ಇಂದು ಸಂಜೆ 4 ಗಂಟೆಗೆ ಬ್ರಾಹ್ಮಣ ಸಮಾಜ ವಿದ್ಯಾರ್ಥಿ ನಿಲಯದಲ್ಲಿ ವಿವಿಧ ಸ್ಪರ್ಧೆಗಳನ್ನು ಬ್ರಾಹ್ಮಣ ಸಮಾಜದ ಮಹಿಳೆಯರಿಗಾಗಿ ಏರ್ಪಡಿಸಲಾಗಿದೆ ಎಂದು ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ನಳಿನಿ ಅಚ್ಯುತ್ ತಿಳಿಸಿದ್ದಾರೆ.
ಇಂದು ಪಾರ್ವತಿ – ಕಲೋತ್ಸವ
ಅಂತರ ಕಾಲೇಜು ಸ್ಪರ್ಧೆಗಳು - `ಪಾರ್ವತಿ ಕಲೋತ್ಸವ' ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಧ.ರಾ.ಮ ವಿಜ್ಞಾನ ಕಾಲೇಜಿನ ಡಾ. ಎಸ್.ಎಸ್. ಸೆಮಿನಾರ್ ಹಾಲ್ನಲ್ಲಿ ಇಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ
ದಾವಣಗೆರೆ ಜಿಲ್ಲಾ ನೂತನ ನ್ಯಾಯಾಧೀಶರಾಗಿ ವೇಲಾ ಖೋಡೆ
ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ಶ್ರೀಮತಿ ವೇಲಾ ದಾಮೋದರ್ ಖೋಡೆ ಅವರನ್ನು ನೇಮಕ ಮಾಡಿ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿದೆ.
ನಗರದಲ್ಲಿ ಇಂದು ಜಿಲ್ಲಾಡಳಿತದಿಂದ ಶ್ರೀ ರೇಣುಕಾಚಾರ್ಯರ ಜಯಂತಿ
ದಾವಣಗೆರೆ ಜಿಲ್ಲಾಡಳಿತದ ವತಿಯಿಂದ ಮಾ.12ರ ಇಂದು ಬೆಳಗ್ಗೆ 10.30ಕ್ಕೆ ಜಿಲ್ಲಾಡಳಿತ ಭವನದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಚಂದ್ರ ತಿಳಿಸಿದ್ದಾರೆ.
5, 8ನೇ ತರಗತಿಗೆ ಪ್ರವೇಶ ಪರೀಕ್ಷೆ
ಬೆಂಗಳೂರಿನ ಚೆನ್ನನಹಳ್ಳಿಯ ಜನಸೇವಾ ವಿದ್ಯಾಕೇಂದ್ರ ಶಾಲೆಯಲ್ಲಿ ಪ್ರಸಕ್ತ ಸಾಲಿನ 5 ಮತ್ತು 8ನೇ ತರಗತಿಯ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರವೇಶಕ್ಕೆ ಏಪ್ರಿಲ್ 6ರಂದು ಪರೀಕ್ಷೆ ನಡೆಸಲಾಗುವುದು.
ಬ್ರಾಹ್ಮಣ ಸಮಾಜ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ
ನಗರದ ಬ್ರಾಹ್ಮಣ ಸಮಾಜ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ ಮತ್ತು ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಬ್ರಾಹ್ಮಣ ಸಮಾಜದ ಮಹಿಳೆಯರಿಗಾಗಿ ಏರ್ಪಡಿಸಲಾಗಿದೆ ಎಂದು ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ನಳಿನಿ ಅಚ್ಯುತ್ ತಿಳಿಸಿದ್ದಾರೆ.
ಪ್ರವರ್ಗ-1 ರ ಜಾತಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತಾಯ
ಪ್ರವರ್ಗ-1 ರ ಜಾತಿಗಳಿಗೆ ಸೇರಿದ 96 ಜಾತಿಗಳ 46 ಅಲೆಮಾರಿ, ಅರೆ ಅಲೆಮಾರಿ ಜಾತಿಗಳು ಮತ್ತು 376 ಒಳಪಂಗಡಗಳ ಸಮಾಜದ ಜನರ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗುವಂತೆ ಕರ್ನಾಟಕ ರಾಜ್ಯ ಪ್ರವರ್ಗ-1 ರ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಗುತ್ತೂರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕುಂಬಳೂರಿನಲ್ಲಿ 16 ರಂದು ರಥೋತ್ಸವ
ಹರಿಹರ ತಾಲ್ಲೂಕು ಕುಂಬಳೂರು ಗ್ರಾಮದಲ್ಲಿ ಇಂದಿನಿಂದ ಇದೇ ದಿನಾಂಕ 16 ರವರೆಗೆ ಶ್ರೀ ಹನುಮಂತ ದೇವರ ರಥೋತ್ಸವದ ನಿಮಿತ್ಯ ಇಂದು ರಾತ್ರಿ 9.30 ಕ್ಕೆ ಗಿಣಿ ಉತ್ಸವ, ನಾಳೆ ಗುರುವಾರ ರಾತ್ರಿ 9.30 ಕ್ಕೆ ಚಿಗರಿ ಉತ್ಸವ, 14 ರಂದು ರಾತ್ರಿ 9.30 ಕ್ಕೆ ಕುದುರೆ ಉತ್ಸವ, ರಾತ್ರಿ 12 ಕ್ಕೆ ರಥೋತ್ಸವದ ಕಳಸ ಸ್ಥಾಪನೆ, 15 ರಂದು ಬೆಳಿಗ್ಗೆ 8.30 ಕ್ಕೆ ಆನೆ ಉತ್ಸವ ಜರುಗಲಿದೆ.
ಹರೀಶ್ ಮಾತಿನಲ್ಲಿ ಬದ್ದತೆ ಇರಲಿ : ಕಾಂಗ್ರೆಸ್
ಶಾಸಕ ಬಿ.ಪಿ. ಹರೀಶ್ ಅವರು ಬದ್ದತೆಯಿಂದ ಮಾತನಾಡಬೇಕು, ಸಚಿವರ ಬಗ್ಗೆ ಏಕವಚನ ಬಳಸಿದರೆ ತಕ್ಕಪಾಠ ಕಲಿಸಬೇಕಾದಿತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಎಚ್ಚರಿಸಿದ್ದಾರೆ.
ದಾವಣಗೆರೆ ತಾ. ಗೊಲ್ಲರಹಟ್ಟಿಯಲ್ಲಿ ನಾಳೆ ಕೋಡಿ ಚೌಡೇಶ್ವರಿ ಜಾತ್ರೆ
ದಾವಣಗೆರೆ ತಾಲ್ಲೂಕಿನ ಬಸವನಾಳ್ ಗೊಲ್ಲರ ಹಟ್ಟಿಯ ಪೂಜಾರ್ ಹೊಲದಲ್ಲಿ ರುವ ಶ್ರೀ ಕೋಡಿ ಚೌಡೇಶ್ವರಿ ದೇವಿ 35ನೇ ವರ್ಷದ ಜಾತ್ರೆಯು ನಾಳೆ ದಿನಾಂಕ 13 ಮತ್ತು 14ರಂದು ಜರುಗಲಿದೆ.
ನಗರದ ಗೌತಮ್ ಶಾಖೆ ಕಚೇರಿಯಲ್ಲಿ ಇಂದು ಮಹಿಳಾ ದಿನಾಚರಣೆ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿದ್ಯಾನಗರದ ಭಾ.ವಿ.ಪ ಗೌತಮ್ ಶಾಖೆ ಕಚೇರಿಯಲ್ಲಿ ಇಂದು ಬೆಳಿಗ್ಗೆ 11ಕ್ಕೆ ಆಚರಿಸಲಾಗುವುದು.
ಕೊಡಗನೂರು ಕೆರೆ ಏರಿ ದುರಸ್ತಿ : ವಾಹನ ಸಂಚಾರ ಮಾರ್ಗ ಬದಲಾವಣೆಗೆ ಸೂಚನೆ
ಮಾಯಕೊಂಡ : ಹೋಬಳಿಯ ಕೊಡಗನೂರು ಕೆರೆ ಏರಿಯ ಸುಮಾರು 100 ಮೀಟರ್ ತುರ್ತು ದುರಸ್ತಿ ಕಾರ್ಯ ಪ್ರಾರಂಭವಾಗಿದ್ದು, ಕೆರೆ ಏರಿಯ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ನಗರದ ಮಂಜರಿ ಹನುಮಂತಪ್ಪ ಕಾಲೇಜಿನಲ್ಲಿ ಇಂದು
ಶ್ರೀ ಹೊಯ್ಸಳ ವಿದ್ಯಾಸಂಸ್ಥೆಯ ಶ್ರೀ ಮಂಜರಿ ಹನುಮಂತಪ್ಪ ಶಿಕ್ಷಣ ಮಹಾವಿದ್ಯಾಲಯದ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಇಂದು ಬೆಳಿಗ್ಗೆ 11ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ನಗರದಲ್ಲಿ ಇಂದು ಶ್ರೀ ರೇವಣಸಿದ್ಧೇಶ್ವರರ ಜಯಂತಿ
ಶ್ರೀ ಬೀರೇಶ್ವರ ದೇವಸ್ಥಾನ ಜಾಗದ ಅಭಿವೃದ್ಧಿ ಟ್ರಸ್ಟ್, ಶ್ರೀ ಬೀರೇಶ್ವರ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಇಂದು ಬೆಳಿಗ್ಗೆ 10.30 ಕ್ಕೆ ಪಿ.ಬಿ. ರಸ್ತೆಯ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಐತಿಹಾಸಿಕ ಪುರುಷ, ಆದಿ ಜಗದ್ಗುರು ಶ್ರೀ ರೇವಣಸಿದ್ಧೇಶ್ವರರ ಜಯಂತಿ ಆಚರಿಸಲಾಗುತ್ತದೆ.
ಸಂಸದರ ಹುಟ್ಟುಹಬ್ಬ : ವಿನೂತನವಾಗಿ ಆಚರಣೆ
ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಮ್ಮ ಹುಟ್ಟುಹಬ್ಬ ಆಚರಣೆಗಾಗಿ ದುಂದು ವೆಚ್ಚ ಮಾಡಬೇಡಿ ಎಂದು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವಿಶೇಷವಾಗಿ ಆಚರಿಸಲು ಅಭಿಮಾನಿಗಳು ತೀರ್ಮಾನಿಸಿದ್ದಾರೆ.
ಇಂದು ಮಜ್ಜಿಗೆ ವಿತರಣೆ
ಕರುಣಾ ಜೀವ ಕಲ್ಯಾಣ ಟ್ರಸ್ಟ್ನಿಂದ ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಶ್ರೀ ಶ್ರೀ ಬಸವಪ್ರಭು ಸ್ವಾಮೀಜಿ, ವಿರಕ್ತ ಮಠ, ದಾವಣಗೆರೆ ಇವರು ಇಂದಿನ ದಾನಿಗಳಾಗಿದ್ದಾರೆ.
14 ರಂದು ರಾಂ ಅಂಡ್ ಕೋ ಸರ್ಕಲ್ ಗೆಳೆಯರ ಬಳಗದಿಂದ ಹೋಳಿ
ನಗರದ ರಾಂ ಅಂಡ್ ಕೋ ಸರ್ಕಲ್ ಗೆಳೆಯರ ಬಳಗದ ವತಿಯಿಂದ ಇದೇ ದಿನಾಂಕ 14 ರ ಶುಕ್ರವಾರ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹೋಳಿ ಆಚರಿಸಲಾಗುವುದು ಎಂದು ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿ ಅಧ್ಯಕ್ಷ ಕೆ. ನಾಗೇಂದ್ರ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೆರೆಗಳ ಹೂಳೆತ್ತುವ, ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಆಗ್ರಹ
ಮಳೆಗಾಲ ಪ್ರಾರಂಭದ ವೇಳೆಗೆ ಕೆರೆಗಳ ಹೂಳೆತ್ತುವ, ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕೆಂದು ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನದ ಬಲ್ಲೂರು ರವಿಕುಮಾರ್ ಒತ್ತಾಯಿಸಿದರು.
21ರಿಂದ ಸಿಇಟಿ ತರಬೇತಿ ಶಿಬಿರ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಇದೇ ದಿನಾಂಕ 21ರಿಂದ ಉಚಿತ ಸಿಇಟಿ ತರಬೇತಿ ಶಿಬಿರ ನಡೆಯಲಿದೆ.
ಇಂದು ವಿಶ್ವ ಫ್ಲಂಬರ್ ದಿನಾಚರಣೆ
ಕಾವೇರಿ ಮಾತಾ ಪ್ಲಂಬರ್ ಕಾರ್ಮಿಕರ ಸಂಘದಿಂದ ವಿಶ್ವ ಫ್ಲಂಬರ್ ದಿನಾಚರಣೆಯ ಪ್ರಯುಕ್ತ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಬೆಳಿಗ್ಗೆ 8ಕ್ಕೆ ಲಿಂ.ಡಾ. ಪಂಡಿತ್ ಪುಟ್ಟರಾಜ ಗವಾಯಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಅಲ್ಲಿನ ಮಕ್ಕಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿರುತ್ತದೆ
ನಗರದಲ್ಲಿ ಇಂದು ಜಿಲ್ಲಾ ಮಟ್ಟದ ಯುವಜನರ ಸಂಕಲ್ಪ ಸಮಾವೇಶ
ಎಐಡಿವೈಓ ವತಿಯಿಂದ ಇಂದು ಬೆಳಿಗ್ಗೆ 10.30 ಕ್ಕೆ ಎ.ಆರ್.ಜಿ. ಕಾಲೇಜಿನ ಸಭಾಂಗಣದಲ್ಲಿ `ಜಿಲ್ಲಾ ಮಟ್ಟದ ಯುವ ಜನರ ಸಂಕಲ್ಪ ಸಮಾವೇಶ' ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿಂದು ಮಹಿಳಾ ದಿನಾಚರಣೆ
ಆರ್.ಎಲ್ ಕಾನೂನು ಕಾಲೇಜಿನಲ್ಲಿ ಇಂದು ಬೆಳಿಗ್ಗೆ 10ಕ್ಕೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.
ನಗರದಲ್ಲಿ ಇಂದು ಶ್ರೀರಾಮಸೇನೆ ಪ್ರತಿಭಟನೆ
ಆರ್ಟಿಓ ಕಚೇರಿ ಮುಂಭಾಗ ದಲ್ಲಿ ಇಂದು ಬೆಳಗ್ಗೆ 11.30ಕ್ಕೆ ಆರ್ಟಿಓ ಕಚೇರಿಯ ಕೆಲ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪ್ರಕರಣ ದಾಖಲಾಗಿರುವುದರಿಂದ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಶ್ರೀರಾಮ ಸೇನೆ ಪ್ರತಿಭಟನೆ ನಡೆಸಲಿದೆ.
ಆನ್ಲೈನ್ನಲ್ಲಿ ಇಂದು ಶರಣ ಚಿಂತನ ಗೋಷ್ಠಿ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಆನ್ ಲೈನ್ನಲ್ಲಿ ಶರಣ ಚಿಂತನ ಗೋಷ್ಠಿ ಇಂದು ಸಂಜೆ 7 ರಿಂದ 9ರವರೆಗೆ ನಡೆಯಲಿದೆ. ಡಾ. ಎನ್.ಕೆ. ಲೋಲಾಕ್ಷಿ ವಚನ ಸ್ತ್ರೀವಾದ ವಿಷವಯಾಗಿ ಅನುಭಾವದ ನುಡಿಗಳನ್ನಾಡುವರು.
ಕದಳಿ ಮಹಿಳಾ ವೇದಿಕೆಯಿಂದ ಇಂದು ಮಹಿಳಾ ದಿನಾಚರಣೆ
ಕದಳಿ ಮಹಿಳಾ ವೇದಿಕೆ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ದತ್ತಿ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10 ಗಂಟೆಗೆ ಕನ್ನಡ ಕುವೆಂಪು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
22ಕ್ಕೆ ಸರ್.ಎಂ.ವಿ ವೈಭವ
ವೃತ್ತಿ ರಂಗಭೂಮಿ ರಂಗಾಯಣದ ವತಿಯಿಂದ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಇದೇ ದಿನಾಂಕ 15ರಿಂದ 17ರ ವರೆಗೆ `ರಾಷ್ಟ್ರೀಯ ವೃತ್ತಿ ರಂಗೋತ್ಸವ-2025' ನಡೆಯಲಿದೆ.
ಕುಂಬಳೂರಿನಲ್ಲಿ ಇಂದು ಕಂಕಣಧಾರಣೆ, 16 ರಂದು ರಥೋತ್ಸವ
ಹರಿಹರ ತಾಲ್ಲೂಕು ಕುಂಬಳೂರು ಗ್ರಾಮದಲ್ಲಿ ಇಂದಿನಿಂದ ಇದೇ ದಿನಾಂಕ 16 ರವರೆಗೆ ಶ್ರೀ ಹನುಮಂತ ದೇವರ ರಥೋತ್ಸವ ದ ನಿಮಿತ್ಯ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಚರಂಡಿಯಲ್ಲಿ ಹೆಣ್ಣು ಶಿಶು ಭ್ರೂಣ ಪತ್ತೆ : ದೂರು ದಾಖಲು
ಹರಿಹರ : ನಗರದ ಹೈಸ್ಕೂಲ್ ಬಡಾವಣೆಯ 3ನೇ ಮೇನ್, 2ನೇ ಕ್ರಾಸ್ನಲ್ಲಿರುವ ಬೊಂಗಾಳೆ ನರ್ಸಿಂಗ್ ಹೋಂ ಬಳಿಯ ಗೋಡೆಗೆ ಹೊಂದಿ ಕೂಂಡಿರುವ ಚರಂಡಿಯಲ್ಲಿ ಭಾನುವಾರ ಹೆಣ್ಣು ಶಿಶುವಿನ ಭ್ರೂಣ ಪತ್ತೆಯಾಗಿದೆ.
ಹಿರೇಕಲ್ಮಠದಲ್ಲಿ ನಾಳೆ ಸಾಮೂಹಿಕ ವಿವಾಹ
ಹೊನ್ನಾಳಿ : ಇಲ್ಲಿನ ಹಿರೇಕಲ್ಮಠದಲ್ಲಿ ನಾಳೆ ದಿನಾಂಕ 10 ಮತ್ತು 11ರಂದು ಲಿಂ. ಮೃತ್ಯುಂಜಯ ಶಿವಾಚಾರ್ಯ ಶ್ರೀಗಳ 55ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ 10ನೇ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮ ನಡೆಯಲಿದೆ
ನಗರದಲ್ಲಿ ನಾಳೆ ಶಾಲಾ – ಕಾಲೇಜು ಅಂಗಳದಲ್ಲಿ ಕಸಾಪ ಉಪನ್ಯಾಸ ಕಾರ್ಯಕ್ರಮ
ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವು ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಾಡಿದ್ದು ದಿನಾಂಕ 11ರ ಮಂಗಳವಾರ ಮಧ್ಯಾಹ್ನ 3 ಕ್ಕೆ ನಡೆಯಲಿದೆ.
ತಾರೇಹಳ್ಳಿ: ಇಂದು ಗಜ ವಾಹನ ಉತ್ಸವ
ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ರಥೋತ್ಸವದ ಪ್ರಯುಕ್ತ ಇಂದು ಗಜ ವಾಹನ ಉತ್ಸವ ಹಾಗೂ 11ರ ಮಂಗಳವಾರ ಗರುಡ ವಾಹನ ಉತ್ಸವ ನಡೆಯಲಿದೆ
ದೃಶ್ಯಕಲಾ ಮಹಾವಿದ್ಯಾಲಯದಲ್ಲಿ 15, 16, 17ಕ್ಕೆ ರಾಷ್ಟ್ರೀಯ ವೃತ್ತಿ ರಂಗೋತ್ಸವ
ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ವೃತ್ತಿ ರಂಗಭೂಮಿಯಿಂದ `ರಾಷ್ಟ್ರೀಯ ವೃತ್ತಿ ರಂಗೋತ್ಸವ'ವು ಇದೇ ದಿನಾಂಕ 15, 16, 17ರಂದು ಏರ್ಪಡಿಸಲಾಗಿದೆ.
ದಾ.ವಿ.ವಿ 12ನೇ ವಾರ್ಷಿಕ ಘಟಿಕೋತ್ಸವದ ಅಂತಿಮ ರ್ಯಾಂಕ್ ಪಟ್ಟಿ ಪ್ರಕಟ
ದಾವಣಗೆರೆ ವಿಶ್ವವಿದ್ಯಾನಿಯಲದ 12ನೇ ವಾರ್ಷಿಕ ಘಟಿಕೋತ್ಸವಕ್ಕೆ ಸಂಬಂಧಿಸಿದಂತೆ ಹೊರಡಿಸಿದ ತಾತ್ಕಾಲಿಕ ರ್ಯಾಂಕ್ ಪಟ್ಟಿಗೆ ಯಾವುದೇ ಆಕ್ಷೇಪಣೆ ಬರದಿದ್ದರಿಂದ 2023-24ನೇ ಶೈಕ್ಷಣಿಕ ಸಾಲಿನ ಸ್ನಾತಕ ಬಿಇಡಿ ಹಾಗೂ ಪದವಿ ಪರೀಕ್ಷೆಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಜನರ ನೀರಿನ ದಾಹ ತಣಿಸುವ ಸತ್ಕಾರ್ಯಕ್ಕೆ ಮುಂದಾಗಲು ಶಿವನಕೆರೆ ಬಸವಲಿಂಗಪ್ಪ ಕರೆ
ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚಾಗುತ್ತಿದ್ದು ಜನ, ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೆ ಇನ್ನೊಂದೆಡೆ ನೀರಿನ ಕೊರತೆ ಕಾಡುತ್ತಿದೆ.
ಗೊಲ್ಲರಹಟ್ಟಿಯ ಕೋಡಿ ಚೌಡೇಶ್ವರಿ ದೇವಿ ಜಾತ್ರೆ 13ಕ್ಕೆ
ತಾಲ್ಲೂಕಿನ ಬಸವನಾಳ್ ಗೊಲ್ಲರ ಹಟ್ಟಿಯ ಪೂಜಾರ್ ಹೊಲದಲ್ಲಿ ರುವ ಶ್ರೀ ಕೋಡಿ ಚೌಡೇಶ್ವರಿ ದೇವಿ 35ನೇ ವರ್ಷದ ಜಾತ್ರೆಯು ಇದೇ ದಿನಾಂಕ 13 ಮತ್ತು 14ರಂದು ಜರುಗಲಿದೆ.
ರೇಣುಕಾಚಾರ್ಯ ಜಯಂತಿ 12ಕ್ಕೆ
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಶ್ರೀ ಜಗದ್ಗುರು ರೇಣು ಕಾಚಾರ್ಯ ಜಯಂತಿ ಯುಗ ಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವದ ಅಂಗವಾಗಿ ನಾಡಿದ್ದು ದಿನಾಂಕ 11 ರಿಂದ
14 ರವರೆಗೆ ವಿವಿಧ ಕಾರ್ಯಕ್ರಮ ಜರುಗಲಿವೆ.
ಇಂದು ಹೈನುಗಾರಿಕೆ ತರಬೇತಿ
ದಾವಣಗೆರೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಹೈನುಗಾರಿಕೆ ತರಬೇತಿಯನ್ನು ಇಂದು ಮತ್ತು ನಾಳೆ ಆಯೋಜಿಸಲಾಗಿದೆ.
ಕ್ರೀಡಾಂಗಣ ನಿರ್ವಹಣೆಗೆ ಮಾರ್ಗಸೂಚಿ ಪಾಲಿಸಲು ಸರ್ಕಾರದ ಆದೇಶ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾ ಕ್ರೀಡಾಂಗಣದ ದೈನಂದಿನ ನಿರ್ವ ಹಣೆಗಾಗಿ ನಿರ್ವಹಣಾ ಸಮಿತಿ ರಚಿಸಿ ಕೆಲವು ಮಾರ್ಗ ಸೂಚಿಗಳನ್ನು ಅನುಸರಿಸುವಂತೆ ಆದೇಶ ಹೊರಡಿಸಿದೆ.

ಆನೆಕೊಂಡದಲ್ಲಿ ನಾಳೆ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ
ಶ್ರೀ ಕ್ಷೇತ್ರ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ಕ್ಷೇತ್ರ ನೀಲಾನಹಳ್ಳಿಯ ಶ್ರೀ ಆಂಜನೇಯ ಸ್ವಾಮಿಗಳ ರಥೋತ್ಸವವು ನಾಡಿದ್ದು ದಿನಾಂಕ 14ರ ಶುಕ್ರವಾರ ರಾತ್ರಿ 10.30ಕ್ಕೆ ನಡೆಯಲಿದೆ ಎಂದು ದೇವಸ್ಥಾನದ ಕನ್ವೀನರ್ ಗೌಡ್ರು ಅಜ್ಜಪ್ಪ ತಿಳಿಸಿದ್ದಾರೆ.

ಎ.ಆರ್. ಇಂದಿರಾ ಸಿದ್ದೇಶ್ಗೆ ಅಕ್ಕ ರಾಜ್ಯ ಪ್ರಶಸ್ತಿ ಪುರಸ್ಕಾರ
ಸ್ಥಳೀಯ ತರಳಬಾಳು ನಗರದವರಾದ ಜರೇಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಎ.ಆರ್. ಇಂದಿರಾ ಸಿದ್ದೇಶ್ ಅವರಿಗೆ ಅವರ ಶಿಕ್ಷಣ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ, ಅಕ್ಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಳ್ಳಿ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಹೊರ ತನ್ನಿ
ಮಲೇಬೆನ್ನೂರು : ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳೇ ತಯಾರು ಮಾಡಿದ ವಿಜ್ಞಾನ ವಸ್ತುಗಳ ಪ್ರದರ್ಶನ ನಡೆಯಿತು.

ಎಸ್ಓಜಿ ಕಾಲೋನಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ತಟ್ಟೆ ವಿತರಣೆ
ನಗರದ ದಕ್ಷಿಣ ವಲಯದ ಎಸ್ಓಜಿ ಕಾಲೋನಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಾರದಾ ಪೂಜೆ ನಡೆಯಿತು.

ಸೇವೆ ಮೂಲಕ ಅರಿವು ಮೂಡಿಸುವುದೇ ಎನ್ನೆಸ್ಸೆಸ್ ಉದ್ದೇಶ
ಹರಪನಹಳ್ಳಿ : ಸೇವೆ ಇಲ್ಲದ ಜೀವನ ಅದು ಜೀವನವೇ ಅಲ್ಲ ಎಂದು ಪ್ರಾಚಾರ್ಯ ಡಾ. ಎಸ್.ಎಂ. ಸಿದ್ದಲಿಂಗಮೂರ್ತಿ ಹೇಳಿದರು.

ಮಕ್ಕಳ ಆಸಕ್ತಿಗೆ ಪಾಲಕರು ಸಹಕಾರ ನೀಡಬೇಕು
ಮಕ್ಕಳ ಆಲೋಚನೆ ಹಾಗೂ ಅವರ ಆಸಕ್ತಿಯನ್ನು ಪಾಲಕರು ಗುರುತಿಸಿ, ಸಹಕಾರ ನೀಡಬೇಕು. ಆಗ ಮಕ್ಕಳ ಭವಿಷ್ಯ ಉಜ್ವಲ ವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪಲತಾ ಹೇಳಿದರು.

ಎಸ್.ಎಂ. ಕೃಷ್ಣ ನಗರದ ತೆರವು ಕಾರ್ಯ ನಿಲ್ಲಿಸುವಂತೆ ನಿವಾಸಿಗಳ ಮನವಿ
ಎಸ್.ಎಂ. ಕೃಷ್ಣ ನಗರದಲ್ಲಿನ ಮನೆಗಳನ್ನು ತೆರವು ಮಾಡಲು ಸೂಚಿಸಿದ ಹೈಕೋರ್ಟ್ ಆದೇಶವನ್ನು ವಿರೋಧಿಸಿ, ತೆರವು ಕಾರ್ಯ ತಡೆಹಿಡಿಯುವಂತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ವಿದ್ಯುತ್ ಪೂರೈಕೆ ಸಮಸ್ಯೆ: ರೈತರಿಂದ ಕೆಪಿಟಿಸಿಎಲ್ ಘಟಕಕ್ಕೆ ಬೀಗ, ಅಧಿಕಾರಿಗಳಿಂದ ರೈತರ ಮನವೊಲಿಕೆ
ಮಾಯಕೊಂಡ : ಹೋಬಳಿಯ ಓಬೇನಹಳ್ಳಿ, ಹೊನ್ನಾ ನಾಯ್ಕನಹಳ್ಳಿ, ನರಗನಹಳ್ಳಿ, ದಿಂಡದಹಳ್ಳಿ ಗ್ರಾಮದ ಐಪಿ ಸೆಟ್ಗಳಿಗೆ ನಿಗದಿತವಾಗಿ ವಿದ್ಯುತ್ ಪೂರೈಸುತ್ತಿಲ್ಲ, ಕೂಡಲೇ ಅವ್ಯವಸ್ಥೆ ಸರಿಪಡಿಸಬೇಕು

ಮಹಿಳಾ ನಿಲಯಕ್ಕೆ ಪಡಿತರಕ್ಕೆ ಚೆಕ್ ವಿತರಣೆ
ಫೋಟೋಗ್ರಾಫರ್ಸ್ ಯೂತ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ವಿಶೇಷ ದತ್ತು ಸಂಸ್ಥೆ ರಾಜ್ಯ ಮಹಿಳಾ ನಿಲಯ ಇವರಿಗೆ ಒಂದು ತಿಂಗಳ ಪಡಿತರಕ್ಕಾಗಿ 9,124 ರೂ.ಗಳ ಚೆಕ್ ನೀಡಲಾಯಿತು.

ಜಿಗಳಿ: ಇಂದಿನಿಂದ ಶ್ರೀ ರಂಗನಾಥ ಸ್ವಾಮಿ ಜಾತ್ರೆ – ನಾಳೆ ತೇರು
ಮಲೇಬೆನ್ನೂರು ಸಮೀಪದ ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿ ರಥೋತ್ಸವದ ಜಾತ್ರಾ ಮಹೋತ್ಸವವು ಇಂದಿನಿಂದ ಇದೇ ದಿನಾಂಕ 18ರವರೆಗೆ ಜರುಗಲಿದೆ.

ತರಗನಹಳ್ಳಿಯಲ್ಲಿ ವೈಭವದ ಶ್ರೀ ಬಸವೇಶ್ವರ ರಥೋತ್ಸವ
ಹೊನ್ನಾಳಿ : ತಾಲ್ಲೂಕಿನ ತರಗನಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ನಡೆಯಿತು.

ಜಗಳೂರಿನ ಸರ್ಕಾರಿ ಆಸ್ಪತ್ರೆ ಲ್ಯಾಬ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯ
ಜಗಳೂರು : ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ಲ್ಯಾಬ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಕಾರ್ಯಕರ್ತರು ತಾಲ್ಲೂಕು ಆಡಳಿತ ಅಧಿಕಾರಿಗೆ ಮನವಿ ಸಲ್ಲಿಸಿದರು.

ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಲು ಆಗ್ರಹ
ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಆಗ್ರಹಿಸಿ ನಗರದ ಸಿದ್ದವೀರಪ್ಪ ಬಡಾವಣೆಯ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿ ಮುಂಭಾಗ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಮತ್ತು ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಮಂಗಳವಾರ ಪ್ರತಿಭಟನಾ ಮತ ಪ್ರದರ್ಶಿಸಿತು.

ನಗರದಲ್ಲಿ ಇಂದು ರೇಣುಕಾಚಾರ್ಯರ ಜಯಂತಿ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 12 ರ ಬುಧವಾರ ಬೆಳಿಗ್ಗೆ 11.30 ಕ್ಕೆ ನಗರದ ಅಭಿನವ ರೇಣುಕಾ ಮಂದಿರದಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ, ಯುಗಮಾನೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ

15ರಂದು ಕೊಡದಗುಡ್ಡದ ಶ್ರೀ ವೀರಭದ್ರಸ್ವಾಮಿ ರಥೋತ್ಸವ
ಜಗಳೂರು ತಾಲ್ಲೂಕಿನ ಕೊಡದ ಗುಡ್ಡದ ಶ್ರೀ ವೀರಭದ್ರಸ್ವಾಮಿ ರಥೋತ್ಸವವು ಇದೇ ದಿನಾಂಕ 15 ರ ಶನಿವಾರ ಜರುಗಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಅಗ್ನಿಕುಂಡ ಮತ್ತು ಸಾಯಂಕಾಲ 4.30ಕ್ಕೆ ರಥೋತ್ಸವ ನಡೆಯಲಿದೆ.

ದೊಡ್ಡಬಾತಿಯಲ್ಲಿ ನಾಳೆ ತೇರು
ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ಮಹಾರಥೋ ತ್ಸವವು ಇದೇ ದಿನಾಂಕ 13 ಗುರುವಾರ ರಾತ್ರಿ 12 ಗಂಟೆ ನಂತರ ನಡೆಯ ಲಿದೆ. ಇಂದು ಆವರಗೊಳ್ಳದ ಶ್ರೀ ವೀರಭದ್ರೇ ಶ್ವರ ಸ್ವಾಮಿಯು ದೊಡ್ಡಬಾತಿಗೆ ದಯಪಾಲಿಸಲಿದೆ.

ತಾರೇಹಳ್ಳಿಯಲ್ಲಿ ಇಂದು ರಥೋತ್ಸವ
ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ರಥೋತ್ಸ ವವು ಇಂದು ಸಂಜೆ 7 ಗಂಟೆಗೆ ನಡೆಯಲಿದೆ. ನಾಳೆ ಗುರುವಾರ ಜಾತ್ರೆ, ಶುಕ್ರವಾರ ಓಕಳಿ ಉತ್ಸವ ನಡೆಯಲಿದೆ.

ರಾಣೇಬೆನ್ನೂರಿನಲ್ಲಿ ಇಂದು ಭಕ್ತರ ಸಂಪರ್ಕ ಅಭಿಯಾನ
ಆದಿ ಶಕ್ತಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಹೇಮಪುರ ಮಹಾಪೀಠ ವಿಶ್ವ ವೀರಾಂಜನೇಯ ಮಹಾಸಂಸ್ಥಾನದ ಭಕ್ತರ ಸಂಪರ್ಕ ಅಭಿಯಾನ ಕಾರ್ಯಕ್ರಮ ನಡೆಯಲಿದ್ದು, ಹೊನ್ನಾವರ ತಾಲ್ಲೂಕು ಗೇರುಸೊಪ್ಪ ಬಂಗಾರು ಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರುಗಳು ಸಾನ್ನಿಧ್ಯ ವಹಿಸುವರು.

ಹೋಳಿ : ಬಲವಂತವಾಗಿ ಬಣ್ಣ ಹಾಕುವಂತಿಲ್ಲ
ಮಲೇಬೆನ್ನೂರು, ಮಾ.10- ಹೋಳಿ ಹಬ್ಬ ಆಚರಣೆ ವೇಳೆ ಬಲವಂತವಾಗಿ ಯಾರ ಮೇಲೂ ಬಣ್ಣ ಹಾಕಬೇಡಿ. ಅಂದು ದ್ವಿತೀಯ ಪಿಯುಸಿ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳ ಮೇಲೂ ಬಣ್ಣ ಹಾಕಬೇಡಿ ಎಂದು ಮಲೇಬೆನ್ನೂರು ಪಿಎಸ್ಐ ಪ್ರಭು ಕೆಳಗಿನಮನಿ ಕಟ್ಟುನಿಟ್ಟಾಗಿ ಹೇಳಿದರು.

ಇಬ್ಬರು ಕಳ್ಳರ ಬಂಧನ : 10 ಮೋಟಾರ್ ಬೈಕ್ಗಳು ವಶ
ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಡಾವಣೆ ಪೊಲೀಸರು ಪತ್ತೆೆ ಹಚ್ಚಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಆಗಲಿ
ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇತ್ತೀಚಿಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಬಯಲಾಟ ಪ್ರದರ್ಶನ ಹಾಗೂ ಬಯಲಾಟ ಗೀತೆಗಳ ಕಾರ್ಯಕ್ರಮ ನಡೆಯಿತು.

ತಾರೇಹಳ್ಳಿಯಲ್ಲಿ ನಾಳೆ ರಂಗನಾಥಸ್ವಾಮಿ ತೇರು
ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ರಥೋತ್ಸ ವವು ಇದೇ ದಿನಾಂಕ 12ರ ಬುಧವಾರ ಸಂಜೆ 7 ಗಂಟೆಗೆ ನಡೆಯಲಿದೆ. ಇಂದು ಗರುಡ ವಾಹನ ಉತ್ಸವ ನಡೆಯಲಿದೆ.

ಜಿಗಳಿ : ಇಂದಿನಿಂದ ಶ್ರೀ ರಂಗನಾಥ ಸ್ವಾಮಿ ಜಾತ್ರೆ – ನಾಳೆ ತೇರು
ಮಲೇಬೆನ್ನೂರು ಸಮೀಪದ ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿ ರಥೋತ್ಸವದ ಜಾತ್ರಾ ಮಹೋತ್ಸವವು ಇಂದಿನಿಂದ ದಿನಾಂಕ 18ರವರೆಗೆ ಜರುಗಲಿದೆ.

ಎಸ್ಸಿಪಿ, ಟಿಎಸ್ಪಿ ಯೋಜನೆ : ಮಾರ್ಚ್ ಅಂತ್ಯದೊಳಗೆ ಗುರಿ ಸಾಧಿಸಲು ಡಿಸಿ ಸೂಚನೆ
2024-25 ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಅನುಷ್ಟಾನಗೊಳಿಸುತ್ತಿರುವ ಅಭಿವೃದ್ದಿ ಕಾರ್ಯ ಕ್ರಮಗಳ ಸಂಪೂರ್ಣ ಪ್ರಗತಿಯನ್ನು ಮಾರ್ಚ್ ಅಂತ್ಯದೊಳಗೆ ಸಾಧಿಸಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.

ಬಜೆಟ್ನಲ್ಲಿ ವಿಕಲಚೇತನರ ಬೇಡಿಕೆ ಕಡೆಗಣನೆ
ರಾಜ್ಯ ಸರ್ಕಾರದ 2025-26ನೇ ಸಾಲಿನ ಆಯ ವ್ಯಯದಲ್ಲಿ ವಿಕಲಚೇತನರ ಬೇಡಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ರಾಜ್ಯ ವಿಕಲಚೇತನರ ಆರ್.ಪಿ.ಡಿ ಟಾಸ್ಕ್ ಪೋರ್ಸ್ನ ಗೌರವಾಧ್ಯಕ್ಷೆ ಎಂ. ವಿಜಯಲಕ್ಷ್ಮಿ ಬೇಸರ ವ್ಯಕ್ತಪಡಿಸಿದ್ದಾರೆ.

ವಚನಾಮೃತ ಬಳಗದಿಂದ ಮಹಿಳಾ ದಿನಾಚರಣೆ
ವಚನಾಮೃತ ಬಳಗ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಸಮೀಪದ ಆವರಗೆರೆಯ ಭಗವಾನ್ ಮಹಾವೀರ ಗೋಶಾಲೆಯಲ್ಲಿ ಶನಿವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ನೆರವೇರಿತು.

ಟೀಕಾಕಾರರಿಗೆ ಅಭಿವೃದ್ಧಿ ಕೆಲಸಗಳೇ ಉತ್ತರಿಸಲಿವೆ
ಜಗಳೂರು : ಟೀಕಾಕಾರರಿಗೆ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಮೂಲಕ ಉತ್ತರಿಸುವೆ ಎಂದು ಶಾಸಕ ಬಿ. ದೇವೇಂದ್ರಪ್ಪ ಮಾಜಿ ಶಾಸಕರುಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಕುಟುಂಬದ ಸಬಲೀಕರಣಕ್ಕೆ ಮಹಿಳೆಯೇ ಸ್ಫೂರ್ತಿ
ತುಂಬು ಕುಟುಂಬದಲ್ಲಿ ಸಂಸ್ಕೃತಿ, ಸಂಸ್ಕಾರಗಳ ಸಬಲೀಕರಣಕ್ಕೆ ಮಹಿಳೆಯರೇ ಸ್ಪೂರ್ತಿ ಎಂದು ಡಾ.ಆರತಿ ಸುಂದರೇಶ್ ಹೇಳಿದರು.

ಭವಿಷ್ಯದ ಬಗ್ಗೆ ಕನಸು ಕಾಣಬೇಕು
ನಗರದ ಮಾಂಟೆಸೊರಿ ಶಾಲೆಯಲ್ಲಿ ನಡೆದ ವಸ್ತು ಪ್ರದರ್ಶನವನ್ನು ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಗುರುಸಿದ್ಧ ಸ್ವಾಮಿ ಉದ್ಘಾಟಿಸಿದರು.

ರೇಣುಕಾ ಪ್ರಸಾದ್ಗೆ ಪಿಹೆಚ್ಡಿ
ಹೊನ್ನಾಳಿ : ಹಿರೇಕಲ್ಮಠದ ಅನ್ನದಾನಯ್ಯ ಮತ್ತು ನಾಗರತ್ನ ದಂಪತಿ ಪುತ್ರ ರೇಣುಕಾ ಪ್ರಸಾದ್ ಅವರಿಗೆ ಅಮೇರಿಕನ್ ಮ್ಯಾನೇ ಜ್ಮೆಂಟ್ ಯುನಿವರ್ಸಿಟಿ ಪಿಹೆಚ್ಡಿ ಪದವಿ ನೀಡಿದೆ.

ನಂದಿಗುಡಿಯಲ್ಲಿ ಬಸವಣ್ಣನ ವೈಭವದ ರಥೋತ್ಸವ
ಮಲೇಬೆನ್ನೂರು : ಸುಕ್ಷೇತ್ರ ನಂದಿಗುಡಿ ಗ್ರಾಮದಲ್ಲಿ ಬಸವೇಶ್ವರ ದೇವರ ರಥೋತ್ಸವ ಮತ್ತು ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವು ಭಾನುವಾರ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದೊಂದಿಗೆ ಜರುಗಿದವು.

ಮಹಿಳೆಯರ ಸಬಲೀಕರಣ ಶಿಕ್ಷಣದಿಂದ ಮಾತ್ರ ಸಾಧ್ಯ
ಮಹಿಳೆಯರ ಸಬಲೀಕರಣವು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣದಿಂದ ಆರ್ಥಿಕ ಸ್ವಾವಲಂ ಬನೆಯನ್ನು ಸಾಧಿಸಲಾಗುವುದು ಎಂದು ನೂತನ ವಿದ್ಯಾಸಂಸ್ಥೆ ಅಧ್ಯಕ್ಷ ಪರಶುರಾಮನಗೌಡ ಹೇಳಿದರು.

ಬಿ.ಎಸ್.ಸಿ ಎಕ್ಸ್ ಕ್ಯೂಸಿವ್ನಲ್ಲಿ ಮಹಿಳಾ ದಿನಾಚರಣೆ
ನಗರದ ಜಿ.ಎಂ. ವಿಶ್ವವಿದ್ಯಾನಿಲಯದ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಬಿ.ಎಸ್.ಸಿ ಎಕ್ಸ್ಕ್ಲೂಸಿವ್ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ `ವಾಯ್ಸ್ ಆಫ್ ವುಮೆನ್' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.