ಮಾನ್ಯರೇ,
ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಪಿ.ಬಿ ರಸ್ತೆಯು ಹರಿಹರ ಮತ್ತು ದಾವಣಗೆರೆ ನಗರಗಳನ್ನು ಸಂಪರ್ಕಿಸುತ್ತದೆ, ದಾವಣಗೆರೆ ಮಹಾನಗರವಾಗಿ ಬೆಳೆದ ಪರಿಣಾಮ ವಾಹನಗಳ ದಟ್ಟಣೆ ದೊಡ್ಡಬಾತಿ ಗ್ರಾಮದಲ್ಲಿ ಹೆಚ್ಚುತ್ತಿದೆ.ಆದರೆ ಇಲ್ಲಿ ಸೇವಾ ರಸ್ತೆಗಳಿಲ್ಲದ ಕಾರಣ ಸಾಮಾನ್ಯ ಪಾದಚಾರಿಗಳು ಪರದಾಡುವಂತಾಗಿದೆ.
ರೈತರು, ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ರೋಗಿಗಳು ಮತ್ತು ವೃದ್ಧರು ಇಲ್ಲಿ ರಸ್ತೆ ದಾಟುವುದೇ ಕಷ್ಟ ಸಾಧ್ಯವಾಗಿದೆ. ದೊಡ್ಡಬಾತಿಯಲ್ಲಿ ರಸ್ತೆ ವಾಹನ ಸಂಚಾರ ನಿಯಂತ್ರಣ ದೀಪ ಹಾಗು ಸಿಸಿಟಿವಿ ಕ್ಯಾಮರಾ ಅಳವಡಿಸಿ, ರಸ್ತೆ ಮೇಲು ಸೇತುವೆ ನಿರ್ಮಿಸಬೇಕು. ಅಲ್ಲದೇ ಇಲ್ಲಿ ರಸ್ತೆ ವೇಗ ವರ್ಧಕ ನಿಯಂತ್ರಣ (ಹಂಪ್ಸ್) ಇದ್ದರೂ ಹೇಳುವವರು, ಕೇಳುವವರು ಇಲ್ಲವಾಗಿದೆ. ರಸ್ತೆ ಸುರಕ್ಷತಾ ನಿಯಮ ಜೀವ ರಕ್ಷಣೆಗಾಗಿ ವಾಹನಗಳ ವೇಗ ನಿಯಂತ್ರಿಸಲು ಕ್ರಮಕೈಗೊಳ್ಳಬೇಕಿದೆ.
-ಜೆ. ಎಸ್. ಚಂದ್ರನಾಥ, ನೀಲಾನಹಳ್ಳಿ.