Tag: ಹರಿಹರ

Home ಹರಿಹರ

ಮಲೇಬೆನ್ನೂರಿನಲ್ಲಿ ರೈತರ ಹೋರಾಟ ತೀವ್ರ

ಮಲೇಬೆನ್ನೂರು : ಭದ್ರಾ ಬಲದಂಡೆ ನಾಲೆಯಲ್ಲಿ ಸತತವಾಗಿ 100 ದಿನ ನೀರು ಹರಿಸುವಂತೆ ಆಗ್ರಹಿಸಿ ಹರಿಹರ ತಾಲ್ಲೂಕಿನ ರೈತರು 3ನೇ ದಿನವಾದ ಗುರುವಾರ ಕೊಮಾರನಹಳ್ಳಿ ಬಳಿ ರಾಜ್ಯ ಹೆದ್ದಾರಿ ತಡೆ ಚಳುವಳಿ ನಡೆಸಿದರು.

ಹರಿಹರ : ನಗರಸಭೆ ಕಾಮಗಾರಿಗೆ ತಡೆ ಗ್ರಾವೆಲ್ ಹಾಕದೇ ಇರುವುದಕ್ಕೆ ಆಕ್ಷೇಪ

ಹರಿಹರ : ನಗರದ ನಗರಸಭೆಯ ನೂತನ ಕಟ್ಟಡದ ಕಾಮಗಾರಿ ಕಳಪೆಯಾಗಿದೆ. ಗ್ರಾವೆಲ್ ಹಾಕದೆ ಮಣ್ಣು ಮಿಶ್ರಿತ ಕಟುಗನ್ನು ಹಾಕಿ ಗುಂಡಿ ಮುಚ್ಚಲಾಗಿದೆ ಎಂದು ಆರೋಪಿಸಿ, ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಪೂರ್ ಗುತ್ತಿಗೆದಾರ ಮುಖ್ಯಸ್ಥರನ್ನು  ತರಾಟೆಗೆ ತೆಗೆದುಕೊಂಡು ಕಾಮಗಾರಿ ಸ್ಥಗಿತಗೊಳಿಸಿದರು.

ಭದ್ರಾ ನಾಲೆಯಲ್ಲಿ ನೀರು ಹರಿಸದಿದ್ದರೆ ಉಗ್ರ ಹೋರಾಟ : ರೈತರ ಎಚ್ಚರಿಕೆ

ಮಲೇಬೆನ್ನೂರು : ಭದ್ರಾ ನಾಲೆಯಲ್ಲಿ ಸತತವಾಗಿ 100 ದಿನ ನೀರು ಹರಿಸುವಂತೆ ಅಚ್ಚು ಕಟ್ಟಿನ ರೈತರು ಮಂಗಳವಾರ ಮಲೇಬೆನ್ನೂರಿನ ನೀರಾವರಿ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಗ್ರಾಮಸ್ಥರ ವಿರೋಧ

ಮಲೇಬೆನ್ನೂರು : ಕೊಮಾರನಹಳ್ಳಿಯ ಐತಿಹಾಸಿಕ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥಸ್ವಾಮಿ ಕೆರೆಗೆ ಜಲ ಮೂಲವಾಗಿರುವ ಗುಡ್ಡಗಾಡಿನಲ್ಲಿ ಮಲೇಬೆನ್ನೂರು ಪುರಸಭೆಯವರು ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಯತ್ನ ನಡೆಸಿರುವುದನ್ನು ವಿರೋಧಿಸಿ, ಕೊಮಾರನಹಳ್ಳಿ ಗ್ರಾಮಸ್ಥರು ಇತ್ತೀಚಿಗೆ ಪ್ರತಿಭಟನೆ ನಡೆಸಿದರು.

ಹರಿಹರ : ಊರಮ್ಮ ದೇವಿ ಯುವಕ ಸಂಘದಿಂದ 18 ಅಡಿ ಗಣೇಶ ಮೂರ್ತಿ

ಹರಿಹರ : ನಗರದ ಹೊಸಭರಂಪುರ ಬಡಾವಣೆಯ ಶ್ರೀ ಗ್ರಾಮದೇವತೆ ಊರಮ್ಮ ದೇವಿಯ ಯುವಕ ಸಂಘದ ವತಿಯಿಂದ ಹರಿಹರ ಕಾ ರಾಜ್ 18 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. 

ಹರಿಹರ : ಗಾಂಧಿ ಮೈದಾನದಲ್ಲಿ 13 ಅಡಿ ಎತ್ತರದ ಗಣಪ

ಹರಿಹರ : ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿಯ ವತಿಯಿಂದ 13 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಚಂದ್ರಯಾನ 3 ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ.

ಸನಾತನ ಧರ್ಮದ ಅವಹೇಳನ ವಿಕೃತಿ

ಹರಿಹರ : ಸನಾತನ ಧರ್ಮದ ಬಗ್ಗೆ ಅವಹೇಳನ ಪದಗಳನ್ನು ಬಳಸಿ ಮಾತನಾಡುವವರು ವಿಕೃತ ಮನಸ್ಸಿನವರು. ಅವರ ಹೇಳಿಕೆ ಗಳಿಗೆ ಯಾರೂ ಮಾನ್ಯತೆ ಕೊಡ ಬಾರದು ಎಂದು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಹರಿಹರ : ಡಿಆರ್ಎಂ ಸರ್ಕಾರಿ ಶಾಲೆ ಅವ್ಯವಸ್ಥೆಗೆ ತಹಶೀಲ್ದಾರ್ ಬೇಸರ

ಹರಿಹರ : ಇಲ್ಲಿನ ಡಿಆರ್‍ಎಂ ಸರ್ಕಾರಿ ಪ್ರೌಢಶಾಲೆಗೆ ಗುರುವಾರದಂದು ಭೇಟಿ ನೀಡಿದ್ದ ತಹಶೀಲ್ದಾರ್ ಪೃಥ್ವಿ ಸಾನಿಕಂ ಅಲ್ಲಿನ ಅವ್ಯವಸ್ಥೆ ಕಂಡು ಬೇಸರ ವ್ಯಕ್ತಪಡಿಸಿದರು.

ನೀರಾವರಿ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದ ದಿನಗೂಲಿ ನೌಕರರು

ಮಲೇಬೆನ್ನೂರು : ಇಲ್ಲಿನ ಭದ್ರಾ ನಾಲಾ ನಂ. 3 ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಎದುರು ಬಾಕಿ ವೇತನಕ್ಕೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಹೊರ ಗುತ್ತಿಗೆ ನೌಕರರು (ಸೌಡಿಗಳು) ಶುಕ್ರವಾರ ನೀರಾವರಿ ಕಚೇರಿಗಳಿಗೆ ಬೀಗ ಹಾಕಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಧಿಕ್ಕಾರ ಕೂಗಿದರು.

ಕೆ.ಎನ್. ಹಳ್ಳಿ ಗ್ರಾ.ಪಂ. ಉಪಾಧ್ಯಕ್ಷರಾಗಿ ಪರಶುರಾಮ್

ಮಲೇಬೆನ್ನೂರು : ಕಡಾರನಾಯ್ಕನಹಳ್ಳಿ ಗ್ರಾಮ ಪಂಚಾಯತಿ ನೂತನ ಉಪಾಧ್ಯಕ್ಷರಾಗಿ ಹೊಸಪಾಳ್ಯದ ಪರಶುರಾಮ್ ಅವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

‘ಎಸೆನ್ಸ್ ಆಫ್ ಎಸೆನ್ಸ್’ ಪುಸ್ತಕ ಬಿಡುಗಡೆ

ಹರಿಹರ : ಇಲ್ಲಿನ ಚಿಂತನ ಪ್ರತಿಷ್ಠಾನ ಕೇಂದ್ರದ ಆವರಣದಲ್ಲಿ ಕುಮಾರಪಟ್ಟಣದ ಡಾ|| ಪ್ರಕಾಶ ಅವರು ಬರೆದಿರುವ  ಎಸೆನ್ಸ್ ಆಫ್ ಎಸೆನ್ಸ್  ಎಂಬ ಇಂಗ್ಲಿಷ್ ಅವತರಣಿಕೆಯ ಪುಸ್ತಕವನ್ನು ಚಿಂತನ ಟಿ.ವಿ ವ್ಯವಸ್ಥಾಪಕ ಸುಬ್ರಹ್ಮಣ್ಯ ನಾಡಿಗೇರ್ ಬಿಡುಗಡೆ ಮಾಡಿದರು.

error: Content is protected !!