ಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗೆ ನೀರು ಬಿಡಲಾಗಿದ್ದು ಕೊನೆ ಹಂತದ ರೈತರಿಗೆ ನೀರು ತಲುಪಿಸಲು ಅನಧಿಕೃತ ಪಂಪ್ಸೆಟ್ ತೆರವು ಮಾಡಲಾಗುತ್ತಿದೆ.
ಇಂದಿನಿಂದ ಸೂಳೆಕೆರೆ ಹಳ್ಳಕ್ಕೆ ನೀರು ಬಿಡುಗಡೆ
ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾ. 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಚಿತ್ರದುರ್ಗದಿಂದ ಕಾರಜೋಳ ಸ್ಪರ್ಧೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರ ದಿಂದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪರ್ಧಿಸ ಲಿದ್ದಾರೆ ಎಂದು ಬಿಜೆಪಿ ಘೋಷಿ ಸಿದೆ. ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ನಗರದಲ್ಲಿ ಇಂದು ನ್ಯಾಯವಾದಿಗಳಿಗೆ ನ್ಯಾಯ ವಿಜ್ಞಾನ ಕಾರ್ಯಕ್ರಮ
ಜಿಲ್ಲಾ ವಕೀಲರ ಸಂಘದಿಂದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಉಪನ್ಯಾಸ ಮಾಲಿಕೆ-7 ನ್ಯಾಯವಾದಿಗಳಿಗೆ ನ್ಯಾಯ ವಿಜ್ಞಾನ ಕಾರ್ಯಕ್ರಮವನ್ನು ಇಂದು ಮಧ್ಯಾಹ್ನ 2.30ಕ್ಕೆ ಆಯೋಜಿಸಲಾಗಿದೆ.
ಸಚಿವ ತಂಗಡಗಿ ಹೇಳಿಕೆಗೆ ಡಿ. ಬಸವರಾಜ್ ಸಮರ್ಥನೆ
ಸಚಿವ ಶಿವರಾಜ್ ತಂಗಡಗಿಯವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸಮರ್ಥಿಸಿಕೊಂಡಿದ್ದಾರೆ.
ದೊಣೆಹಳ್ಳಿ ದಾಸೋಹ ಸಂಸ್ಕೃತಿ ಉತ್ಸವದಲ್ಲಿ ಇಂದು
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ವತಿಯಿಂದ ನಡೆಯುತ್ತಿರುವ ದಾಸೋಹ ಸಂಸ್ಕೃತಿ ಉತ್ಸವದಲ್ಲಿ ಇಂದು ಬೆಳಿಗ್ಗೆ 10.30 ಕ್ಕೆ ಉಚಿತ ಆರೋಗ್ಯ ತಪಾಸಣಾ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸಚಿವ ತಂಗಡಗಿ ಪದಚ್ಯುತಿಗೆ ಬಿಜೆಪಿ ಆಗ್ರಹ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವವರ ಕಪಾಳಕ್ಕೆ ಹೊಡೆಯಿರಿ ಎಂದಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಿಗೊಳಿಸುವಂತೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ಸಾಣೇಹಳ್ಳಿಯಲ್ಲಿ ಏ.12 ರಿಂದ `ಮಕ್ಕಳ ಹಬ್ಬ’ಕ್ಕೆ ಆಹ್ವಾನ
ಸಾಣೇಹಳ್ಳಿ, ಮಾ.27- ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಮತ್ತು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 12 ರಿಂದ 30ರವರೆಗೆ `ಮಕ್ಕಳ ಹಬ್ಬ' (ಬೇಸಿಗೆ ಶಿಬಿರ) ವನ್ನು ಆಯೋಜಿಸಲಾಗಿದೆ.
ಸುಂಕದಕಟ್ಟೆಯಲ್ಲಿ ಇಂದು ಶ್ರೀ ನರಸಿಂಹ ಸ್ವಾಮಿ ರಥೋತ್ಸವ
ಹೊನ್ನಾಳಿ ತಾಲ್ಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀ ನರಸಿಂಹ ಸ್ವಾಮಿ ದೊಡ್ಡ ರಥೋತ್ಸವ ಇಂದು ಬೆಳಗಿನ ಜಾವ 4.30ಕ್ಕೆ ಜರುಗುವುದು ಎಂದು ಪ್ರಧಾನ ಅರ್ಚಕ ಎಸ್. ರಾಜುಸ್ವಾಮಿ ಹೇಳಿದರು.
ನಗರದಲ್ಲಿ ಇಂದು ಮಜ್ಜಿಗೆ ವಿತರಣೆ
ಕರುಣಾ ಜೀವ ಕಲ್ಯಾಣ ಟ್ರಸ್ಟ್ನಿಂದ ಒಂದು ತಿಂಗಳು ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಶ್ರೀಮತಿ ಮಂಜುಳಾ ನಿಂಗಪ್ಪ (ದಾವಣಗೆರೆ ಕಾಂಕ್ರೀಟ್ಸ್), ಡಾ. ಜಿ. ಸಿದ್ದೇಶ್ (ಮೈಸೂರು) ಅವರು ಇಂದಿನ ದಾನಿಗಳಾಗಿದ್ದಾರೆ.
ಹರಪನಹಳ್ಳಿ : ಮಾದಿಗ ಸಮುದಾಯದ ಆತ್ಮ ಶಕ್ತಿ ಕೆಣಕ ಬೇಡಿ
ಹರಪನಹಳ್ಳಿ : ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಸಚಿವ ಕೆ.ಎಚ್. ಮುನಿಯಪ್ಪ ಅವರು ಸೂಚಿಸುವ ವ್ಯಕ್ತಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ.
ನಗರದಲ್ಲಿ ಇಂದು ಚಿತ್ರಕಲಾ, ಛಾಯಾಚಿತ್ರಗಳ ಪ್ರದರ್ಶನ
ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ದೃಶ್ಯಕಲಾ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ವಿಜಯಪುರದ ಕಲಾವಿದ ರಮೇಶ ಚವ್ಹಾಣ್ ಹಾಗೂ ಛಾಯಾಗ್ರಾಹಕ ಸತೀಶ ಕಲಾಲ್ ಇವರ ಚಿತ್ರಕಲಾ ಮತ್ತು ಛಾಯಾಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ
ಇಂದು ದತ್ತಿ ಉಪನ್ಯಾಸ
ಹಿರಿಯ ನಾಗರಿಕರ ಸಹಾಯವಾಣಿ ಇವರ ಸಹ ಯೋಗದಲ್ಲಿ ಇಂದು ಮಧ್ಯಾಹ್ನ 2.30 ಕ್ಕೆ ನಗರದ ಕೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಸಭಾಂ ಗಣದಲ್ಲಿ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಇಂದು ಸಿಎನ್ಕೆ ಶ್ರದ್ಧಾಂಜಲಿ
ವಿಧಾನಸಭೆಯ ಉಪಾಧ್ಯಕ್ಷರಾಗಿದ್ದ ಶ್ರೀಮತಿ ಸಿ. ನಾಗಮ್ಮ ಕೇಶವಮೂರ್ತಿ ಅವರ ಶ್ರದ್ಧಾಂಜಲಿ ಪ್ರಯುಕ್ತ ಇಂದು ನಗರದ ಶ್ರೀ ವಿರಕ್ತ ಮಠ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ಬುಕ್ ಮತ್ತು ಪೆನ್ನುಗಳನ್ನು ವಿತರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ
ನಾಳೆ ಯುಗಾದಿ ಕವಿಗೋಷ್ಠಿ
ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಸ್ಫೂರ್ತಿ ಪ್ರಕಾಶನ ತೆಲಿಗೆ ಇವರುಗಳ ಸಂಯುಕ್ತಾಶ್ರಯ ದಲ್ಲಿ ಯುಗಾದಿ ಕವಿಗೋಷ್ಠಿ - ಕ್ರೋಧಿ ನಾಮ ಸಂವತ್ಸರದ ಸ್ವಾಗತ ಕಾರ್ಯಕ್ರಮವನ್ನು ನಾಳೆ ದಿನಾಂಕ 29ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ರೋಟರಿ ಬಾಲಭವನದಲ್ಲಿ ಏರ್ಪಡಿಸಲಾಗಿದೆ.
ಜಾತ್ರೆ : ಇಂದು ಸಾಂಸ್ಕೃತಿಕ ಕಾರ್ಯಕ್ರಮ
ಶ್ರೀ ದುಗ್ಗಮ್ಮ ಜಾತ್ರೆ ಪ್ರಯುಕ್ತ ದೇವಸ್ಥಾನದ ಮುಂಭಾಗದಲ್ಲಿ ಇಂದು ರಾತ್ರಿ 8 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನಗರದಲ್ಲಿ ಇಂದು ಭಾರತ ಸಂವಿಧಾನ ಕುರಿತು ಕಾರ್ಯಾಗಾರ
ಆನಂದ ಪಿಯು ಕಾಲೇಜಿನಲ್ಲಿ ಇಂದು ಸಂಜೆ 4 ಗಂಟೆಗೆ `ಭಾರತ ಸಂವಿಧಾನದ ಬಗ್ಗೆ ಅರಿವು ಮತ್ತು ಪ್ರಸ್ತಾವನೆ ಮುದ್ರಣಾ ಕಾರ್ಯಾಗಾರ' ನಡೆಯಲಿದೆ.
ನಗರದಲ್ಲಿ ಇಂದು ಡಾ.ರಂಗನಾಥನ್ ಭಾವಚಿತ್ರ ಅನಾವರಣ
ಬಿಇಎ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಇಂದು ಮಧ್ಯಾಹ್ನ 3 ಗಂಟೆಗೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾರತದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಅವರ ಭಾವಚಿತ್ರ ಅನಾವರಣ, ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನಾಳೆ ಆರೋಗ್ಯ ತಪಾಸಣಾ ಶಿಬಿರ
ಸಿಟಿ ಸೆಂಟ್ರಲ್ ಆಸ್ಪತ್ರೆಯು 25ನೇ ವರ್ಷದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಾಡಿದ್ದು ದಿನಾಂಕ 28ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2ರವರೆಗೆ ಹಮ್ಮಿಕೊಳ್ಳಲಾಗಿದೆ
ಯಲವಟ್ಟಿಯಲ್ಲಿ ನಾಳೆ ಲಿಂಗೈಕ್ಯ ಶ್ರೀಗಳ ಪುಣ್ಯಾರಾಧನೆ
ಮಲೇಬೆನ್ನೂರು : ಶ್ರೀ ಗುರು ಸಿದ್ಧಾಶ್ರಮದ ವೈರಾಗ್ಯನಿಧಿ ಶ್ರೀ ಶಿವಾನಂದ ಮಹಾಸ್ವಾಮೀಜಿ ಹಾಗೂ ಜ್ಞಾನನಿಧಿ ಶ್ರೀ ನಿತ್ಯಾನಂದ ಮಹಾಸ್ವಾಮೀಜಿ ಅವರ ಪುಣ್ಯಾರಾಧನೆ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 28ರ ಗುರುವಾರ ಹಮ್ಮಿಕೊಳ್ಳಲಾಗಿದೆ
ನಗರದಲ್ಲಿ ಇಂದು ವಿಶ್ವರಂಗಭೂಮಿ ದಿನಾಚರಣೆ
ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ ಇವರ ಆಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ರೋಟರಿ ಬಾಲಭವನದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ.
ನಗರದಲ್ಲಿ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ನಾಟಕ ಪ್ರದರ್ಶನ
ಪ್ರತಿಮಾ ಸಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ನಾಟಕ ಪ್ರದರ್ಶನವನ್ನು ಎವಿಕೆ ಕಾಲೇಜು ಆವರಣದಲ್ಲಿರುವ ಶ್ರೀಮತಿ ಪಾರ್ವತಮ್ಮ ಶಿವಶಂಕರಪ್ಪ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 11.30 ಗಂಟೆಗೆ ಏರ್ಪಡಿಸಲಾಗಿದೆ.
ನಗರದಲ್ಲಿ ಇಂದು ಉಚಿತ ಮಜ್ಜಿಗೆ, ನೀರು ವಿತರಣಾ ಕಾರ್ಯಕ್ರಮ
ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಉಚಿತ ಮಜ್ಜಿಗೆ ಹಾಗೂ ನೀರಿನ ವಿತರಣಾ ಕಾರ್ಯಕ್ರಮ ಇಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಶಿವಯೋಗಾಶ್ರಮದ ಮುಂಭಾಗ ಹಮ್ಮಿಕೊಳ್ಳಲಾಗಿದೆ
ಕುಡಿಯಲು ನೀರಿಲ್ಲ, ಫ್ಯಾನ್ಗೆ ಕರೆಂಟ್ಇಲ್ಲ !
ಬೇಸಿಗೆಯ ತಾಪದ ನಡುವೆ ರಂಜಾನ್ ತಿಂಗಳು ಮುಸ್ಲಿಂ ಬಾಂಧವರ ಉಪವಾಸ ಆಚರಣೆ, ಇಂತಹ ಸಂದರ್ಭದಲ್ಲಿ ದಕ್ಷಿಣ ಕ್ಷೇತ್ರದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು, ಈ ನಡುವೆ ಕರೆಂಟ್ ಕೂಡ ಕೈಕೊಡುತ್ತಿದ್ದು ಮೊನ್ನೆ ಸುಮಾರು 4 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಅಡಚಣೆ ಉಂಟಾಗಿತ್ತು.
ಕಾಣದ ಕೈಗಳಿಂದ ಅವಕಾಶ ವಂಚಿತನಾಗಿದ್ದೇನೆ : ವಿನಯ್
ಹೊನ್ನಾಳಿ : ಕಾಣದ ಕೈಗಳಿಂದ ಟಿಕೆಟ್ ಪಡೆಯುವಲ್ಲಿ ವಂಚಿತನಾಗಿದ್ದು, ಅವಕಾಶಗಳನ್ನು ನಾವೇ ಸೃಷ್ಠಿಸಿಕೊಳ್ಳಬೇಕಾಗಿದೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಹಿಂದ ಯುವ ನಾಯಕ ಜಿ.ಬಿ. ವಿನಯ್ ಕುಮಾರ್ ಹೇಳಿದರು.
ಕುಂಬಳೂರು : ಮುಳ್ಳೋತ್ಸವಕ್ಕೆ ಅಪಾರ ಜನ
ಮಲೇಬೆನ್ನೂರು : ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ಮಹಾರಥೋತ್ಸವವು ಬುಧವಾರ ಬೆಳಗಿನ ಜಾವ ಸಕಲ ವಾದ್ಯಗಳೊಂದಿಗೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಈ ಬಾರಿ ಶೇ.85ಕ್ಕಿಂತ ಹೆಚ್ಚು ದಾಖಲೆ ಮತದಾನ ಆಗಬೇಕು
ಪ್ರಸ್ತುತ 18ನೇ ಲೋಕಸಭಾ ಚುನಾವಣೆಯಲ್ಲಿ ಶೇ 85ಕ್ಕಿಂತಲೂ ಹೆಚ್ಚಿನ ಮತದಾನವಾಗುವಂತೆ ಮಾಡಿ, ಹೊಸ ದಾಖಲೆ ನಿರ್ಮಿಸುವಂತೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ತಿಳಿಸಿದರು.
ಆರೋಗ್ಯಪೂರ್ಣ ಸಮಾಜಕ್ಕೆ ನೈತಿಕ ಮೌಲ್ಯಗಳು ಅಗತ್ಯ
ಬಾಳೆಹೊನ್ನೂರು : ಸುಖ,ಶಾಂತಿದಾಯಕ ಬದುಕಿಗೆ ಧರ್ಮ ಮತ್ತು ಧರ್ಮಾಚರಣೆ ಮುಖ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ಶಾಸ್ತ್ರ ಮತ್ತು ಶಸ್ತ್ರದ ಭಯ ಇರಬೇಕಂತೆ.
ಪಠ್ಯಪುಸ್ತಕಗಳಿಗೆ ಸೀಮಿತರಾಗದೆ, ಸಾಮಾಜಿಕ ಕಾಳಜಿಯ ಜಾಗೃತಿ ಕಡೆಗೆ ಗಮನ ಹರಿಸಬೇಕು
ನಮ್ಮ ದೇಶವನ್ನು ಆಳುವ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹಂತದಲ್ಲಿ ಜಾಗೃತಿ ಯೊಂದಿಗೆ ಮತದಾನ ಮಾಡುವುದರ ಜೊತೆಗೆ ಜವಾಬ್ದಾರಿ ಮತ್ತು ಬದ್ಧತೆಯಿಂದ ನಮ್ಮ ದೇಶದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು
ಕಲಿಕೆಯೊಂದಿಗೆ ಕೌಶಲ್ಯಇಂದಿನ ಪ್ರಸ್ತುತತೆ
ಪ್ರಪಂಚವು ಬಹಳ ವೇಗವಾಗಿ ಬದಲಾಗುತ್ತಿದೆ ಮತ್ತು ಈ ರೂಪಾಂತರದಲ್ಲಿ ಉದ್ಯೋಗದ ಬದಲಾವಣೆಯೂ ಆಗುತ್ತಿದೆ. ಇದರಲ್ಲಿ ಕೌಶಲ್ಯವು ಮಹತ್ವದ ಪಾತ್ರವನ್ನು ವಹಿಸುತ್ತದೆ.
ರಾಣೇಬೆನ್ನೂರು : ಭಾರತ್ ಅಕ್ಕಿ ವಿತರಣೆ
ರಾಣೇಬೆನ್ನೂರು : ಇಲ್ಲಿನ ಅಂಚೆ ವೃತ್ತದಲ್ಲಿ ಕೇಂದ್ರ ಸರ್ಕಾರದ ಭಾರತ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಅರುಣಕುಮಾರ ಪೂಜಾರ್ ಚಾಲನೆ ನೀಡಿದರು.
ಸಿದ್ದಮ್ಮ ಪಾರ್ಕ್ ಬೆಂಚ್ಗಳಿಗೆ ಸುಣ್ಣ-ಬಣ್ಣ
ನಗರದ ಕೆ.ಬಿ ಬಡಾವಣೆಯ ಬಳ್ಳಾರಿ ಸಿದ್ದಮ್ಮ ಪಾರ್ಕ್ನಲ್ಲಿರುವ ಈ ಹಿಂದೆ ದಾನಿಗಳು ನೀಡಿದ 32 ಕ್ಕೂ ಹೆಚ್ಚು ಬೆಂಚ್ಗಳು ಮತ್ತು ಕುಟೀರಕ್ಕೆ ದಾನಿಗಳು ನೀಡಿದ ಬಣ್ಣದಿಂದ ಶೃಂಗಾರಗೊಂಡಿವೆ.
ನವಸ್ಥಾನದಲ್ಲಿ ಶನೇಶ್ವರ ಸ್ವಾಮಿ ಮಹಾಯಾಗ ಸಂಪೂರ್ಣ
ಕೊಪ್ಪದಾಂಬ ಸೇವಾ ಟ್ರಸ್ಟ್ ವತಿಯಿಂದ ನಗರದ ಹದಡಿ ರಸ್ತೆಯ ಕೊಂಡಜ್ಜಿ ಬಸಪ್ಪ ವೃತ್ತದ ಬಳಿಯ ಪುಣ್ಯಕ್ಷೇತ್ರ ನವ ಸ್ಥಾನದಲ್ಲಿ ಇತ್ತೀಚೆಗೆ ಶ್ರೀ ಮಹಾ ಪ್ರತ್ಯಂಗಿರಾ ಹೋಮ, ಶನೇಶ್ವರ ಸ್ವಾಮಿ ಮಹಾಯಾಗ ಶ್ರದ್ಧಾ ಭಕ್ತಿಯಿಂದ ಜರುಗಿತು.
ಜನ ಸಾಮಾನ್ಯರ ಧ್ವನಿಯೇ ಜಾನಪದ ಸಂಪತ್ತು : ರಂಭಾಪುರಿ ಶ್ರೀಗಳು
ನೀರು, ಅನ್ನ ಮತ್ತು ಒಳ್ಳೆಯವರ ಮಾತು ಜೀವನ ಉನ್ನತಿಗೆ ಅವಶ್ಯಕ. ಭೌತಿಕ ಆಸ್ತಿ ಸಿರಿ ಸಂಪತ್ತು ನಾಶವಾಗಿ ಹೋಗಬಹುದು. ಗ್ರಾಮೀಣ ಜನರ ಬಾಯಿಂದ ಬಂದ ಸಾಹಿತ್ಯವೇ ನಿಜವಾದ ಜಾನಪದ ಸಾಹಿತ್ಯ.
ಪಶು-ಪಕ್ಷಿಗಳ ನೀರಿನ ದಾಹ ನಿವಾರಣೆಗೆ ಕರುಣಾದಿಂದ ಬಾನಿಗಳ ವ್ಯವಸ್ಥೆ
ಮೂಕ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಉದ್ದೇಶದಿಂದ ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸರಸ್ವತಿ ನಗರ, ಎಂ.ಸಿ.ಸಿ `ಬಿ’ ಬ್ಲಾಕ್, ಎನ್. ಆರ್. ರಸ್ತೆ, ಶಿವಕುಮಾರ ಸ್ವಾಮಿ ಬಡಾವಣೆ, ಕೆ.ಇ.ಬಿ ಸರ್ಕಲ್ ಮುಂತಾದೆಡೆಯಲ್ಲಿ 20 ಕುಡಿಯುವ ನೀರಿನ ತೊಟ್ಟಿಗಳನ್ನು ಇಡುವ ವ್ಯವಸ್ಥೆ ಮಾಡಲಾಗಿದೆ.
ಚುನಾವಣಾ ಸಿಬ್ಬಂದಿ ನೇಮಕ ಪ್ರಕ್ರಿಯೆಗೆ ಚಾಲನೆ
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಚುನಾವಣೆ ನಡೆಯುತ್ತಿದ್ದು, ಮತದಾನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇಮಕಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ ವೆಂಕಟೇಶ್ ಅವರು ಇಂದು ಚಾಲನೆ ನೀಡಿದರು.
ದುರ್ಗಂಬಿಕಾ ದೇವಿ ಜಾತ್ರೆ : ರೆಡ್ ಕ್ರಾಸ್ನಿಂದ ರಕ್ತದಾನ ಶಿಬಿರ
ನಗರ ದೇವತೆ ಶ್ರೀ ದುರ್ಗಂಬಿಕಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ದುರ್ಗಂಬಿಕಾ ದೇವಿ ಟ್ರಸ್ಟ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ (ದಾವಣಗೆರೆ) ಇವರುಗಳ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಜಾತ್ರೋತ್ಸವದಲ್ಲಿ ನಡೆಸಲಾಯಿತು.
ಏಪ್ರಿಲ್ 1 ರಿಂದ ಒಂದು ತಿಂಗಳ ಕಾಲ ಜಾನುವಾರುಗಳಿಗೆ ಲಸಿಕಾಕರಣ
ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ರೋಗ ನಿಯಂತ್ರಣಕ್ಕೆ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಕಾಲುಬಾಯಿ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಏಪ್ರಿಲ್ 1ರಿಂದ ಏಪ್ರಿಲ್ 30 ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ. ತಿಳಿಸಿದರು.
ಮಲೇಬೆನ್ನೂರಿನಲ್ಲಿ ಮೇಣದ ಬತ್ತಿ ಬೆಳಗಿ ಮತದಾನದ ಜಾಗೃತಿ
ಮಲೇಬೆನ್ನೂರು : ಪಟ್ಟಣದ ಮುಖ್ಯವೃತ್ತದಲ್ಲಿ ನಿನ್ನೆ ಸಂಜೆ ಪುರಸಭೆ ವತಿಯಿಂದ ಲೋಕಸಭಾ ಚುನಾವಣೆ ಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಮತದಾನ ಜಾಗೃತಿ ಕಾರ್ಯಕ್ರಮವನ್ನು ಮೇಣದ ಬತ್ತಿ ಬೆಳಗಿ ನಡೆಸಲಾಯಿತು.
ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಯೂ ಅಷ್ಟೇ ಮುಖ್ಯ
ಹರಪನಹಳ್ಳಿ : ತಾಲ್ಲೂಕಿನ ಕನ್ನನಾಯಕನ ಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್ ಎಸ್.ಎಲ್.ಸಿ. ಮಕ್ಕಳಿಗೆ ಹೃದಯ ಸ್ಪರ್ಷಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕುಂಬಳೂರಿನಲ್ಲಿ ಸಂಭ್ರಮದ ಬ್ರಹ್ಮರಥೋತ್ಸವ
ಮಲೇಬೆನ್ನೂರು : ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ಬ್ರಹ್ಮ ರಥೋತ್ಸವವು ಮಂಗಳವಾರ ಮಧ್ಯಾಹ್ನ ಸಂಭ್ರಮದಿಂದ ಜರುಗಿತು.
ಕಮ್ಮಾರಗಟ್ಟೆ : ಸಂಭ್ರಮದ ಆಂಜನೇಯಸ್ವಾಮಿ ರಥೋತ್ಸವ
ಸಾಸ್ವೆಹಳ್ಳಿ, ಮಾ. 26 - ಐತಿಹಾಸಿಕ, ಪುರಾಣ ಪ್ರಸಿದ್ಧಿ ಪಡೆದ ಕಮ್ಮಾರಗಟ್ಟೆ ಆಂಜನೇಯ ಸ್ವಾಮಿಯ ರಥೋತ್ಸವವು ನಾಡಿನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಬೆಳಗ್ಗೆ ಸಡಗರ, ಸಂಭ್ರಮದಿಂದ ನಡೆಯಿತು.
ಹರಪನಹಳ್ಳಿ : ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ
ಹರಪನಹಳ್ಳಿ : ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಗೆಲುವು, ಸೋಲು ಮುಖ್ಯವಲ್ಲ. ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಭಾಗವಹಿಸಿ ಯಶಸ್ಸು ತನ್ನಿ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಕರೆ ನೀಡಿದರು.
1.70 ಲಕ್ಷ ರೂ. ನಗದು ಅಧಿಕಾರಿಗಳ ವಶಕ್ಕೆ
ಹರಪನಹಳ್ಳಿ : ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.70 ಲಕ್ಷ ರೂ. ಹಣವನ್ನು ತಾಲ್ಲೂಕಿನ ಮತ್ತಿಹಳ್ಳಿ ಕ್ರಾಸ್ ಬಳಿಯಿರುವ ಚೆಕ್ಪೋಸ್ಟ್ನಲ್ಲಿ ಸೋಮವಾರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇ-ವೇ ಬಿಲ್ ನೀಡಿಕೆಯಲ್ಲಿ ವ್ಯತ್ಯಾಸ 400 ವಾಟರ್ ಕೂಲರ್ಗಳ ವಶ
ಬಾಂಬೆಯಿಂದ ದಾವಣಗೆರೆಗೆ ಪೂರೈಕೆ ಮಾಡಿದ 400 ವಾಟರ್ ಕೂಲರ್ಗಳ ಇ-ವೇ ಬಿಲ್ ಸೃಜನೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಸಿರಿಗೆರೆ : ಎಸ್.ಎಸ್.ಕೇರ್ ಟ್ರಸ್ಟ್ ನಿಂದ ಆರೋಗ್ಯ ತಪಾಸಣೆ
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಸಿರಿಗೆರೆಯ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಬಾಡಾ ಕ್ರಾಸ್ ಚೆಕ್ಪೋಸ್ಟ್ನಲ್ಲಿ ಎರಡು ಪ್ರಕರಣಗಳಲ್ಲಿ 7.43 ಲಕ್ಷ ರೂ. ವಶ
ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಬಾಡಾ ಕ್ರಾಸ್ ಚೆಕ್ಪೋಸ್ಟ್ನಲ್ಲಿ ಎರಡು ಪ್ರಕರಣಗಳಲ್ಲಿ 7.43 ಲಕ್ಷ ರೂ. ನಗದು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗುತ್ತಿದೆ
ಜಿಲ್ಲಾಡಳಿತದಿಂದ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಣೆ
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ, ಜಿಲ್ಲಾ ಬಲಿಜ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿಯ ಯನ್ನು ನಗರದ ಬಲಿಜ ವಿದ್ಯಾರ್ಥಿ ನಿಲಯದಲ್ಲಿ ಇಂದು ಸರಳವಾಗಿ ಆಚರಿಸಲಾಯಿತು.
ಜಿಗಳಿ : ಶುದ್ಧ ಕುಡಿಯುವ ನೀರಿನ ವಿತರಣೆ ಮತದಾನ ಕುರಿತು ಜಾಗೃತಿ
ಜಿಗಳಿ : ಗ್ರಾಮದ ಶ್ರೀ ರಂಗನಾಥ ಸ್ವಾಮಿಯ ರಥೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವಿತರಣೆ ಮತ್ತು ವಿಶ್ವ ಜಲ ದಿನ ಪ್ರಯುಕ್ತ ನೀರಿನ ಬಳಕೆ ಮತ್ತು ಲೋಕಸಭೆ ಚುನಾವಣೆಯ ಮತದಾನ ಮಾಡುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಯುವಕರು ಹಮ್ಮಿಕೊಂಡಿದ್ದರು.
ಕೊಂಡಜ್ಜಿಯಲ್ಲಿ ರಾಷ್ಟ್ರೀಯ ಸೇಫಕ್ ಟಕ್ರ ಪಂದ್ಯಾವಳಿ
ಸೇಪಕ್ ಟಕ್ರ ಫೆಡರೇಷನ್ ಆಫ್ ಇಂಡಿಯಾ ಮತ್ತು ಕರ್ನಾಟಕ ಅಮೆಚೂರ್ ಸಫಕ್ ಟಕ್ರ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ 26ನೇ ಸಬ್ ಜ್ಯೂನಿಯರ್ ಮತ್ತು 27ನೇ ಜ್ಯೂನಿಯರ್ ರಾಷ್ಟ್ರೀಯ ಹೊನಲು ಬೆಳಗಿನ ಪಂದ್ಯಾವಳಿಯನ್ನು ಯೋಜಿಸಲಾಗಿದೆ.
ಫಾರ್ಮಸಿ ಸಂಘದ ಜಿಲ್ಲಾಧ್ಯಕ್ಷರಾಗಿ ತಿಪ್ಪೇಸ್ವಾಮಿ ಆಯ್ಕೆ
ಫಾರ್ಮಾಸಿಸ್ಟ್ ಸಂಘದ ಜಿಲ್ಲಾಧ್ಯಕ್ಷರಾಗಿ ಎಂ.ಎನ್. ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ ಎಂದು ಸಂಘದ ನಿಕಟಪೂರ್ವ ಅಧ್ಯಕ್ಷ ಶಿವಾನಂದ ದಳವಾಯಿ ತಿಳಿಸಿದ್ದಾರೆ.