾವು ಕಲಿತ ವಿದ್ಯೆ ಮಾತ್ರ
ಹರಿಹರ : ನಾವು ಗಳಿಸಿದ ಆಸ್ತಿ, ಅಧಿಕಾರ, ಸಂಪತ್ತು, ಸಂಪಾದನೆ ಒಂದು ದಿನ ನಮ್ಮಿಂದ ದೂರವಾಗಬಹುದು, ಆದರೆ ನಾವು ಕಲಿತಂತಹ ವಿದ್ಯೆ ಮಾತ್ರ ನಮ್ಮ ಜೊತೆಗೆ ಬರು ವಂತಹದ್ದು ಎಂದು ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯ ಪಟ್ಟರು.
ಪಿಎಲ್ಡಿ ಬ್ಯಾಂಕ್ ಮತ್ತೆ ಕಾಂಗ್ರೆಸ್ ವಶಕ್ಕೆ
ರಾಣೇಬೆನ್ನೂರು : ನಿನ್ನೆ ನಡೆದ ರಾಣೇಬೆನ್ನೂರು ಪಿಎಲ್ಡಿ ಬ್ಯಾಂಕಿನ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷ ಮತ್ತೆ ಆಡಳಿತ ವಹಿಸಿಕೊಂಡಿದೆ.
ಕೊಂಡಜ್ಜಿ ಅರಣ್ಯದಲ್ಲಿ ಹಿಮಾಲಯನ್ ಅಕಾಡೆಮಿ ಚಾರಣ
ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದಿನಾಚರಣೆ ಅಂಗವಾಗಿ ಕೊಂಡಜ್ಜಿ ಅರಣ್ಯದಲ್ಲಿ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ವತಿಯಿಂದ ಚಾರಣ ವನ್ನು ಹಮ್ಮಿಕೊಳ್ಳಲಾಗಿತ್ತು.
ಎಸ್ಸೆಸ್ ಭೇಟಿ ಮಾಡಿದ ಕಿರುವಾಡಿ ಸೋಮಣ್ಣ
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಇಲ್ಲಿನ ಅವರ ನಿವಾಸದಲ್ಲಿ ದಾವಣಗೆರೆ ಆಯಿಲ್ ಮಿಲ್ ಅಸೋಸಿಯೇ ಷನ್ ಗೌರವ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾ ಸಭಾ ಜಿಲ್ಲಾ ಉಪಾಧ್ಯಕ್ಷ, ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ನಿರ್ದೇಶಕ ಕಿರುವಾಡಿ ಸೋಮಣ್ಣ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಎಸ್ಸೆಸ್ ಭೇಟಿ ಮಾಡಿದ ಮೇಯರ್
ಎಸ್ಸೆಸ್ ಅವರನ್ನು ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರ ಕೆ. ಚಮನ್ ಸಾಬ್ ಅವರು ಭೇಟಿ ಮಾಡಿ ಆರೋಗ್ಯ, ಯೋಗಕ್ಷೇಮ ವಿಚಾರಿಸಿದರು.
ಎಸ್ಸೆಸ್ ಭೇಟಿ ಮಾಡಿದ ಮಾಜಿ ಮೇಯರ್ ಅಶ್ವಿನಿ
ಎಸ್ಸೆಸ್ ಅವರನ್ನು ಪಾಲಿಕೆ ಮಾಜಿ ಮೇಯರ್ ಅಶ್ವಿನಿ, ಪ್ರಶಾಂತ್ ಹಾಗೂ ವಿನಾಯಕ ರೈಸ್ ಮಿಲ್ ಮಾಲೀಕ ವಿ. ಸಿದ್ದೇಶ್, ಹಿರೇತೊಗಲೇರಿ ಕುಮಾರ ಸ್ವಾಮಿ, ಕರೇಶಿವಪ್ಳ ಮಂಜುನಾಥ್, ದಾದು ಅವರುಗಳು ಭೇಟಿ ಮಾಡಿ, ಆರೋಗ್ಯ, ಯೋಗಕ್ಷೇಮ ವಿಚಾರಿಸಿದರು.
ಎಸ್ಸೆಸ್ ಭೇಟಿ ಮಾಡಿದ ನಂದಿಗಾವಿ ಶ್ರೀನಿವಾಸ್
ಎಸ್ಸೆಸ್ ಅವರನ್ನು ಹರಿಹರ ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಆಶೀರ್ವಾದ ಪಡೆದರು.
ಮಕರ ಸಂಕ್ರಾಂತಿ – ಪರಿಸರ ಸ್ನೇಹಿ ಸಂತೆ
ಡಾ. ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರದಂದು `ಮಕರ ಸಂಕ್ರಾಂತಿ-ಪರಿಸರ ಸ್ನೇಹಿ ಸಂತೆಯನ್ನು ಸಂಭ್ರಮದಿಂದ ಆಚರಿಸಿದರು. ವಿದ್ಯಾರ್ಥಿಗಳು ಹಾಡು, ನೃತ್ಯವನ್ನು ಪ್ರದರ್ಶನ ಮಾಡಿದರು.
ವಸತಿ ರಹಿತರ ಕಡೆಗಣಿಸಿದ ಸರ್ಕಾರ
ದೇಶದಲ್ಲಿ ಅನೇಕ ವರ್ಷಗಳಿಂದ ನಿವೇಶನ ಮತ್ತು ವಸತಿ ರಹಿತರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಭರವಸೆ ನೀಡಿ ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳು ಕಾಳಜಿ ತೋರದೆ ಕಡೆಗಣಿಸುತ್ತಾ ಬಂದಿವೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಆರೋಪಿಸಿದರು.
ಇಂದು ತಪೋಕ್ಷೇತ್ರ ಕಣ್ವಕುಪ್ಪೆಯಲ್ಲಿ ರಥೋತ್ಸವ
ಜಗಳೂರು ತಾಲ್ಲೂಕು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ಮಕರ ಸಂಕ್ರಾತಿಯಂದು ಮಹಾ ರಥೋತ್ಸವವು ಇಂದು ಜರುಗಲಿದೆ. ಮಕರ ಸಂಕ್ರಾತಿಯ ರಥೋತ್ಸವದ ಸಾನ್ನಿಧ್ಯವನ್ನು ತಪೋಕ್ಷೇತ್ರ ಗವಿಮಠದ ಪಟ್ಟಾಧ್ಯಕ್ಷರಾದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ವಹಿಸುವರು.
ನಾಳೆ ಕೊಂಡಜ್ಜಿಯಲ್ಲಿ ಅಯ್ಯಪ್ಪ ಸ್ವಾಮಿ ಪಡಿಪೂಜೆ, ಅನ್ನ ಸಂತರ್ಪಣೆ
ಕೊಂಡಜ್ಜಿಯ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ 17ನೇ ವರ್ಷದ ಶಬರಿಮಲೈ ಯಾತ್ರೆ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಪಡಿ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 15ರ ಬುಧವಾರ ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿಂದು ಅಯ್ಯಪ್ಪ ಸ್ವಾಮಿ ಪಡಿ ಪೂಜೆ
ಶ್ರೀ ಎಸ್. ನಿಜಲಿಂಗಪ್ಪ ಬಡಾವಣೆಯ ಬಕ್ಕೇಶ್ವರ ಶಾಲೆ ಹತ್ತಿರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಶ್ರೀ ಸ್ವಾಮಿಗೆ ಇಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಸಂಜೆ 7 ಗಂಟೆಗೆ ಪಡಿಪೂಜೆ ಮತ್ತು ಪ್ರಸಾದ ವಿನಿಯೋಗವಿರುತ್ತದೆ.
ಹೊನ್ನಾಳಿ ಶಿವ ಸಹಕಾರ ಸಂಘದ ಅಧ್ಯಕ್ಷರಾಗಿ ಕ್ಯಾಸಿನಕೆರೆ ಶಂಕರಗೌಡ
ಹೊನ್ನಾಳಿ ಶಿವ ಸಹಕಾರ ಸಂಘದ ಅಧ್ಯಕ್ಷರಾಗಿ ಕ್ಯಾಸಿನಕೆರೆ ಎ.ಸಿ. ಶಂಕರಗೌಡ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ನವೀನಕುಮಾರ್ ತಿಳಿಸಿದ್ದಾರೆ.
`ಹೇ ನೀನ್ಯಾರು.. ನೀನ್ಯಾಕೆ ಸ್ವಾಮೀಜಿ ಪಕ್ಕ ಕೂತಿದೀಯಾ.. ಈ ಕಡೆ ಬಾ’
`ಹೇ.. ನೀನ್ಯಾರು.. ನೀನ್ಯಾಕೆ ಸ್ವಾಮೀಜಿ ಪಕ್ಕ ಕೂತಿದೀಯಾ.. ಈ ಕಡೆ ಬಾ' ಎಂದು ವಿಜಯ ನಗರ ಜಿಲ್ಲೆಯ ಜಿಲ್ಲಾಧಿ ಕಾರಿ ದಿವಾಕರ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಗದರಿದ ಘಟನೆ ಭಾನುವಾರ ನಡೆದಿದೆ.
ನೀಲಮ್ಮನ ತೋಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿ ಪಡಿಪೂಜೆ
ನೀಲಮ್ಮನ ತೋಟದ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಇಂದು ಸಂಜೆ 7 ಗಂಟೆಗೆ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಿ.ಸಿ. ರಸ್ತೆಗಳ ದುರಸ್ತಿ ಕಾಮಗಾರಿಯ ಪರಿಶೀಲನೆ
ಸಿ.ಸಿ. ರಸ್ತೆಗಳಲ್ಲಿ ದುರಸ್ತಿ ಪಡಿಸದೇ ಬಿಟ್ಟಿರುವ ರೋಡ್ ಕಟ್ಟಿಂಗ್ಸ್ಗಳನ್ನು, ಅಪ್ರೋಚ್ ರಸ್ತೆಗಳಿಗೆ ಫೇವರ್ ಅಳವಡಿಸಿ, ದುರಸ್ತಿ ಪಡಿಸುವ ಕಾಮಗಾರಿಗಳನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನಿ ಭೇಟಿ ನೀಡಿ ಪರಿಶೀಲಿಸಿದರು.