ವರ್ತಮಾನ ಫೋರಂ ಫಾರ್ ಇಂಟೆಲೆಕ್ಚುಯಲ್ ಡಿಬೆಟ್ಸ್ ದಾವಣಗೆರೆ ಇವರ ವತಿಯಿಂದ ಇಂದು ಸಂಜೆ 6 ಕ್ಕೆ 'ಸೈಬರ್ ವಂಚನೆ – ಒಳಸುಳಿವು' ಜಾಗೃತಿ ಕಾರ್ಯಕ್ರಮವನ್ನು ರೋಟರಿ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ, ದಾಖಲಾತಿ ಪಡೆಯಲು ಪರ್ಯಾಯ ವ್ಯವಸ್ಥೆ
ಗ್ರಾಮ ಆಡಳಿತಾಧಿ ಕಾರಿಗಳು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಆಗುತ್ತಿರುವ ವಿಳಂಬ ತಪ್ಪಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ. ತಿಳಿಸಿದ್ದಾರೆ.
ರಾಣೇಬೆನ್ನೂರಿನಲ್ಲಿ ಇಂದು ಗ್ರಾಹಕರ ಸಭೆ
ರಾಣೇಬೆನ್ನೂರು ಉಪ ವಿಭಾಗ 1 ಕಚೇರಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ವಿದ್ಯುತ್ ಗ್ರಾಹಕ ಸಭೆ ನಡೆಯಲಿದೆ.
ಹೊನ್ನಾಳಿಯಲ್ಲಿಂದು ಪಂಚಮಸಾಲಿ ಸಭೆ
ಪಂಚಮಸಾಲಿ ಸಮಾಜದ ಸಭೆಯು ಇಂದು ಮಧ್ಯಾಹ್ನ 3 ಗಂಟೆಗೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ವೀರಣ್ಣ ತಿಳಿಸಿದ್ದಾರೆ.
ನಗರದಲ್ಲಿ ನಾಳೆ ಆರೋಗ್ಯ ತಪಾಸಣಾ ಶಿಬಿರ
ಸಪ್ತಗಿರಿ ಆಸ್ಪತ್ರೆ (ಬೆಂಗಳೂರು), ಕ್ರಿಶ್ಚಿಯನ್ ಮೈನಾರಿಟಿ ಟ್ರಸ್ಟ್, ಉಚಿತ ಹೃದಯ ರೋಗ, ನರರೋಗ, ಮೂತ್ರಪಿಂಡದ ಕಲ್ಲು ಕ್ಯಾನ್ಸರ್ ತಪಾಸಣಾ ಶಿಬಿರವು ನಾಳೆ ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ವಿನೋಬನಗರದ ಸೆಂಟ್ ಮೆರಿಸ್ ಕಾನ್ವೆಂಟ್ ಮತ್ತು ಕಾಂಪೋಸಿಟ್ ಪಿ.ಯು. ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಇಂದು – ನಾಳೆ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ
ಸುಬ್ರಹ್ಮಣ್ಯ ಹಿತರಕ್ಷಣಾ ಸಮಿತಿಯಿಂದ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಬಳಿಯ ಪುನೀತ್ ರಾಜ್ ಕುಮಾರ್ ಬಡಾವಣೆಯಲ್ಲಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ನೂತನ ದೇವಸ್ಥಾನ ಮತ್ತು ನೂತನ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮ ಇಂದು ಮತ್ತು ನಾಳೆ ನಡೆಯಲಿದೆ.
ಹರಿಹರ : ಉಚಿತ ಇ-ಕೆವೈಸಿ ನೋಂದಣಿಗೆ ಅವಕಾಶ
ಹರಿಹರ : ಇ-ಕೆವೈಸಿಯನ್ನು ಪ್ರತಿ ದಿನ ಬೆಳಗ್ಗೆ 7 ರಿಂದ ಸಂಜೆ 8 ಗಂಟೆಯವರೆಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿ ಅಥವಾ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪೋರ್ಟಬಿಲಿಟಿ ಮೂಲಕ ಇ-ಕೆವೈಸಿ ಯನ್ನು ಉಚಿತವಾಗಿ ಮಾಡಿಕೊಳ್ಳಬಹುದೆಂದು
ನಗರದಲ್ಲಿ ನಾಳೆ ಕುರುವತ್ತಿ ಬಸವೇಶ್ವರ ದೇವಸ್ಥಾನದ ಕಳಸಾರೋಹಣ
ಕುರುವತ್ತಿ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಇದೇ ದಿನಾಂಕ 16 ಮತ್ತು 17ರಂದು ಕೆ.ಟಿ. ಜಂಬಣ್ಣ ನಗರದ 1ನೇ ಮುಖ್ಯ ರಸ್ತೆ, 12 ಅಡ್ಡ ರಸ್ತೆಯಲ್ಲಿನ ಕುರುವತ್ತಿ ಬಸವೇಶ್ವರ ದೇವಸ್ಥಾನದ ಕಳಸಾರೋಹಣ ಸಮಾರಂಭ ನಡೆಯಲಿದೆ.
ಅಪರಿಚಿತ ಮಹಿಳೆಯ ಶವ ಪತ್ತೆ
ನಗರದ ಬೂದಾಳ್ ರಸ್ತೆ ಪೆಟ್ರೋಲ್ ಬಂಕ್ಗೆ ಹೊಂದಿಕೊಂಡಿರುವ ಬಿ.ಎನ್. ಲೇಔಟ್ನ ನಿವೇಶನದಲ್ಲಿ ಅಮಾನಧೇಯ ಮಹಿಳೆಯ ಶವ ಪತ್ತೆಯಾಗಿದೆ.
ಹರಿಹರದಲ್ಲಿ ಇಂದು
ಹರಿಹರ ಉಪ ವಿಭಾಗದ ಕಚೇರಿಯಲ್ಲಿ ಇಂದು ಮಧ್ಯಾಹ್ನ 3.30 ಗಂಟೆಗೆ ವಿದ್ಯುತ್ ಗ್ರಾಹಕ ಸಂವಾದ ನಡೆಯಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ನಗರದಲ್ಲಿ ಇಂದು – ನಾಳೆ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ
ಸುಬ್ರಹ್ಮಣ್ಯ ಹಿತರಕ್ಷಣಾ ಸಮಿತಿಯಿಂದ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಬಳಿಯ ಪುನೀತ್ ರಾಜ್ ಕುಮಾರ್ ಬಡಾವಣೆಯಲ್ಲಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ನೂತನ ದೇವಸ್ಥಾನ ಮತ್ತು ನೂತನ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮ ಇಂದು ಮತ್ತು ನಾಳೆ ನಡೆಯಲಿದೆ.
ಕೃಷಿ ಉತ್ಸವ ಮುಂದೂಡಿಕೆ
ಹಸಿರೋತ್ಸವ ಫೋರಮ್ನಿಂದ ಇದೇ ದಿನಾಂಕ 19ರಿಂದ 23ರವರೆಗೆ ನಿಗದಿಯಾಗಿದ್ದ ಕೃಷಿ ಉತ್ಸವವನ್ನು ಮುಂದೂಡಲಾಗಿದೆ.
ಯರಗುಂಟೆಯಲ್ಲಿ ಇಂದು ಕೆರೆ ಭೂಮಿ ಪೂಜೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಾನಗರ ಪಾಲಿಕೆ ವತಿಯಿಂದ ತಾಲ್ಲೂಕಿನ ಯರಗುಂಟೆ ಗ್ರಾಮದಲ್ಲಿ `ನಮ್ಮ ಊರು, ನಮ್ಮ ಕೆರೆ' ಕಾರ್ಯಕ್ರಮದಡಿ ಇಂದು ಬೆಳಗ್ಗೆ ಕೆರೆಯ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದೆ.
ನಾಟಿ ಕೋಳಿ ಮರಿಗಳಿಗೆ ಅರ್ಜಿ ಆಹ್ವಾನ
ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಯ ಪಂಗಡ ಹಾಗೂ ಸಾಮಾನ್ಯ ವರ್ಗದ ಗ್ರಾಮೀಣ ರೈತ ಮಹಿಳೆಯರಿಗೆ ಉಚಿತವಾಗಿ 5 ವಾರದ ನಾಟಿ ಕೋಳಿ ಮರಿಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ನಗರದಲ್ಲಿ ಇಂದು `ಗೋಲ್ಡನ್ ಉತ್ಸವ’
ಗೋಲ್ಡನ್ ವಿದ್ಯಾಸಂಸ್ಥೆಯ ಆವರಣದಲ್ಲಿ `ಗೋಲ್ಡನ್ ಉತ್ಸವ' ಕಾರ್ಯಕ್ರಮವು ಇಂದು ಸಂಜೆ 4 ಗಂಟೆಗೆ ನಡೆಯಲಿದೆ.
ನಗರಕ್ಕೆ ಇಂದು ನಂದಿ ರಥಯಾತ್ರೆ
ಬ್ರಹ್ಮಗಿರಿ, ಗೋವಿನತೋಟ, ಪುದು, ಬಂಟ್ವಾಳ ತಾಲ್ಲೂಕಿನ ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ, ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥೆ ಟ್ರಸ್ಟ್ ವತಿಯಿಂದ ರಾಜ್ಯದಾದ್ಯಂತ ಸಂಚರಿಸುತ್ತಿರುವ ನಂದಿ ರಥಯಾತ್ರೆ ಇಂದು ನಗರಕ್ಕೆ ಆಗಮಿಸಲಿದೆ.
ಯುವನಿಧಿಗೆ ಅರ್ಜಿ
ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆ ಯಡಿಯಲ್ಲಿ ನಿರುದ್ಯೋಗಿ ಭತ್ಯೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನಾಳೆ ಕೊನೆ ದಿನ.
ಹರಿಹರದಲ್ಲಿ ಇಂದು ದೂಡಾ ಜನ ಸಂಪರ್ಕ ಸಭೆ
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಹರಿಹರ ನಗರಸಭೆ ಆವರಣದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ.
ನಗರದಲ್ಲಿ ಇಂದು ಶಿಕ್ಷಣ ಮೇಳ
ನಗರದ ಜಿ.ಎಂ. ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದಲ್ಲಿ ನಾಳೆ ದಿನಾಂಕ 13ರ ಗುರುವಾರ ಬೆಳಗ್ಗೆ 9.30ಕ್ಕೆ ಅಂತರ ರಾಷ್ಟ್ರೀಯ ಶಿಕ್ಷಣ ಮೇಳ ನಡೆಯಲಿದೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ತೇಜಸ್ವಿ ಕಟ್ಟಿಮನಿ ತಿಳಿಸಿದರು.
ಕೊಂಡಜ್ಜಿ : ಇಂದು
ವೃತ್ತಿ ರಂಗಭೂಮಿ ರಂಗಾಯಣ (ದಾವಣಗೆರೆ) ಮತ್ತು ಕರ್ನಾಟಕ ನಾಟಕ ಅಕಾಡೆಮಿ (ಬೆಂಗಳೂರು) ಆಶ್ರಯದಲ್ಲಿ ಕೊಂಡಜ್ಜಿಯ ಸ್ಕೌಟ್ ಕ್ಯಾಂಪ್ನಲ್ಲಿ ನಡೆಯುತ್ತಿರುವ ವೃತ್ತಿ ರಂಗ ನಾಟಕ ರಚನಾ ಶಿಬಿರದ ಸಮಾರೋಪ ಸಮಾರಂಭವು ಇಂದು ಸಂಜೆ 4 ಗಂಟಗೆ ಜರುಗಲಿದೆ.
ನಗರದಲ್ಲಿ ಇಂದು ಉಪನ್ಯಾಸ
ನಗರದ ಸರ್ ಎಂ.ವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇದೇ ದಿನಾಂಕ 22ರ ಸಂಜೆ 4ಕ್ಕೆ ಸರ್.ಎಂ.ವಿ ವೈಭವ-2024 ವಾರ್ಷಿಕೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಜಿಲ್ಲೆಯಲ್ಲಿ ಇಂದು, ನಾಳೆ ನಂದಿ ರಥಯಾತ್ರೆ
ದೇಶಿ ಗೋಮಾತೆಯ ಮಹಿಮೆ ಜನರಿಗೆ ತಿಳಿಸುವುದು ಹಾಗೂ ಗವ್ಯ ಉತ್ಪನ್ನ ಬಳಕೆಯ ಪ್ರಚಾರ ಮಾಡುವ ಉದ್ದೇಶದಿಂದಾಗಿ `ನಂದಿ ರಥಯಾತ್ರೆ' ನಾಳೆ ದಿನಾಂಕ 13 ಮತ್ತು 14ರಂದು ಜಿಲ್ಲೆಗೆ ಆಗಮಿಸಲಿದೆ ಎಂದು ಕುಮಾರ ಸ್ವಾಮಿ ಬಿಳಿಚೋಡು ತಿಳಿಸಿದರು.
ವಿಜೃಂಭಣೆಯಿಂದ ಜರುಗಿದ ತರಳಬಾಳು ಹುಣ್ಣಿಮೆ ಮಹೋತ್ಸವದ ಮೆರವಣಿಗೆ
ತರಳಬಾಳು ಹುಣ್ಣಿಮೆ ಮಹೋತ್ಸವದ ಪ್ರಯುಕ್ತ ತೆರೆದ ವಾಹನದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಬೆಳ್ಳಿಪಲ್ಲಕ್ಕಿ ಉತ್ಸವವು ತೆರೆದ ವಾಹನದಲ್ಲಿ ಶ್ರೀಮಠದ ಸಕಲ ಬಿರುದಾವಳಿಗಳೊಂದಿಗೆ ಬುಧವಾರ ಭರಮಸಾಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿತು.
`ಶಿವರಾತ್ರಿ ಉತ್ಸವ’ ಪ್ರತಿಭೆಗಳ ಕಲಾ ಪ್ರದರ್ಶನಕ್ಕೆ ಅವಕಾಶ
ಎಸ್ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು `ಚಿರಂತನ' ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 26 ರಂದು ಸಂಜೆ 7 ರಿಂದ 11.30 ರ ವರೆಗೆ ಅಥಣಿ ಕಾಲೇಜಿನ ಆವರಣದಲ್ಲಿ 'ಶಿವರಾತ್ರಿ ಉತ್ಸವ' ದಲ್ಲಿ ನಗರದ ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ.
ಹರಿಹರದಲ್ಲಿ ನಾಳೆ ದೂಡಾ ಜನ ಸಂಪರ್ಕ ಸಭೆ
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಾಡಿದ್ದು ದಿನಾಂಕ 14ರ ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಹರಿಹರ ನಗರಸಭೆ ಆವರಣದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ
ನಗರದಲ್ಲಿ ಕೊಟ್ಟೂರೇಶ್ವರ ಸ್ವಾಮಿ ಪ್ರವಚನ
ವಿರಕ್ತಮಠದ ಆವರಣದಲ್ಲಿ ಇಂದಿನಿಂದ ಇದೇ ದಿನಾಂಕ 17 ರವರೆಗೆ ಪ್ರತಿ ದಿನ ಸಂಜೆ 6 ರಿಂದ 8.30 ರವರೆಗೆ ಶ್ರೀ ಕೊಟ್ಟೂರು ಗುರು ಬಸವೇಶ್ವರರ ಪುರಾಣ-ಪ್ರವಚನ ಮರೋಳ ಹಿರೇಮಠದ ಮುದುಕಯ್ಯ ಶಾಸ್ತ್ರಿಗಳು ಪ್ರವಚನ ನಡೆಸಿಕೊಡಲಿದ್ದಾರೆ.
17ಕ್ಕೆ ಆವರಗೊಳ್ಳ ವೀರಭದ್ರ ಸ್ವಾಮಿ ರಥೋತ್ಸವ
ದಾವಣಗೆರೆ ಸಮೀಪದ ಆವರಗೊಳ್ಳ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 17ರಂದು ಜರುಗಲಿದೆ.
ಕುರಿ – ಮೇಕೆ ಸಾಕಾಣಿಕೆ ತರಬೇತಿ
ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯು ನಾಡಿದ್ದು ದಿನಾಂಕ 14 ಮತ್ತು 15 ರಂದು ನಡೆಯಲಿದೆ.
ತಾತ್ಕಾಲಿಕ ಸರ್ಕಾರಿ ಬಸ್ ನಿಲ್ದಾಣ ತೆರವು
ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸರ್ಕಾರಿ ಬಸ್ ನಿಲ್ದಾಣವನ್ನು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರೂ, ದೂಡಾ ಅಧ್ಯಕ್ಷರೂ ಆದ ದಿನೇಶ್ ಕೆ. ಶೆಟ್ಟಿ ಅವರು ಜೆಸಿಬಿ ಚಲಾಯಿಸುವ ಮುಖಾಂತರ ತೆರವು ಕಾರ್ಯಕ್ಕೆ ಇಂದು ಚಾಲನೆ ನೀಡಿದರು.
ಕಾಡಜ್ಜಿ : ಅಂತರ್ಜಲ ನಿರ್ವಹಣೆ ಕುರಿತು ಇಂದು – ನಾಳೆ ಕಾರ್ಯಾಗಾರ
ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಕೃಷಿ ತರಬೇತಿ ಕೇಂದ್ರದಲ್ಲಿ ಅಟಲ್ ಭೂಜಲ್ ಯೋಜನೆಯಡಿ ಇಂದಿನಿಂದ ಮೂರು ದಿನ ತರಬೇತಿ ಕಾರ್ಯಾಗಾರ ನಡೆಯಲಿದೆ.
ಕುರ್ಕಿ ಸ.ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಉದ್ಘಾಟನೆ ಇಂದು
ದಾವಣಗೆರೆ ವಿದ್ಯಾನಗರ ರೋಟರಿ ಕ್ಲಬ್ನಿಂದ 1.5 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ನಿರ್ಮಾಣವಾಗಿದ್ದು, ಇಂದು ಮಧ್ಯಾಹ್ನ 3 ಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಬಿ. ಇಟ್ನಾಳ್ ಅವರು ಉದ್ಘಾಟಿಸಲಿದ್ದಾರೆ.
ಹುಣ್ಣಿಮೆ ಮಹಾಮಂಟಪಕ್ಕೆ ಬಿಚ್ಚುಗತ್ತಿ ಭರಮಣ್ಣ ನಾಯಕರ ಹೆಸರು : ಹರ್ಷ
ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ಮಹಾಮಂಟಪಕ್ಕೆ ಬಿಚ್ಚುಗತ್ತಿ ಭರಮಣ್ಣ ನಾಯಕರ ಹೆಸರನ್ನಿಟ್ಟಿರುವುದಕ್ಕೆ ನಾಯಕ ಸಮುದಾಯ ಹರ್ಷ ವ್ಯಕ್ತಪಡಿಸಿದೆ.
ಮೈಲಾರ ಜಾತ್ರೆ : ವಿಶೇಷ ಬಸ್ ಸೌಲಭ್ಯ
ಇದೇ ದಿನಾಂಕ 14 ರಂದು ನಡೆಯುವ ಮೈಲಾರ ಕಾರಣಿಕೋತ್ಸವ ಪ್ರಯುಕ್ತ ನಾಡಿದ್ದು ದಿನಾಂಕ 13 ರಿಂದ 15 ರವರೆಗೆ ಕೆಎಸ್ಸಾರ್ಟಿಸಿ ದಾವಣಗೆರೆ ವಿಭಾಗ ದಿಂದ 75 ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿಭಾ ಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಭರತ ಹುಣ್ಣಿಮೆ : ಉಚ್ಚಂಗಿದುರ್ಗಕ್ಕೆ ವಿಶೇಷ ಕೆಎಸ್ಸಾರ್ಟಿಸಿ ಬಸ್ ಸೌಲಭ್ಯ
ಶ್ರೀಕ್ಷೇತ್ರ ಉಚ್ಚಂಗಿದುರ್ಗದ ಭರತ ಹುಣ್ಣಿಮೆ ನಾಳೆ ದಿನಾಂಕ 11 ರಿಂದ 13 ರವರೆಗೆ ಜರುಗಲಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ದಾವಣಗೆರೆ ವಿಭಾಗದ ಘಟಕಗಳಿಂದ 45 ಹೆಚ್ಚುವರಿ ವಿಶೇಷ ಬಸ್ಗಳ ಸಂಚಾರ ಕಲ್ಪಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಮೈಲಾರ ಜಾತ್ರೆ : ವಿಶೇಷ ಬಸ್ ಸೌಲಭ್ಯ
ಇದೇ ದಿನಾಂಕ 14 ರಂದು ನಡೆಯುವ ಮೈಲಾರ ಕಾರಣಿಕೋತ್ಸವ ಪ್ರಯುಕ್ತ ನಾಡಿದ್ದು ದಿನಾಂಕ 13 ರಿಂದ 15 ರವರೆಗೆ ಕೆಎಸ್ಸಾರ್ಟಿಸಿ ದಾವಣಗೆರೆ ವಿಭಾಗ ದಿಂದ 75 ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿಭಾ ಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಹರಿಹರ : ಉಚಿತ ಇ-ಕೆವೈಸಿ ನೋಂದಣಿಗೆ ಅವಕಾಶ
ನ್ಯಾಯಬೆಲೆ ಅಂಗಡಿ ಅಥವಾ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪೋರ್ಟಬಿಲಿಟಿ ಮೂಲಕ ಇ-ಕೆವೈಸಿ ಯನ್ನು ಉಚಿತವಾಗಿ ಮಾಡಿಕೊಳ್ಳಬಹುದೆಂದು ಹರಿಹರ ತಹಶೀಲ್ದಾರ್ ಗುರುಬಸವರಾಜ್ ತಿಳಿಸಿದ್ದಾರೆ.
ಯುಜಿಸಿ ಕರಡು ನಿಯಮಾವಳಿ ಕೂಡಲೇ ಹಿಂಪಡೆಯಲು ಎಐಡಿಎಸ್ಓ ಆಗ್ರಹ
ಇತ್ತೀಚೆಗೆ ರೂಪಿಸಲಾಗಿರುವ ಯುಜಿಸಿ 2025 ಕರಡು ನಿಯಮಾವಳಿಗಳು ಶಿಕ್ಷಣ ವಿರೋಧಿ, ಜನ ವಿರೋಧಿ ಹಾಗೂ ಅಪ್ರಜಾತಾಂತ್ರಿಕವಾಗಿವೆ ಎಂದು ಎಐಡಿಎಸ್ಓ ಟೀಕಿಸಿದೆ.
ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಶ್ರೀಗಳವರ ಸ್ಮರಣೆ ಶ್ರದ್ಧಾಪೂರ್ವಕ ದಾಸೋಹ ದಿನಾಚರಣೆ
ತುಮಕೂರಿನ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರೂ, ತ್ರಿವಿಧ ದಾಸೋಹಿಗಳೂ, ನಡೆದಾಡುವ ದೇವರೆಂದೇ ಎಲ್ಲರ ಮನಸ್ಸಿನಲ್ಲಿ ನೆಲೆ ನಿಂತಿರುವ ಮಹಾ ತಪಸ್ವಿ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 6ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಶ್ರದ್ಧಾ - ಭಕ್ತಿಯಿಂದ ಆಚರಿಸಲಾಯಿತು.
ವಿಶ್ವ ಕನ್ನಡ ಸಮ್ಮೇಳನಕ್ಕೆ 50 ಲಕ್ಷ: ಪಾಲಿಕೆಗೆ ಕಸಾಪ ಅಧ್ಯಕ್ಷ ವಾಮದೇವಪ್ಪ ಅಭಿನಂದನೆ
ನಗರದಲ್ಲಿ ನಡೆಸಲು ಉದ್ದೇಶಿಸಿರುವ 3ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ 50 ಲಕ್ಷ ರೂ.ಗಳನ್ನು ಮಹಾನಗರ ಪಾಲಿಕೆಯ ಆಯವ್ಯಯದಲ್ಲಿ ಮೀಸಲಿರಿಸಿ, ಪಾಲಿಕೆ ಆಡಳಿತ ಕೈಗೊಂಡಿರುವ ಕ್ರಮವನನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಸ್ವಾಗತಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.
ಶ್ರೀ ಪುರಂದರ ದಾಸರ ದೇವರ ನಾಮ, ಶ್ರೀ ತ್ಯಾಗರಾಜರ ಕೀರ್ತನೆ ಸ್ಪರ್ಧೆ
ಬ್ರಾಹ್ಮಣ ಸಮಾಜ ಮಹಿಳಾ ವಿಭಾಗದಿಂದ ಶ್ರೀ ಪುರಂದರ ದಾಸರ ಹಾಗೂ ಶ್ರೀ ತ್ಯಾಗರಾಜರ ಆರಾಧನೆ ಪ್ರಯುಕ್ತ ಶ್ರೀ ಪುರಂದರ ದಾಸರ ದೇವರ ನಾಮ ಹಾಗೂ ಶ್ರೀ ತ್ಯಾಗರಾಜರ ಕೀರ್ತನಾ ಸ್ಪರ್ಧೆಯನ್ನು ಇದೇ ದಿನಾಂಕ 16 ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ.

ಪಿಎಲ್ಡಿ ಬ್ಯಾಂಕ್ಗೆ ಕೋಲ್ಕುಂಟೆ ಅಶೋಕ್
ದಾವಣಗೆರೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಬಾಡ ಕ್ಷೇತ್ರದ ಸಾಲಗಾರರ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಕೋಲ್ಕುಂಟೆ ಗ್ರಾಮದ ಜಿ.ಹೆಚ್.ಅಶೋಕ್ ಆಯ್ಕೆಯಾಗಿದ್ದಾರೆ.

ಗೋಪನಾಳ್ ಕೃಷಿ ಸಂಘಕ್ಕೆ ಆಯ್ಕೆ
ತಾಲ್ಲೂಕಿನ ಗೋಪನಾಳ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಎಂ.ಮಲ್ಲಿಕಾರ್ಜುನಯ್ಯ ಮತ್ತು ಉಪಾಧ್ಯಕ್ಷರಾಗಿ ಎ.ಕೆ.ಚಂದ್ರಮ್ಮ ಆಯ್ಕೆಯಾಗಿದ್ದಾರೆ.

ಶಾಮನೂರು ಪ್ರವೀಣ್, ಸುಪ್ರೀತ್ಗೆ ಜಿಲ್ಲಾ ಕೈಗಾರಿಕಾ ಸಾಧಕ ಪ್ರಶಸ್ತಿ
ನಗರದ ಮಲ್ಲಿಕಾರ್ಜುನ ಇಂಡಸ್ಟ್ರೀಸ್ ಪಾಲುದಾರರಾದ ಶಾಮನೂರು ಜಿ.ಕೆ. ಪ್ರವೀಣ್, ಜಿ.ಎಂ. ಸುಪ್ರೀತ್ ಅವರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಿಭಾಗದಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪಡೆದಿದ್ದಾರೆ.

17ಕ್ಕೆ ಆವರಗೊಳ್ಳ ವೀರಭದ್ರ ಸ್ವಾಮಿ ರಥೋತ್ಸವ
ದಾವಣಗೆರೆ ಸಮೀಪದ ಆವರಗೊಳ್ಳ ಗ್ರಾಮದ ಶ್ರೀ ವೀರ ಭದ್ರೇಶ್ವರ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 17ರಂದು ಜರುಗಲಿದೆ ಎಂದು ವೀರಭದ್ರೇಶ್ವರ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಬಿ.ಎಂ. ಷಣ್ಮುಖಯ್ಯ ತಿಳಿಸಿದರು.

ಕೆಎಸ್ಸಿಎ ಮೈದಾನದ ನವೀಕರಣ, ಪೂಜೆ ಮತ್ತು ಮಣ್ಣಿನ ಕಾಮಗಾರಿ ಆರಂಭ
ಕೆಎಸ್ಸಿಎ ಮೈದಾನದ ಪೂಜಾ ಸಮಾರಂಭವು ಶ್ರೀಗಳ ಸಾನ್ನಿಧ್ಯದಲ್ಲಿ ಯಶಸ್ವಿಯಾಗಿ ನೆರವೇರಿತು.

ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಬಾಲಕ ಕೇಶವ್ ಸೆಂಚುರಿಯಲ್ಲಿ ಆಧುನಿಕ ಸವಾರಿ
ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ 12 ವರ್ಷದ ಕ್ರಿಕೆಟ್, ಟೂರ್ನಮೆಂಟ್ನಲ್ಲಿ ಬೆಂಗಳೂರಿನ ಕೆಓಸಿ ‘ಎ’ ಮಾಡ್ರನ್ ಟೀಮ್ ಪ್ರತಿನಿಧಿಸುತ್ತಿರುವ ನಗರದ ಯುವ ದಾಂಡಿಗ ಟಿ. ಕೇಶವ್ ಅವರು 103 ರನ್ಗಳನ್ನು ತಂದುಕೊಟ್ಟಿದ್ದಾರೆ.

ಡಾ. ಹನಗವಾಡಿಗೆ ಎಸ್ಸೆಸ್ ಅಭಿನಂದನೆ
ಶ್ರೇಷ್ಠ ದಿವ್ಯಾಂಗನ್ 2024 ರಾಷ್ಟ್ರ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಪಡೆದಿರುವ ಕರ್ನಾಟಕ ಹಿಮೋಫಿಲಿಯ ಸೊಸೈಟಿಯ ಅಧ್ಯಕ್ಷರೂ ಆದ ಜೆಜೆಎಂ ವೈದ್ಯಕೀಯ ಕಾಲೇಜಿನ ಪೆಥಾಲಜಿ ಪ್ರಾಧ್ಯಾಪಕ ಡಾ. ಸುರೇಶ್ ಹನಗವಾಡಿ ಅವರನ್ನು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅಭಿನಂದಿಸಿದ್ದಾರೆ.

ನಗರದಲ್ಲಿ ಇಂದಿನಿಂದ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಪ್ರವಚನ
ಭಕ್ತರು ಪಾದಯಾತ್ರೆ ಕೈಗೊಳ್ಳುವ ಮುನ್ನ ವಿರಕ್ತಮಠದ ಆವರಣದಲ್ಲಿ ಇಂದಿನಿಂದ ಇದೇ ದಿನಾಂಕ 17 ರವರೆಗೆ ಪ್ರತಿ ದಿನ ಸಂಜೆ 6 ರಿಂದ 8.30 ರವರೆಗೆ ಶ್ರೀ ಕೊಟ್ಟೂರು ಗುರು ಬಸವೇಶ್ವರರ ಪುರಾಣ-ಪ್ರವಚನ ಮರೋಳ ಹಿರೇಮಠದ ಮುದುಕಯ್ಯ ಶಾಸ್ತ್ರಿಗಳು ಪ್ರವಚನ ನಡೆಸಿಕೊಡಲಿದ್ದಾರೆ.

ಜಿಲ್ಲೆಯಲ್ಲಿ ಭತ್ತದ ನಾಟಿ ಕಾರ್ಯ ಆರಂಭ ಸಮಗ್ರ ಪೋಷಕಾಂಶಗಳ ನಿರ್ವಹಣೆಗೆ ಸಲಹೆ
ಜಿಲ್ಲೆ ಯಾದ್ಯಂತ ಪ್ರಸಕ್ತ ಬೇಸಿಗೆ ಹಂಗಾ ಮಿನ ಭತ್ತದ ನಾಟಿ ಕಾರ್ಯ ಪ್ರಾರಂಭವಾಗಿದ್ದು, ಭತ್ತದ ಬೆಳೆಯ ಉತ್ತಮ ಬೆಳವಣಿಗೆ ಹಾಗೂ ಇಳುವರಿ ಹೆಚ್ಚಿಸಲು ಅಗತ್ಯ ಪೋಷಕಾಂಶಗಳ ನಿರ್ವಹಣೆ ಮುಖ್ಯವಾಗಿ ರುತ್ತದೆ ಈ ಕುರಿತಂತೆ ಜಂಟಿ ಕೃಷಿ ನಿರ್ದೇಶಕರು ರೈತರಿಗೆ ಸಲಹೆ ನೀಡಿದ್ದಾರೆ.

ವಚನಾಮೃತ ಬಳಗದಿಂದ ಭರತ ಹುಣ್ಣಿಮೆ
ವಚನಾಮೃತ ಬಳಗದಿಂದ ಭರತ ಹುಣ್ಣಿಮೆ, ಕಿನ್ನರಿ ಬೊಮ್ಮಯ್ಯ ಅವರ ಜಯಂತಿ ಮತ್ತು ಉಳವಿ ಚೆನ್ನಬಸವಣ್ಣ ಅವರ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಬಳಗದ ಅಧ್ಯಕ್ಷರಾದ ಸೌಮ್ಯ ಸತೀಶ್ ಅವರ ಮನೆಯಲ್ಲಿ ಆಚರಿಸಲಾಯಿತು.

ಗ್ರಾಮೀಣ ಮಹಿಳೆಯರಿಗೆ ಉಚಿತ ಕಾಲೇಜು ಶಿಕ್ಷಣ ಶ್ಲ್ಯಾಘನೀಯ
ದೇಶದಲ್ಲಿ ಮಹಿಳಾ ಸಾಕ್ಷರತೆ ಕಡಿಮೆ ಇದ್ದು, ಅದರಲ್ಲೂ ಗ್ರಾಮೀಣ ಮಹಿಳೆಯರ ಕಾಲೇಜು ಶಿಕ್ಷಣ ಕ್ಕೆ ಸೇರುವ ಅನುಪಾತ ತುಂಬಾನೇ ಕಡಿಮೆಯಿದ್ದು, ಇಂತಹ ಸಂದರ್ಭದಲ್ಲಿ ದಾವಣಗೆರೆ ತಾಲ್ಲೂಕು ಅತ್ತಿಗೆರೆ ಗ್ರಾಮದ ಎಸ್.ಸಿ.ಎಸ್.ಜಿ ಪದವಿಪೂರ್ವ ಕಾಲೇಜು ಗ್ರಾಮೀಣ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದ್ದು.

ಹರಪನಹಳ್ಳಿಯಲ್ಲಿ ಐದನೇ ದಿನಕ್ಕೆ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ
ಹರಪನಹಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಗ್ರಹಿಸಿ ಗ್ರಾಮ ಆಡಳಿತಾಧಿಕಾರಿ ಗಳು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಶುಕ್ರವಾರ ಐದನೇ ದಿನಕ್ಕೆ ಕಾಲಿಟ್ಟಿದೆ.

ಪುಲ್ವಾಮಾ ದಾಳಿ ಬಿಜೆಪಿಯ ಷಡ್ಯಂತ್ರ
ಕಳೆದ ಆರು ವರ್ಷಗಳ ಹಿಂದೆ ದೇಶದ ಸೈನಿಕರನ್ನು ಗುರಿಯಾಗಿಟ್ಟು ಕೊಂಡು ನಡೆದ ಪುಲ್ವಾಮಾ ದಾಳಿ ಬಿಜೆಪಿಯ ರಾಜಕೀಯ ಷಡ್ಯಂತ್ರದ ಭಾಗಗಳ ಲ್ಲೊಂದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಆರೋಪಿಸಿದರು.

ದೇವರು ಜನಪ್ರತಿನಿಧಿಗಳಿಗೆ ರಸ್ತೆ ದುರಸ್ತಿಗೊಳಿಸುವ ಬುದ್ಧಿ ನೀಡಲಿ
ಹರಿಹರ : ತಾಲ್ಲೂಕಿನ ಬಹುತೇಕ ರಸ್ತೆಗಳು ಹಾಳಾಗಿದ್ದು, ಇಂತಹ ರಸ್ತೆಯನ್ನು ದುರಸ್ತಿ ಪಡಿಸುವ ಬುದ್ಧಿಯನ್ನು ದೇವರು ಜನ ಪ್ರತಿನಿಧಿಗಳಿಗೆ ಕರುಣಿಸಲಿ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಹೇಳಿದರು.

ರೋಟರಿ ಕ್ಲಬ್ ಮಿಡ್ಟೌನ್ ವತಿಯಿಂದ ಕ್ಯಾನ್ಸರ್ ಶಿಬಿರ
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬಿಜೆಎಸ್ ಭಾರತೀಯ ಜೈನ ಸಂಘಟನೆ, ದಾವಣಗೆರೆ ಚಾಪ್ಟರ್ ಹಾಗೂ ರೋಟರಿ ಕ್ಲಬ್ ಮಿಡ್ಟೌನ್ ದಾವಣಗೆರೆ, ರೋಟರಿ ಕ್ಲಬ್ ದಾವಣಗೆರೆ ಮತ್ತು ಸುಕ್ಷೇಮ ಆಸ್ಪತ್ರೆಯ ಸಹಕಾರದಿಂದ ಮಹಿಳೆಯರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು.

ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಅನುದಾನ, ಅಧಿಕಾರ ನೀಡಿ
ಮಲೇಬೆನ್ನೂರು : ಸರ್ಕಾರವು ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಅನುದಾನ ಮತ್ತು ಅಧಿಕಾರ ಕೊಟ್ಟಾಗ ಮಾತ್ರ ನಾಲೆಗಳ ದುರಸ್ತಿ ಮತ್ತು ನೀರಿನ ಸಮಸ್ಯೆ ನಿವಾರಣೆಯಾಗಲು ಸಾಧ್ಯ

ಸಿರಿಗೆರೆಯಲ್ಲಿ ಇಂದು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ
ಸಿರಿಗೆರೆಯ ತರಳಬಾಳು ಬೃಹನ್ಮಠದ ಕಾಯಕ ಯೋಗಿ ಲಿಂ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ 17ನೇ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮವು ಮಠದ ಆವರಣದಲ್ಲಿ ಇಂದು ಬೆಳಿಗ್ಗೆ 6.30ಕ್ಕೆ ನಡೆಯಲಿದೆ.

ನಂದಿಗುಡಿಯಲ್ಲಿ ನಂದಿ ರಥಯಾತ್ರೆಗೆ ಶಾಸಕ ಹರೀಶ್ ಸ್ವಾಗತ
ನಂದಿ ರಥಯಾತ್ರೆಯು ಕರ್ನಾಟಕ ರಾಜ್ಯಾದ್ಯಂತ ದಿನಾಂಕ 31.12.2024 ರಿಂದ 29.03.2025 ರವರೆಗೆ ಸಂಚರಿಸಲಿದ್ದು, ಗುರುವಾರ ನಂದಿಗುಡಿ ಗ್ರಾಮಕ್ಕೆ ಆಗಮಿಸಿದಾಗ ಶಾಸಕ ಬಿ.ಪಿ. ಹರೀಶ್ ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿದರು.

ಅಕ್ಕಮಹಾದೇವಿ ಸಮಾಜದಿಂದ 25ನೇ ವರ್ಷದ ವಧು-ವರರ ಸಮಾವೇಶ
ನಗರದ ಶ್ರೀ ಅಕ್ಕಮಹಾದೇವಿ ಸಮಾಜದ ವತಿಯಿಂದ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ವಧು-ವರರ ಅನ್ವೇಷಣಾ ಸಮಾವೇಶವು ಇತ್ತೀಚೆಗೆ ಪಿಜೆ ಬಡಾವಣೆಯಲ್ಲಿರುವ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿತು.

ಹರಿಹರ ನಗರದೇವತೆ ಹಂದರಗಂಬ ಪೂಜೆ
ಹರಿಹರ : ನಗರದಲ್ಲಿ ಬರುವ ಮಾರ್ಚ್ 18 ರಿಂದ 22 ರವರೆಗೆ ನಡೆಯುವ ಗ್ರಾಮದೇವತೆ ಊರಮ್ಮ ದೇವಿ ಹಬ್ಬದ ಅಂಗವಾಗಿ ದೇವಸ್ಥಾನ ರಸ್ತೆಯಲ್ಲಿ ಹಂದರಗಂಬ ಪೂಜೆಯನ್ನು ಇಂದು ನೆರವೇರಿಸಲಾಯಿತು.

`ತುಂಬಿದ ಕೊಡ ತುಳಕಿತಲೇ ಪರಾಕ್’
ಹೂವಿನಹಡಗಲಿ : ಐತಿಹಾಸಿಕ ಮೈಲಾರ ಸುಕ್ಷೇತ್ರದಲ್ಲಿ ಶುಕ್ರವಾರ ಸಂಜೆ ಲಕ್ಷಾಂತರ ಭಕ್ತರ ನಡುವೆ ಕಾರಣಿಕ ಮಹೋತ್ಸವ ಜರುಗಿತು.

ಶ್ರೀ ಶಾಂತವೀರ ಸ್ವಾಮೀಜಿ ಇಷ್ಟಾರ್ಥ ಈಡೇರಿಸುವ ಸಿದ್ದಿ ಪುರುಷರು
ಜಗಳೂರು : ಜನರ ಭಾವನೆಗಳಿಗೆ ಶ್ರೀ ಶಾಂತವೀರ ಸ್ವಾಮೀಜಿಗಳು ಉಸಿರಾಗಿದ್ದರು ಎಂದು ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಾಣೇಬೆನ್ನೂರು ತಾ. ಲಿಂಗದಹಳ್ಳಿ : ಸ್ಪಟಿಕ ಶಿವಲಿಂಗ ಪ್ರತಿಷ್ಠಾಪನೆ
ರಾಣೇಬೆನ್ನೂರು : ತಾಲ್ಲೂಕಿನ ಲಿಂಗ ದಹಳ್ಳಿ ಸಂಸ್ಥಾನದ ಹಿರೇಮಠದಲ್ಲಿ ನಾಳೆ ದಿನಾಂಕ 15 ರ ಶನಿವಾರ ಶ್ರೀ ಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳಿಂದ ಜಗತ್ತಿನಲ್ಲಿಯೇ ದೊಡ್ಡದಾದ ಸ್ಪಟಿಕ ಶಿವಲಿಂಗದ ಪ್ರತಿಷ್ಠಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ

ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್
ನೇಕಾರ ಸಮಾಜ ಒಗ್ಗಟ್ಟಿನಲ್ಲಿ ಕೊರತೆ ಕಾಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮುಂದೆ ಬಂದು ಒಗ್ಗಟ್ಟನ್ನು ನಾವು ತೋರಿಸಬೇಕು. ಹಾಗೂ ಈಗ ನಡೆಯುತ್ತಿರುವ ಇಂತಹ ಕ್ರೀಡೆಗಳಿಗೆ ಪ್ರೋತ್ಸಾಹಿಸಬೇಕು

ಯಲ್ಲಮ್ಮ ದೇವಸ್ಥಾನದಲ್ಲಿ ಹುಣ್ಣಿಮೆ ಜಾತ್ರೆ
ಇಲ್ಲಿನ ವಿನೋಬನಗರ 4 ಮೇನ್, 4 ಕ್ರಾಸ್ ನಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ 25ನೇ ವರ್ಷದ ಭರತ ಹುಣ್ಣಿಮೆ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನಡೆಯಿತು.

ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತಕ್ಕೆ 3ನೇ ಸ್ಥಾನ
ಶಿವಮೊಗ್ಗ : ಜಾಗತಿಕವಾಗಿ ಆರ್ಥಿಕ ಶಕ್ತಿಯಾಗಿ ಭಾರತ 3ನೇ ಸ್ಥಾನಕ್ಕೆ ಬರಲು ಹಣಕಾಸು ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಲೋಕ ಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಬೆಳಲಗೆರೆ ವಿಎಸ್ಎಸ್ಎನ್ ಅಧ್ಯಕ್ಷರಾಗಿ ಶಿವಮೂರ್ತೆಪ್ಪ, ಉಪಾಧ್ಯಕ್ಷರಾಗಿ ತಮ್ಮಯ್ಯ
ಮಲೇಬೆನ್ನೂರು : ಬೆಳಲಗೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಸಿ.ಶಿವಮೂರ್ತಿಪ್ಪ, ಉಪಾಧ್ಯಕ್ಷರಾಗಿ ತಮ್ಮಯ್ಯ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಷಬಾನ್ ಖುಷಿಯಲ್ಲಿ ಮಿಂದ ಮಕ್ಕಳು..!
ಗುರು-ಹಿರಿಯರ ಹಬ್ಬವೆಂದು ಪ್ರತೀತಿ ಹೊಂದಿರುವ ಷರಬಾನ್ ಹಬ್ಬವು ನಗ ರಾದ್ಯಂತ ಮುಸ್ಲಿಂ ಬಾಂ ಧವರು ಇಂದು ಮಸೀದಿ ಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಜಾಗರಣೆ ಆಚರಿಸಿದರು.

ರಾಣೇಬೆನ್ನೂರು ರೇಣುಕಾ ಸೊಸೈಟಿ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ
ರಾಣೇಬೆನ್ನೂರು : ಇಲ್ಲಿನ ರೇಣುಕಾ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾಗಿ ಬಿ.ಎಸ್.ಪಟ್ಟಣಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಬಿ.ಎಸ್. ಸಣ್ಣಗೌಡ್ರ ಇಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅಣ್ಣ ಅವಿರೋಧವಾಗಿ ಆಯ್ಕೆಯಾದರು.

ಹರಿಹರದಲ್ಲಿ ಗ್ರಾಮದೇವತೆ ಉತ್ಸವ ಇಂದು ಹಂದರಕಂಬ ಪೂಜೆ
ಬರುವ ಮಾರ್ಚ್ 18 ರಿಂದ 22 ರವರೆಗೆ ನಡೆಯುವ ಗ್ರಾಮ ದೇವತೆ ಉತ್ಸವದ ಅಂಗವಾಗಿ ಇಂದು ಬೆಳಿಗ್ಗೆ 10 ಕ್ಕೆ ಸಹಸ್ರಾರ್ಜುನ ವೃತ್ತದ ಹತ್ತಿರ ಹಂದರ ಕಂಬ ಪೂಜೆಯನ್ನು ಹಮ್ಮಿಕೊಳ್ಳ ಲಾಗಿದೆ

ಹುಬ್ಬಳ್ಳಿ ಚೌಡಪ್ಪ ಗಲ್ಲಿಯಲ್ಲಿ ವಿಜೃಂಭಣೆಯ ಗುಗ್ಗಳ
ಧಾರ್ಮಿಕ ಆಚರಣೆಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಧರ್ಮ, ಆಚಾರ, ವಿಚಾರ ಮತ್ತು ಸಂಸ್ಕಾರಗಳೊಂದಿಗೆ ಸತತವಾಗಿ 25 ವರ್ಷಗಳ ಕಾಲ ಧಾರ್ಮಿಕ ಕಾರ್ಯಕ್ರಮ ಆಚರಿಸಿಕೊಂಡು ಬರುವ ಮೂಲಕ ಇಂದಿನ ಪೀಳಿಗೆಗೆ ಅರಿವು ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ

ಲತಾರಾಣಿಗೆ ಪಿಹೆಚ್ಡಿ
ನಗರದ ಜೈನ್ ತಾಂತ್ರಿಕ ಮಹಾವಿ ದ್ಯಾಲಯದ ಗಣಕ ಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾ ಪಕರಾದ ಲತಾರಾಣಿ ಟಿ.ಆರ್. ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 24ನೇ ಘಟಿಕೋ ತ್ಸವದಲ್ಲಿ ಪಿಹೆಚ್ಡಿ ಪದವಿ ನೀಡಿದೆ.

ವೀರಶೈವ ಸಭಾದ ಪದಾಧಿಕಾರಿಗಳಿಗೆ ಗೌರವ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಸ್.ಜಿ. ಉಳುವಯ್ಯ ಅವರ ನಿವಾಸ ದಲ್ಲಿ ಇಂದು ನಡೆದ ಶ್ರೀ ಉಳವಿ ಚೆನ್ನಬಸವೇಶ್ವರ ರಥೋತ್ಸವ ಪೂಜಾ ಕಾರ್ಯ ಕ್ರಮದ ಸಂದರ್ಭದಲ್ಲಿ ಮಹಾಸಭಾದ ಪದಾಧಿಕಾರಿಗಳನ್ನು ಗೌರವಿಸಲಾಯಿತು.