ದಾವಣಗೆರೆ ಮತ್ತು ತೋಳಹುಣಸೆ ರೈಲು ನಿಲ್ದಾಣಗಳ ಮಧ್ಯೆ ಅಪರಿಚಿತ ವ್ಯಕ್ತಿಯ ಶವ ಸಿಕ್ಕಿದ್ದು, ಸುಮಾರು 35-40 ವರ್ಷದವನಾಗಿದ್ದು, ಸಧೃಡ ಮೈಕಟ್ಟು, ದುಂಡು ಮುಖ, ಗಿಡ್ಡ ಮೂಗು ಹೊಂದಿರುತ್ತಾನೆ.
ಜಿಗಳಿ : ಇಂದು ಆರೋಗ್ಯ ತಪಾಸಣೆ
ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಶಿಬಿರದಲ್ಲಿ ಗ್ರಾಮಸ್ಥರಿಗೆ ಇಂದು ಬೆಳಿಗ್ಗೆ 10 ರಿಂದ ಹೊಳೆ ಸಿರಿಗರೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಲೇಬೆನ್ನೂರಿನ ಅಪೂರ್ವ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ
ಕಲಾಕುಂಚದ ಎಂಸಿಸಿ ಬಡಾವಣೆ ಶಾಖೆಯ ಅಧ್ಯಕ್ಷರಾಗಿ ಪ್ರಭಾ ರವೀಂದ್ರ ಪುನರಾಯ್ಕೆ
ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಎಂ.ಸಿ.ಸಿ. ಬಡಾವಣೆ ಶಾಖೆಯ ಅಧ್ಯಕ್ಷರಾಗಿ ಶ್ರೀಮತಿ ಪ್ರಭಾ ರವೀಂದ್ರ ಅವಿರೋಧವಾಗಿ ಪುನರಾಯ್ಕೆ ಯಾಗಿದ್ದಾರೆ ಎಂದು ಕಲಾಕುಂಚ ಮಹಿಳಾ ವಿಭಾಗದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ ತಿಳಿಸಿದ್ದಾರೆ.
ನಗರದಲ್ಲಿ ಇಂದು ಅಯ್ಯಪ್ಪ ಸ್ವಾಮಿ ಧ್ವಜ ಸ್ತಂಬದ ಪೂಜೆ
ಜಿಲ್ಲಾ ಸಾರ್ವಜನಿಕ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ಹೊಳೆ ಹೊನ್ನೂರು ತೋಟದಲ್ಲಿ ಅಯ್ಯಪ್ಪ ಸ್ವಾಮಿ ಮಹೋತ್ಸವ ನಡೆಯಲಿದೆ.
ದೀನ – ದುರ್ಬಲರ ಸೇವೆಯೇ ಸೇವಾದಳದ ಸದುದ್ದೇಶ
ಸೇವಾದಳದ ಸದಸ್ಯರೆಲ್ಲರೂ ಸಕ್ರಿಯರಾದರೆ ಜಿಲ್ಲಾ ಘಟಕವನ್ನು ರಾಜ್ಯದಲ್ಲೇ ನಂಬರ್ ಒನ್ ಮಾಡಬಹುದು ಎಂದು ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಹೆಚ್. ಚನ್ನಪ್ಪ ಪಲ್ಲಾಗಟ್ಟೆ ಹೇಳಿದರು.
ನಗರದ ಶ್ರೀ ಗೌರಮ್ಮಾಜಿ ಅಧ್ಯಾತ್ಮ ಮಂದಿರದಲ್ಲಿ ಇಂದು ಕಾರ್ತಿಕ
ಎಸ್.ಎಸ್.ಲೇ-ಔಟ್ `ಬಿ' ಬ್ಲಾಕ್, ರಿಂಗ್ ರಸ್ತೆಯಲ್ಲಿರುವ ಶ್ರೀ ಸ.ಸ. ಗೌರಮ್ಮಾಜಿ ಅಧ್ಯಾತ್ಮ ಮಂದಿರದಲ್ಲಿ ಶ್ರೀ ಗೌರಮ್ಮಾಜಿ ಮಹಾರಾಜರ 28ನೇ ಜ್ಞಾನಯಜ್ಞ ಸಪ್ತಾಹ ಮತ್ತು ಕಾರ್ತಿಕ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಜ.6 ರಂದು ರಾಜ್ಯ ಮಟ್ಟದ ಮಹಿಳಾ ಸಮ್ಮೇಳನ
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ಬರುವ ಜನವರಿ 6 ಹಾಗೂ 7 ರಂದು 7ನೇ ರಾಜ್ಯಮಟ್ಟದ ಮಹಿಳಾ ಸಮ್ಮೇಳನ ಹಮ್ಮಿಕೊಂಡಿರುವುದಾಗಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಿ.ಆರ್. ಅಪರ್ಣಾ ತಿಳಿಸಿದ್ದಾರೆ.
ಹಿಂದುಳಿದ ಅಭಿವೃದ್ಧಿ ನಿಗಮಗಳಿಂದ ಅರ್ಜಿ ಆಹ್ವಾನದ ಅವಧಿ ವಿಸ್ತರಣೆ
ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಇದೇ ದಿನಾಂಕ 15 ರವರೆಗೆ ವಿಸ್ತರಿಸಲಾಗಿದೆ
ಚೌಟ್ರಿ ಕಳ್ಳತನ ಪ್ರಕರಣ ಪತ್ತೆ : ಆಭರಣ ವಶ
ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಪತ್ತೆ ಹಚ್ಚಿರುವ ಪೊಲೀಸರು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪತ್ತೆ ಮಾಡಿ ಆತನಿಂದ 1.40 ಲಕ್ಷ ರೂ. ಬೆಲೆಯ 23 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.
ಕಳ್ಳರ ಬಂಧನ : ಸೈಕಲ್ಗಳ ವಶ
ಸೈಕಲ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 1.06 ಲಕ್ಷ ರೂ. ಬೆಲೆಯ 5 ಗೇರ್ ಸೈಕಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಾಳೆ ಕಾರ್ತಿಕೋತ್ಸವ
ನಗರದ ಎಂ.ಸಿ.ಸಿ. ಎ ಬ್ಲಾಕ್ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಾಡಿದ್ದು ದಿನಾಂಕ 7ರ ಗುರುವಾರ ಸಂಜೆ 6 ಗಂಟೆಗೆ ಕಾರ್ತಿಕೋತ್ಸವ ನಡೆಯಲಿದೆ ಎಂದು ಶ್ರೀ ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಂ. ಶಿವಪ್ಪ ತಿಳಿಸಿದ್ದಾರೆ.
ನಗರದ ಶ್ರೀ ಗೌರಮ್ಮಾಜಿ ಅಧ್ಯಾತ್ಮ ಮಂದಿರದಲ್ಲಿಂದು ಜ್ಞಾನಯಜ್ಞ ಸಪ್ತಾಹ
ಎಸ್.ಎಸ್.ಲೇ-ಔಟ್ `ಬಿ' ಬ್ಲಾಕ್, ರಿಂಗ್ ರಸ್ತೆಯಲ್ಲಿರುವ ಶ್ರೀ ಸ.ಸ. ಗೌರಮ್ಮಾಜಿ ಅಧ್ಯಾತ್ಮ ಮಂದಿರದಲ್ಲಿ ಶ್ರೀ ಗೌರಮ್ಮಾಜಿ ಮಹಾರಾಜರ 28ನೇ ಜ್ಞಾನಯಜ್ಞ ಸಪ್ತಾಹ ಮತ್ತು ಕಾರ್ತಿಕ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ನಾಡಿದ್ದು ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕಾರ್ತಿಕೋತ್ಸವ
ನಗರದ ಎಂ.ಸಿ.ಸಿ. ಎ ಬ್ಲಾಕ್ನಲ್ಲಿ ರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಇದೇ ದಿನಾಂಕ 7ರ ಗುರುವಾರ ಸಂಜೆ 6 ಗಂಟೆಗೆ ಕಾರ್ತಿಕೋತ್ಸವ ನಡೆಯಲಿ ದೆ ಎಂದು ಶ್ರೀ ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಂ. ಶಿವಪ್ಪ ತಿಳಿಸಿದ್ದಾರೆ.
ಭರಮಸಾಗರ ಮುಕ್ತಿಧಾಮ ಅಭಿವೃದ್ಧಿಗೆ ಸಹಕಾರಕ್ಕೆ ಮನವಿ
ಭರಮಸಾಗರ : ಸ್ಥಳೀಯ ಮುಕ್ತಿಧಾಮದಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಕೆಲವು ದಾನಿಗಳಿಂದ ಸಹಕಾರ ಪಡೆದು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಆದರೆ ಮುಕ್ತಿಧಾಮ ಸುತ್ತಲೂ ಇರುವ ಜಾಗಕ್ಕೆ ಕಾಂಪೌಂಡ್ ಮಾಡಲು ಸಮಿತಿಯಲ್ಲಿ ಹಣದ ಕೊರತೆ ಇದೆ.
ಚುನಾವಣಾ ತೀರ್ಪನ್ನು ಕಾಂಗ್ರೆಸ್ ತಲೆಬಾಗಿ ಸ್ವೀಕರಿಸುತ್ತದೆ: ಡಿಬಿ
ಪಂಚ ರಾಜ್ಯಗಳ ಚುನಾವಣಾ ತೀರ್ಪನ್ನು ಕಾಂಗ್ರೆಸ್ ಪಕ್ಷ ತಲೆಬಾಗಿ ಸ್ವೀಕರಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಡಿ ಬಸವರಾಜ್ ತಿಳಿಸಿದ್ದಾರೆ.
ಹಳೇಕಡ್ಲೇಬಾಳು : ಸ.ಉ.ಶಾಲೆಯಲ್ಲಿ ಇಂದು ಚಿಗುರು ಕಾರ್ಯಕ್ರಮ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಂದು ಮಧ್ಯಾಹ್ನ 3 ಗಂಟೆಗೆ ಹಳೇಕಡ್ಲೇಬಾಳು ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಗುರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದೇವದಾಸಿಯರ ಪುನರ್ ಸಮೀಕ್ಷೆ ಕೈಗೊಳ್ಳಲು ಆಗ್ರಹ
ದೇವದಾಸಿಯರ ಮತ್ತು ಮಾಜಿ ದೇವದಾಸಿಯರ ಪುನರ್ ಸಮೀಕ್ಷೆ ಕಾರ್ಯಕ್ಕೆ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು. ಮತ್ತವರ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಕಲ್ಪಿಸಬೇಕೆಂಬ ನಿರ್ಣಯಗಳನ್ನು ಹರಿಹರದಲ್ಲಿ ನಡೆದ ಮಹಿಳಾ ಒಕ್ಕೂಟದ ರಾಜ್ಯ ಸಮ್ಮೇಳನದ ಸಂದರ್ಭದಲ್ಲಿ ತೆಗೆದುಕೊಳ್ಳಲಾಯಿತು
ನಗರದಲ್ಲಿ ಇಂದು `ನಮ್ಮ ಹೆಮ್ಮೆಯ ಕನ್ನಡಿಗ’
ಕೋಟಕ್ ಸಂಸ್ಥೆ ವತಿಯಿಂದ ಗ್ರೀನ್ ಪಾರ್ಕ್ ಹೋಟೆಲ್ ಪಕ್ಕ ಸಂಕಮ್ನಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳೆಲ್ಲರಿಗೂ `ನಾನು ಹೆಮ್ಮೆಯ ಕನ್ನಡಿಗ' ಎಂಬ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಇಂದು ಸಾಂಸ್ಕೃತಿಕ ಸಂಗೀತ
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ದಾವಣಗೆರೆ ದಕ್ಷಿಣ ವಲಯದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ `ಮಕ್ಕಳಿಗಾಗಿ ಸಾಂಸ್ಕೃತಿಕ ಸಂಗೀತ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಇಂದು ವಕೀಲರ ದಿನಾಚರಣೆ
ಜಿಲ್ಲಾ ವಕೀಲರ ಸಂಘದಿಂದ ಇಂದು ಬೆಳಿಗ್ಗೆ 10.30ಕ್ಕೆ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.
ನಗರದಲ್ಲಿ ಇಂದು `ಅಭಿರುಚಿ’ : ಇದು ಓದುಗರ ವೇದಿಕೆ
ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಲೈಬ್ರರಿ ಮತ್ತು ಇನ್ಫರ್ಮೇಷನ್ ವಿಭಾಗದ ಆಶ್ರಯದಲ್ಲಿ `ಅಭಿರುಚಿ' ಇದು ಓದುಗರ ವೇದಿಕೆ ಕಾರ್ಯಕ್ರಮವು ಇಂದು ಬೆಳಿಗ್ಗೆ 11.30 ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ನಗರದಲ್ಲಿ ಇಂದು ಓಶೋ ಧ್ಯಾನ ಶಿಬಿರ
ಓಶೋ ಸನ್ನಿಧಿ ಇನ್ಸೈಟ್ ಫೌಂಡೇ ಶನ್ ವತಿಯಿಂದ ಇಂದಿನಿಂದ ಇದೇ ದಿನಾಂಕ 7 ರವರೆಗೆ ಪ್ರತಿ ದಿನ ಬೆಳಿಗ್ಗೆ 6 ರಿಂದ 7.30 ರವರೆೆಗೆ ಆಲೂರು ಕನ್ವೆನ್ಷನ್ ಹಾಲ್ನಲ್ಲಿ ಓಶೋ ಧ್ಯಾನ ಶಿಬಿರ ನಡೆಯಲಿದೆ.
ನಗರಕ್ಕೆ ಇಂದು ಡಾ. ಅಂಬೇಡ್ಕರ್ ಜ್ಯೋತಿಯಾತ್ರೆ
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ರವರ 67ನೇ ಮಹಾಪರಿನಿರ್ವಾಣ ಪ್ರಯುಕ್ತ ಅಸ್ಪೃಶ್ಯತಾ ನಿವಾರಣೆಗಾಗಿ ಹಮ್ಮಿಕೊಂಡಿರುವ ಅಂಬೇಡ್ಕರ್ ಜ್ಯೋತಿಯಾತ್ರೆ ಇಂದು ನಗರಕ್ಕೆ ಆಗಮಿಸಲಿದೆ.
ಮಲೇಬೆನ್ನೂರಿನಲ್ಲಿ ಮತ್ತೆ ನಾಲ್ವರನ್ನು ಗಾಯಗೊಳಿಸಿದ ಮುಷ್ಯ
ಮಲೇಬೆನ್ನೂರು : ಪಟ್ಟಣದಲ್ಲಿ ಸೋಮವಾರ ನಾಲ್ವರ ಮೇಲೆ ಮುಷ್ಯ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಜನರನ್ನು ಮತ್ತಷ್ಟು ಭಯಭೀತರನ್ನಾಗಿ ಮಾಡಿದೆ.

ವಕೀಲರ ಮನವಿ ಸ್ವೀಕರಿಸಲು ವಿಳಂಬ : ರಸ್ತೆ ತಡೆ – ಕ್ಷಮೆ ಯಾಚಿಸಿದ ತಹಶೀಲ್ದಾರ್
ಹರಿಹರ : ಚಿಕ್ಕಮಗಳೂರಿನಲ್ಲಿ ವಕೀಲರ ಸಂಘದ ಅಧ್ಯಕ್ಷರು ಮತ್ತು ಇತರೆ ಸದಸ್ಯರ ಮೇಲೆ ದಾಖಲಾಗಿರುವ ಸುಳ್ಳು ದೂರುಗಳನ್ನು ವಾಪಸ್ ಪಡೆಯಬೇಕು ಹಾಗೂ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು

ಹರಿಹರ : ಕಾಮಗಾರಿ ಪೂರ್ಣ ಆಗುವವರೆಗೂ ಧರಣಿ ಸತ್ಯಾಗ್ರಹ
ಹರಿಹರ : ನಗರದ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ 9ನೇ ದಿನದ ಧರಣಿ ಸತ್ಯಾಗ್ರಹ ಲೋಕೋಪಯೋಗಿ ಇಲಾಖೆಯ ಹೆದ್ದಾರಿಯ ಮುಂಭಾಗ ನಡೆಸಲಾಯಿತು.

ಮಕ್ಕಳಿಗೆ ಶ್ರೀಮಂತಿಕೆಯ ರುಚಿ ತೋರಿಸಬೇಡಿ
ಮಲೇಬೆನ್ನೂರು : ಮಕ್ಕಳಿಗೆ ಶ್ರೀಮಂತಿಕೆಯ ರುಚಿ ತೋರಿಸಬೇಡಿ. 18 ವರ್ಷ ತುಂಬದ ಹೊರತು ಬೈಕು, ಕಾರುಗಳ ಕೀ ಕೊಡಬೇಡಿ. ಬದಲಿಗೆ ಅವರಿಗೆ ಕಷ್ಟ-ಸುಖ ಎರಡರ ಅನುಭವ ಮಾಡಿಸಿ. ಆಗ ಅವರು ನೀವು ಬಯಸಿದ ಮಕ್ಕಳಾಗಿ ಬೆಳೆಯುತ್ತಾರೆ

ಸದೃಢ ಆರೋಗ್ಯಕ್ಕೆ ಯೋಗ ಮದ್ದು
ಸದೃಢ ಆರೋಗ್ಯ ಪಡೆಯಲು ಯೋಗಾಭ್ಯಾಸ ಒಂದೇ ಮಾರ್ಗವಾಗಿದ್ದು, ವಯಸ್ಸಿನ ಮಿತಿಯಿಲ್ಲದೇ ಪ್ರತಿಯೊಬ್ಬರು ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಯೋಗ ಗುರು ಎನ್.ಪರಶುರಾಮಪ್ಪ ಕಿವಿಮಾತು ಹೇಳಿದರು.

ಪಾರದರ್ಶಕ, ನ್ಯಾಯಸಮ್ಮತ ವ್ಯಾಪಾರ, ವಹಿವಾಟಿಗೆ ರೈತ ಒಕ್ಕೂಟದ ಒತ್ತಾಯ
ಸೂಕ್ತ ಪಾರದರ್ಶಕ, ನ್ಯಾಯಯುತ ವ್ಯಾಪಾರ ವಹಿವಾಟು ನಡೆಸಲು ಕ್ರಮ ಕೈಗೊಳ್ಳುವಂತೆ ರೈತ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಎಪಿಎಂಸಿ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಹರಿಹರ ತಾಲ್ಲೂಕು ಮಾದಿಗ ಸಮಾಜ ಸಂಘದ ಅಧ್ಯಕ್ಷರಾಗಿ ಆನಂದ್
ಹರಿಹರ : ಹರಿಹರ ತಾಲ್ಲೂಕು ಮಾದಿಗ ಸಮಾಜದ ವತಿಯಿಂದ ಸಮಾಜಮುಖಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವ ಹಿನ್ನೆಲೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಮಾಜದ ಅಧ್ಯಕ್ಷ ಎಂ.ಎಸ್. ಆನಂದಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರದಲ್ಲಿ ವಿಶ್ವ ಏಡ್ಸ್ ಅರಿವು ಜಾಥಾ
ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನಗರದ ಚರ್ಮ ವೈದ್ಯರ ಸಂಘ ಹಾಗೂ ಜೆಜೆಎಂ ಮೆಡಿಕಲ್ ಕಾಲೇಜು, ಎಸ್ಎಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ ಇವರುಗಳ ಸಂಯುಕ್ತಾಶ್ರಯದಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವ ದೂರದ ನಡಿಗೆಯನ್ನು ನಿನ್ನೆ ನಡೆಸಲಾಯಿತು.

ಜಿಗಳಿಯಲ್ಲಿ ಕನಕದಾಸರ ಜಯಂತಿ ಆಚರಣೆ
ಮಲೇಬೆನ್ನೂರು : ಜಿಗಳಿ ಗ್ರಾ.ಪಂ. ಕಚೇರಿ ಮತ್ತು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಸಶ್ರೇಷ್ಠ ಸಂತ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ನಗರದಲ್ಲಿ ಅಂಬೇಡ್ಕರ್ ಜ್ಯೋತಿ ಯಾತ್ರೆಗೆ ಸ್ವಾಗತ
ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 67ನೇ ಮಹಾಪರಿನಿರ್ವಾಣದ ಪ್ರಯುಕ್ತ ಅಸ್ಪೃಶ್ಯತಾ ನಿವಾರಣೆಗಾಗಿ ಹಮ್ಮಿಕೊಂಡಿರುವ ಅಂಬೇಡ್ಕರ್ ಜ್ಯೋತಿ ಯಾತ್ರೆ ಇಂದು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅ

ನಾಗರಿಕ ಬಂದೂಕು ತರಬೇತಿ ಶಿಬಿರಕ್ಕೆ ಚಾಲನೆ
ನಗರದ ಡಿ.ಎ.ಆರ್. ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಾಗರಿಕ ಬಂದೂಕು ತರಬೇತಿ ಶಿಬಿರ ನಡೆಯಿತು. ಶಿಬಿರಕ್ಕೆ ಬಿ.ಡಿವೈಎಸ್ಪಿ ಪ್ರಕಾಶ್ ಪಿ. ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಹರಿಹರದಲ್ಲಿ `ಶ್ರೀಶೈಲ ಉತ್ಸವ’
ಹರಿಹರ : ಶ್ರೀಶೈಲ ಜಗದ್ಗುರುಗಳವರ ಜನ್ಮ ದಿನ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಶ್ರೀಶೈಲ ಹೈಟೆಕ್ ಪಿ.ಯು ಕಾಲೇಜಿನಲ್ಲಿ ನಡೆದ `ಶ್ರೀಶೈಲ ಉತ್ಸವ-2023' ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭವನ್ನು ಶಾಸಕ ಬಿ.ಪಿ.ಹರೀಶ್ ಅವರು ಉದ್ಘಾಟಿಸಿದರು.

ಮಲೇಬೆನ್ನೂರು : ಸೆರೆಗೆ ಸಿಗದೆ ಸತಾಯಿಸಿದ ಮುಷ್ಯ
ಮಲೇಬೆನ್ನೂರು : ಪಟ್ಟಣದಲ್ಲಿ ಸಾರ್ವಜನಿಕರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿರುವ ಮುಷ್ಯನನ್ನು ಸೆರೆ ಹಿಡಿಯಲು ಮಂಗಳವಾರ ಪುರಸಭೆ ಮತ್ತು ಅರಣ್ಯ ಇಲಾಖೆಯವರು ನಡೆಸಿದ ಕಾರ್ಯಾಚರಣೆ ಸಫಲವಾಗಲಿಲ್ಲ.

ಭಾರತಕ್ಕೊಂದು ಶ್ರೇಷ್ಠ ಸಂವಿಧಾನ ರೂಪಿಸಿದ ಕೀರ್ತಿಯ ಸಿಂಹಪಾಲು ವಕೀಲ ವೃತ್ತಿಗೆ ಸಲ್ಲುತ್ತದೆ
ಹರಪನಹಳ್ಳಿ : ಜಗತ್ತಿನ ಬಹುತೇಕ ತತ್ವ, ಸಿದ್ಧಾಂತ, ಹಕ್ಕು ಮತ್ತು ಕರ್ತವ್ಯಗಳ ಆಳವಾದ ಅಧ್ಯಯನ ನಡೆಸಿ ಸ್ವತಂತ್ರ ಭಾರತಕ್ಕೊಂದು ಶ್ರೇಷ್ಠ ಸಂವಿಧಾನ ರೂಪಿಸಿದ ಕೀರ್ತಿಯ ಸಿಂಹಪಾಲು ವಕೀಲ ವೃತ್ತಿಗೆ ಸಲ್ಲುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರಾದ ಎಂ.ಭಾರತಿ ಹೇಳಿದರು.

ಹೊನ್ನಾಳಿ : ಒತ್ತುವರಿಯಾಗಿದ್ದ ಸ್ಮಶಾನ ಜಾಗವನ್ನು ತೆರವುಗೊಳಿಸಿದ ಕಂದಾಯ ಅಧಿಕಾರಿಗಳು
ಹೊನ್ನಾಳಿ : ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಬೀರಗೊಂಡನಹಳ್ಳಿ ಗ್ರಾಮ ಪಂಚಾಯತಿಗೆ ಒಳಪಡುವ ಸದಾಶಿವಪುರ ಗ್ರಾಮದಲ್ಲಿ ಕಳೆದ 11 ವರ್ಷಗಳಿಂದ ಒತ್ತುವರಿಯಾಗಿದ್ದ ಸ್ಮಶಾನ ಜಾಗವನ್ನು ತಹಶೀಲ್ದಾರ್ ಒಳಗೊಂಡ ಅಧಿಕಾರಿಗಳ ತಂಡ ತೆರವುಗೊಳಿಸಿದೆ.

ದುಶ್ಚಟಗಳ ಜೊತೆಗೆ ಮೊಬೈಲ್ ಬಳಕೆಯಿಂದಲೂ ದೂರವಿರಿ
ಮಲೇಬೆನ್ನೂರು : ವಿದ್ಯಾರ್ಥಿಗಳು ದುಶ್ಚಟಗಳ ಜೊತೆಗೆ ಮೊಬೈಲ್ ಬಳಕೆಯಿಂ ದಲೂ ದೂರವಿದ್ದಷ್ಟು ಒಳ್ಳೆಯದೆಂದು ಮಲೇಬೆನ್ನೂರಿನ ಅಪೂರ್ವ ಆಸ್ಪತ್ರೆಯ ವೈದ್ಯ ಡಾ. ಅಪೂರ್ವ ಅಭಿಪ್ರಾಯಪಟ್ಟರು.

ಭಾರತದಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧನೆ ತೀರಾ ಕಡಿಮೆ
ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ರಾಜಸ್ಥಾನದ ಜೈಪುರದ ಚೌಧರಿ ಚರಣ್ ಸಿಂಗ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸಿರಿಧಾನ್ಯಗಳ ಮೌಲ್ಯ ವರ್ಧನೆ, ಪ್ಯಾಕಿಂಗ್, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆಯ ಬಗ್ಗೆ ಮೂರು ದಿನಗಳ ಎರಡು ತರಬೇತಿಯನ್ನು ಗ್ರಾಮೀಣ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿತ್ತು.

ತುರ್ಚಘಟ್ಟದಲ್ಲಿ ಕಸಾಪ ಶಾಲಾ-ಕಾಲೇಜು ಅಂಗಳದಲ್ಲಿ ದತ್ತಿ ಉಪನ್ಯಾಸ
ಹಿರಿಯ ನಾಗರಿಕರ ಸಹಾಯವಾಣಿ (ದಾವಣಗೆರೆ) ಇವರ ಸಂಯುಕ್ತ ಆಶ್ರಯದಲ್ಲಿ ‘ಶಾಲಾ-ಕಾಲೇಜು ಅಂಗಳದಲ್ಲಿ ದತ್ತಿ ಉಪನ್ಯಾಸ’ ಹಾಗೂ ‘ಮಕ್ಕಳ ದಿನಾಚರಣೆ’ ಪ್ರಯುಕ್ತ ಆಟೋಟ ಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ತುರ್ಚಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಬಿಜೆಪಿ ಮೂಲ ಕಾರ್ಯಕರ್ತರ ಸಭೆ; ಸಮಿತಿ ರಚನೆ
ಜಗಳೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮೂಲ ಕಾರ್ಯಕರ್ತರ ಸಭೆ ನಡೆಯಿತು, ಸಭೆಯಲ್ಲಿ ಹುಲಿಕುಂಟ ಶೆಟ್ಟಿ, ಮಂಜುನಾಥ ಸಾಹುಕಾರ್, ಓ. ಬಾಬುರೆಡ್ಡಿ ಕೃಷ್ಣಮೂರ್ತಿ, ಪುರುಷೋತ್ತಮ ನಾಯಕ್, ಹೆಚ್.ಎಂ.ನಾಗರಾಜ, ಬಿ.ಎಸ್. ಪ್ರಕಾಶ್, ಕೆ.ಎಂ.ನಾಗೇಂದ್ರಯ್ಯ, ಇ.ಎನ್.ಪ್ರಕಾಶ್, ಲೋಕಣ್ಣ, ಕಲ್ಲಪ್ಪ ಕೆ.ಟಿ., ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

ವಲಯ ಮಟ್ಟಕ್ಕೆ ರಾಘವೇಂದ್ರ ಪಿಯು ಕಾಲೇಜ್ ವಿದ್ಯಾರ್ಥಿಗಳು
ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ನಗರದ ರಾಘವೇಂದ್ರ ಹೈಟೆಕ್ ಪಿಯು ಕಾಲೇಜು ವಿದ್ಯಾರ್ಥಿಗಳು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಂತರ ಕಾಲೇಜು ಚೆಸ್ – ಯೋಗ ಪಂದ್ಯಾವಳಿ
ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಸಾಜಿದ್ ಬಳ್ಳೂರು ಚೆಸ್ ಸ್ಪರ್ಧೆಯಲ್ಲಿ ಹಾಗೂ ಸೃಷ್ಟಿ ಜಿ.ಲಕ್ಕುಂಡಿ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಚೆನ್ನೈನಲ್ಲಿ ನಡೆಯುವ ಸೌತ್ವೆಸ್ಟ್ ಝೋನ್ ಅಂತರ ವಿಶ್ವವಿದ್ಯಾನಿಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇ-ಜನ್ಮ ತಂತ್ರಾಂಶದಲ್ಲಿ ಜನನ-ಮರಣ ನೋಂದಣಿ ಕಡ್ಡಾಯ
ಜಿಲ್ಲೆಯಲ್ಲಿನ ಜನನ ಹಾಗೂ ಮರಣ ನೋಂದಣಿಯನ್ನು ಕಡ್ಡಾಯ ವಾಗಿ ಇ-ಜನ್ಮ ತಂತ್ರಾಂಶದಲ್ಲಿ ದಾಖಲಿಸಬೇಕು, ನೊಂದಣಿಗೆ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅಭಿಯಾನದಡಿ ಒಂದು ದಿನ ನಿಗದಿ ಮಾಡಿ ನೊಂದಣಿಗೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಸರ್ವರ ದುಃಖ ನಿವಾರಿಸಿ, ಆನಂದದ ಪಯಣ ಮಾಡಿದ ‘ಜೆಕೆ’
20ನೇ ಶತಮಾನದ ದಾರ್ಶನಿಕ, ಚಿಂತಕ ಜಿದ್ದು ಕೃಷ್ಣಮೂರ್ತಿಯವರು ತಮ್ಮ ತ್ತೊಂಭತ್ತೊಂದುವರೆ ವರ್ಷದ ಜೀವನದಲ್ಲಿ ಸರ್ವರ ದುಃಖ ನಿವಾರಿಸಿ ಆನಂದದ ಪಯಣವ ತಾವೂ ಮಾಡಿ, ಜಗತ್ತಿಗೂ ಮಾರ್ಗದರ್ಶಕರಾದರು ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಅಭಿಪ್ರಾಯಿಸಿದರು.

ನಿಟ್ಟುವಳ್ಳಿಯ ಸರ್ಕಾರಿ ಶಾಲೆಗೆ ಡೆಸ್ಕ್ ಕೊಡುಗೆ
ನಗರದ ಇ.ಎಸ್.ಐ ಆಸ್ಪತ್ರೆ ರಸ್ತೆಯಲ್ಲಿ ಇರುವ ನಿಟ್ಟುವಳ್ಳಿ ಪ್ರಾಥಮಿಕ, ಪ್ರೌಢಶಾಲೆಗೆ ಇನ್ ಸೈಟ್ಸ್ ಐಎಎಸ್ ಸಂಸ್ಥೆ ವಿನಯ್ ಮಾರ್ಗ ಟ್ರಸ್ಟ್ನ ವಿನಯಕುಮಾರ್ ಅಭಿಮಾನಿ ಬಳಗದ ವತಿಯಿಂದ ಶಾಲಾ ಮಕ್ಕಳಿಗೆ ಡೆಸ್ಕ್ ಕೊಡುಗೆ ನೀಡಲಾಯಿತು.

ಗಾಯಾಳುಗಳಿಗೆ ಶಾಸಕ ಬಸವಂತಪ್ಪ ನೆರವು
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದ ಶಿರಮ ಗೊಂಡನಹಳ್ಳಿ ಬ್ರಿಡ್ಜ್ ಬಳಿ ಸೋಮವಾರ ಸಂಜೆ ರಸ್ತೆ ಅಪಘಾತ ಸಂಭವಿಸಿದ್ದು, ಗಾಯಗೊಂಡವರನ್ನು ಶಾಸಕ ಕೆ.ಎಸ್.ಬಸವಂತಪ್ಪ ಅವರು ಉಚಿತ ಆಂಬ್ಯುಲೆನ್ಸ್ ಮಾಡಿಸಿ, ಆಸ್ಪತ್ರೆಗೆ ಸಾಗಿಸಲು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಪವರ್ಗ್ರಿಡ್ ರೂ.1.63 ಕೋಟಿ ಸಿಎಸ್ಆರ್ ನಿಧಿಯಡಿ ಬಿಸಿ ನೀರು ಪೂರೈಕೆಗೆ ಜಿಲ್ಲಾಧಿಕಾರಿಗಳೊಂದಿಗೆ ಒಡಂಬಡಿಕೆ
ರಾಜ್ಯ ಮಹಿಳಾ ಹಾಸ್ಟೆಲ್, ಇಎಸ್ಐ ಆಸ್ಪತ್ತೆಯಲ್ಲಿ ಬಿಸಿ ನೀರು ಪೂರೈಕೆ ಮಾಡಲು 1.63 ಕೋಟಿ ರೂ. ಕಾಮಗಾರಿಗೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹಾಗೂ ಪವರ್ ಗ್ರಿಡ್ ಕಂಪನಿಯ ಜನರಲ್ ಮ್ಯಾನೇಜರ್ ಹರೀಶ್ ನಾಯರ್ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಡಂಬಡಿಕೆಗೆ ಸಹಿ ಹಾಕಿದರು.

ಉಕ್ಕಡಗಾತ್ರಿಯಲ್ಲಿ ಪ್ರತಿಭಾ ಪುರಸ್ಕಾರ
ಮಲೇಬೆನ್ನೂರು : ಉಕ್ಕಡಗಾತ್ರಿಯಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಗ್ರಾಮದ ಯುವಕರಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಶೇ.80 ರಷ್ಟು ಅಂಕ ತೆಗೆದ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಲಾಯಿತು.

ಕರಾಟೆ : ಈಗಲ್ ಫಿಟ್ನೆಸ್ನ ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಮಹಾತ್ಮ ಗಾಂಧಿ ಸ್ಮರಣಾರ್ಥ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಫ್-2023 ಶಿವಮೊಗ್ಗದ ಇಂಡೋರ್ ಸ್ಟೇಡಿಯಂನಲ್ಲಿ ಕಳೆದ ವಾರ ನಡೆಯಿತು. ಈಗಲ್ ಫಿಟ್ನೆಸ್ ಮತ್ತು ಮಾರ್ಷಲ್ ಆರ್ಟ್ಸ್ ಸೆಂಟರ್ನ ವೆಂಕಿ ಸೆನ್ಸಾಯ್ ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗೆ ಭಾಜನರಾದರು.