Category: ದಾವಣಗೆರೆ

Home ದಾವಣಗೆರೆ

ಆಧುನಿಕ ದೃಶ್ಯ ಮಾಧ್ಯಮದ ಹಾವಳಿಗೆ ರಂಗಭೂಮಿ ಕ್ಷೀಣ

ಟಿ.ವಿ., ಮೊಬೈಲ್, ಸಾಮಾಜಿಕ ಜಾಲತಾಣ ಸೇರಿದಂತೆ ಆಧುನಿಕ ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ರಂಗಭೂಮಿ ಕ್ಷೀಣಿಸುತ್ತಿದೆ. ಒಂದು ಕಾಲದಲ್ಲಿ ಕರ್ನಾಟಕ ಕಲಾವಿದರ ಮತ್ತು ರಂಗಕಲೆಯ ತವರು ಮನೆಯಾಗಿತ್ತು

ಚುನಾವಣೆ ; ಚೆಕ್‌ಪೋಸ್ಟ್‌ಗಳಿಗೆ ಎಸ್ಪಿ ಉಮಾ ಭೇಟಿ, ಪರಿಶೀಲನೆ

ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ದಾವಣ ಗೆರೆ ನಗರ ವ್ಯಾಪ್ತಿಯಲ್ಲಿ ತೆರೆದಿರುವ ವಿವಿಧ ಚೆಕ್‌ಪೋಸ್ಟ್‌ಗಳಿಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

`ಮಳೆ-ಬೆಳೆ ಸಮೃದ್ಧಿಯಾಗಲಿ, ಸಕಲ ಜೀವರಾಶಿಗಳಿಗೆ ಒಳಿತಾಗಲಿ’

ಕಂಚಿಕೆರೆ ಸುಕ್ಷೇತ್ರ ಬಿದ್ದಹನುಮಪ್ಪನಮಟ್ಟಿ ಶ್ರೀ ಬಸವರಾಜ ಗುರೂಜಿ ಅವರು ಶ್ರೀ ದುರ್ಗಾಂ ಬಿಕಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವ ಸ್ಥಾನಕ್ಕೆ   ಆಗಮಿಸಿ, ಅಮ್ಮನಿಗೆ ಸೀರೆ, ಕುಪ್ಪಸ, ಅರಿಷಿಣ, ಕುಂಕುಮ, ಉಡಿ ಅಕ್ಕಿ, ಬಳೆ, ತಾಂಬೂಲ, ಫಲಪುಷ್ಪ, ಹಣ್ಣು-ಕಾಯಿಯನ್ನು  ಸಮರ್ಪಿ ಸಿದರು. 

ರೆಡ್ ಕ್ರಾಸ್‌ನಿಂದ ರಕ್ತದಾನ ಶಿಬಿರ

ನಗರದೇವತೆ ಶ್ರೀ ದುರ್ಗಂಬಿಕಾ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ದುರ್ಗಾಂಬಿಕಾ ದೇವಿ ಟ್ರಸ್ಟ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರುಗಳ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಯಿತು. 

ವಚನ ಸಾಹಿತ್ಯದ ಮೂಲಕ ಶರಣರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು

12ನೇ ಶತಮಾನದಲ್ಲಿ ವಚನ ಸಾಹಿತ್ಯ ಬೆಳೆದು ಬಂದಿದ್ದು, ವಚನ ಸಾಹಿತ್ಯದ ಮೂಲಕ ಹಲವಾರು ಶರಣರು ಜಾತಿ ವ್ಯವಸ್ಥೆಯನ್ನು ಕಿತ್ತೆಸೆದು  ಸಮ ಸಮಾಜ ನಿರ್ಮಾಣ ಮಾಡುವುದಕ್ಕೆ ಶ್ರಮಿಸಿದರು

ಭದ್ರಾ ನೀರು ಹರಿಸಲು ಭಾರತೀಯ ರೈತ ಒಕ್ಕೂಟ ಒತ್ತಾಯ

ಭದ್ರಾ ಅಚ್ಚುಕಟ್ಟು ಪ್ರದೇಶ ದಾವಣಗೆರೆ ವಿಭಾಗದ ಶಿರಮಗೊಂಡನಹಳ್ಳಿ, ನಾಗನೂರು, ಬೆಳವನೂರು, ಶಾಮನೂರು, ಬಿಸಲೇರಿ, ಜರೇಕಟ್ಟೆ, 10 ರ ವಲಯ ಹರಿಹರ ವಿಭಾಗಕ್ಕೆ ನೀರು ಬಿಡುಗಡೆಯಾಗಿ 8 ದಿನಗಳಾದರೂ ತೋಟಗಳಿಗೆ, ದನ-ಕರುಗಳಿಗೆ ನೀರು ಲಭ್ಯವಿಲ್ಲ.

ಸಿಎನ್ಕೆ ಸ್ಮರಣಾರ್ಥ ಪುಸ್ತಕ ವಿತರಣೆ

ನಾಗಮ್ಮ ಕೇಶವಮೂರ್ತಿ ಅವರ ಸ್ಮರಣೆಗಾಗಿ ಮೌಲಾನಾ ಆಜಾದ್ ಸಂಸ್ಥೆಯ ವತಿಯಿಂದ ನಗರದ ವಿರಕ್ತ ಮಠದ ಶ್ರೀ ಮುರುಘರಾಜೇಂದ್ರ ಶಾಲೆಯಲ್ಲಿ   ಶ್ರೀ ಬಸವಪ್ರಭು ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಇಂದು ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು.

ಜಿಲ್ಲಾ – ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ನೀಡಲು ಒತ್ತಾಯ

ಜಾಹೀರಾತುಗಳನ್ನು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಬಿಡುಗಡೆ ಮಾಡುವಂತೆ ಕೋರಿ, ಕರ್ನಾಟಕ  ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ದಾವಣಗೆರೆ ಜಿಲ್ಲಾ ಘಟಕದಿಂದ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರಿನ್ ಬಾನು ಎಸ್. ಬಳ್ಳಾರಿ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಲಾಯಿತು.

ಕಬ್ಬಡಿ ಪ್ರೀಮಿಯರ್‌ ಲೀಗ್‌ ಪ್ರಯುಕ್ತ ಮ್ಯಾರಥಾನ್‌

ಅಮೆಚೂರ್ ಕಬಡ್ಡಿ ಸಂಸ್ಥೆ, ಜನಪ್ರಿಯ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆ ಇವರ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದಿನಿಂದ 31ರವರೆಗೆ ನಡೆಯುವ  ಕಬ್ಬಡ್ಡಿ ಪ್ರೀಮಿಯರ್ ಲೀಗ್ -24 ಪಂದ್ಯಾವಳಿಗೆ ಜಯದೇವ ವೃತ್ತದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ನಿನ್ನೆ ಮ್ಯಾರಥಾನ್ ಏರ್ಪಡಿಸಲಾಗಿತ್ತು. 

ಮುಮುಕ್ಷು ಶ್ರೀ ಮಯಂಕ್ ಮಹಾವೀರ ಸಂಘವಿಯ ಜೈನ್ ಸಂತ ದೀಕ್ಷೆ

ಸಂಘವಿ ಮಹಾವೀರ ಜೈನ್ ಅವರ 17 ವರ್ಷದ ಪುತ್ರ ಮಯಂಕ್ ಅವರು ಬರುವ ಏಪ್ರಿಲ್ 1 ರ ಸೋಮವಾರ ಲೌಕಿಕ ಸುಖಮಯ ಬದುಕಿನಿಂದ ನಿರ್ಗಮಿಸಿ, ಕಠಿಣವಾದ ಜನ್ಮ ಜನ್ಮಾಂತರಗಳ ಹುಟ್ಟು – ಸಾವುಗಳ ಜಂಜಾಟಗಳಿಂದ ಮುಕ್ತಿ ಹೊಂದಬಹುದಾದಂತಹ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. 

ಶ್ರೀ ಬಕ್ಕೇಶ್ವರ ಸ್ವಾಮಿ ನೂತನ ರಥ ಪೂಜೆ

ನಗರದ ಚೌಕೀಪೇಟೆ ಯಲ್ಲಿರುವ ಶ್ರೀ ಗುರು ಬಕ್ಕೇಶ್ವರ ಸ್ವಾಮಿಯ ನೂತನ ರಥದ ಪೂಜಾ ಹಾಗೂ ಸಮರ್ಪಣಾ ಕಾರ್ಯಕ್ರಮದಲ್ಲಿ ಸೇವಾ ಸಮಿತಿ, ರಥೋತ್ಸವ ಸಮಿತಿ ಸದಸ್ಯರುಗಳು, ದೇವರಮನಿ ಶಿವಕುಮಾರ್, ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ ಮತ್ತಿತರರು ಅಲ್ಲಿದ್ದರು. 

ಈ ಬಾರಿ ಶೇ.85ಕ್ಕಿಂತ ಹೆಚ್ಚು ದಾಖಲೆ ಮತದಾನ ಆಗಬೇಕು

ಪ್ರಸ್ತುತ 18ನೇ ಲೋಕಸಭಾ ಚುನಾವಣೆಯಲ್ಲಿ ಶೇ 85ಕ್ಕಿಂತಲೂ ಹೆಚ್ಚಿನ ಮತದಾನವಾಗುವಂತೆ  ಮಾಡಿ, ಹೊಸ ದಾಖಲೆ ನಿರ್ಮಿಸುವಂತೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ತಿಳಿಸಿದರು.

error: Content is protected !!