ಮಾನ್ಯರೇ,
ಕಲಿಯುಗದ ಸಮಾಜದಲ್ಲಿ ನಾವುಗಳು ನೋಡುತ್ತಿರುವುದು ಲೋಕೋಭಿನ್ನರುಚಿ. ನಮ್ಮ ಸಂವಿಧಾನ ನಮ್ಮೆಲ್ಲರಿಗೂ ಸಮಾನತೆ ಕಲ್ಪಿಸಿದೆ ಎನ್ನುವ ವಿಚಾರವನ್ನು ನೀವೂ ನಂಬುತ್ತೀರಾ? ನಂಬುವುದಾದರೆ ಹೇಗೆ ನಂಬುತ್ತೀರಿ.
ನಮ್ಮ ರಾಜಕಾರಣಿಗಳು ಸಾರ್ವಜನಿಕ ಕಾರ್ಯಕ್ರಮದಲ್ಲಿ ಬೊಬ್ಬೆ ಹೊಡೆಯುತ್ತಾರೆ. ಸಮ ಸಮಾಜದ ಚಿಂತನೆ ನಮ್ಮ ಸರ್ಕಾರದ ಕನಸು, ಪ್ರತಿಯೊಬ್ಬರನ್ನು ಉದ್ಧರಿಸುವ ಭಾಗ್ಯಗಳನ್ನು ನಾವು ನೀಡುತ್ತಿದ್ದೇವೆ, ಆದರೆ ಬಸವಣ್ಣನವರ ಕಾಯಕ ಪ್ರಜ್ಞೆಯನ್ನು ಇಲ್ಲಿ ಕಾಣಲು ಸಾಧ್ಯವೇ, ನೀವೇ ಯೋಚಿಸಿ.!
ಕಲ್ಯಾಣ ಕಾರ್ಯಕ್ರಮಗಳು ಪ್ರತಿ ವರ್ಗಕ್ಕೂ ಮೂಲ ಸೌಕರ್ಯ ನೀಡುವ ಕಾರ್ಯಕ್ರಮ ಗಳಾಗಬೇಕು. ನಮ್ಮ ಆಲೋಚನೆಗೆ ಬಂದಿರು ವುದು ನಿಮಗೂ ಬಂದಿದೆ ಎಂದುಕೊಳ್ಳುತ್ತೇನೆ. ಕಲ್ಯಾಣ ಕರ್ನಾಟಕವನ್ನು ಮುನ್ನಡೆಸುವ ಉನ್ನತ ವರ್ಗದ ಅಧಿಕಾರಿಗಳು ನೂರಕ್ಕೆ ತೊಂಬತ್ತೊಂಬತ್ತು ಮಂದಿ ಭ್ರಷ್ಟರು ಎನ್ನುವುದು, ನಮ್ಮ ನಿಮ್ಮೆಲ್ಲರ ವಾದವಲ್ಲವೇ.? ನಮ್ಮದು ಭ್ರಷ್ಟರೇ ತುಂಬಿರುವ ಸಮಾಜ ಎನ್ನುವುದಾದರೆ, ಸಂವಿಧಾನ ಯಾರ ಪರವಾಗಿದೆ.?
ಶೇ.99ರಷ್ಟು ಭ್ರಷ್ಟರನ್ನು ನಾವು, ನೀವೆಲ್ಲರೂ ಪೋಷಿಸುತ್ತಿದ್ದೇವೆ ಅಲ್ಲವೇ. ಇತ್ತೀಚೆಗೆ ಸಿರಿಗೆರೆ ಶ್ರೀಮಠದ ತರಳಬಾಳು ಹುಣ್ಣಿಮೆಯಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳು ಹೇಳುವ ಮಾತನ್ನು ಆಲಿಸಿದರೆ. ಭ್ರಷ್ಟ ಅಧಿಕಾರಿಗಳನ್ನು ನಾವುಗಳು ವೈಭವಿಕರಿಸುತ್ತಿದ್ದೇವೆ ಮತ್ತು ಬೆಂಬಲಿಸುತ್ತಿದ್ದೇವೆ. ಹೌದಲ್ಲವೇ.
ಇಲ್ಲಿಯವರೆಗೂ ಸಾವಿರಾರು ಉನ್ನತ ವರ್ಗದ ಅಧಿಕಾರಿಗಳ ಮನೆಗೆ ರೈಡ್ ಆಗಿ ಕೋಟ್ಯಾಂತರ ರೂ. ಸಂಪತ್ತನ್ನು ಲೋಕಾಯುಕ್ತ ಅಧಿಕಾರಿಗಳು ಅಕೌಂಟ್‌ನಲ್ಲಿ ಇಟ್ಟು ಕೋರ್ಟಿಗೆ ಚಾರ್ಜ್‌ಶೀಟ್ ಸಲ್ಲಿಸಿದ ಮೇಲೆಯೂ ಇವರಿಗೆ ಶಿಕ್ಷೆ ಆಗಿರುವುದನ್ನು ಎಲ್ಲಿಯಾದರೂ ನಾವುಗಳು ನೋಡಿರುವ ಉದಾಹರಣೆಗಳಿವೆಯೇ.? ಇದು ಸಮ ಸಮಾಜದ ಚಿಂತನೆಯೋ ನೀವೇ ಯೋಚಿಸಿ.
ಸಂವಿಧಾನ ಅಧಿಕಾರಿಗಳ ಪರವೋ ಅಥವಾ ಜನ ಸಾಮಾನ್ಯರ ಪರವೋ. ಸಮಾಜದಲ್ಲಿ ನಾವು ಬದಲಾಗಬೇಕೋ, ಕಾನೂನು ಬದಲಾಗಬೇಕೋ..? ಎಂತಹ ಸಮಾಜದಲ್ಲಿ ನಾವು ಬದುಕುತ್ತಿದ್ದೇವಲ್ಲ. ಮಕ್ಕಳಿಗೆ ಇಂತಹ ಸಮಾಜದಲ್ಲಿ ಎಂತಹ ಸಂಸ್ಕಾರ ಕಲಿಸಬೇಕು.
ಈ ಭ್ರಷ್ಟ ವ್ಯವಸ್ಥೆಯನ್ನು ನಮ್ಮಿಂದ ಕಿತ್ತೊಗೆ ಯಲು ಸಾಧ್ಯವಿಲ್ಲ ಎನ್ನುವ ಚಿಂತನೆ ಒಂದೆಡೆಯಾದರೆ. ಇವರನ್ನು ಶಿಕ್ಷಿಸಲು ವಿಶ್ವ ಶಕ್ತಿಯಿಂದ ಮಾತ್ರ ಸಾಧ್ಯ ಎನ್ನುವುದು ನಮ್ಮ ವಿಚಾರಧಾರೆ.
ಭ್ರಷ್ಟ ಸಮಾಜದಲ್ಲಿ ನಾವಿದ್ದೇವೆ ಎನ್ನುವುದಾದರೆ, ರಾಜಕಾರಣಿಗಳನ್ನು ಭ್ರಷ್ಟರನ್ನಾಗಿಸಿದ್ದು ಯಾರು.? ಚುನಾವಣಾ ನೀತಿ ಸಂಹಿತೆ ಕೇವಲ ಸಂವಿಧಾನದ ಸಂಹಿತೆಯಾಗಿದೆಯೋ ಅಥವಾ ಎಲ್ಲರ ನೀತಿ ಸಂಹಿತೆಯಾಗಿದೆಯೋ.?
ಇಂದು ನಾವುಗಳು ಭ್ರಷ್ಟತೆಯ ಮಧ್ಯೆ ಒಂದಿಷ್ಟು ಅಪರೂಪದ ಸಂಸ್ಕಾರವಂತರನ್ನು ನೋಡುತ್ತಿದ್ದೇವೆ. ಇವರುಗಳೇ ನಮ್ಮ ಆದರ್ಶ. ನಮ್ಮ ಪವಿತ್ರ ರಾಜ್ಯ ಸರ್ಕಾರವನ್ನು ಮುನ್ನಡೆಸುವ ಜನ ಪ್ರತಿನಿಧಿಗಳು ನಮ್ಮಗಳ ಮೂಗಿಗೆ ತುಪ್ಪ ಹಚ್ಚುವ ರೀತಿಯೇ ನಯನ ಮನೋಹರ ವಾಗಿದೆ. ಸತ್ವಯುತ ಪ್ರಜೆಗಳಾದ ನಮ್ಮನ್ನು ಎಂತಹ ಪ್ರಜೆಗಳನ್ನಾಗಿಸುತ್ತಿದ್ದಾರೆ. ಆಯ್ಕೆ ನಿಮ್ಮದು.!
ಒಬ್ಬೊಬ್ಬ ರಾಜಕಾರಣಿ ಸೂರ್ಯ ಮುಳುಗದ ಸಾಮ್ರಾಜ್ಯದಷ್ಟು ಬೇನಾಮಿ ಆಸ್ತಿ ಗಳಿಸಿ ವಿಜೃಂಭಿಸುತ್ತಿದ್ದಾರೆ. ಇವರು ಯಾವ ರೀತಿ ನಮ್ಮ ಆದರ್ಶ ಎನ್ನುವುದನ್ನು ನಾವುಗಳೇ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಹಾಗಾಗಿ ಸಮಾಜಮುಖಿಯಾಗಿ ಆಲೋಚಿಸಿ ಮುಂದಿನ ಬಾರಿಯಾದರೂ ನಮ್ಮನ್ನು ಮುನ್ನಡೆಸುವ ಉತ್ತಮ ಜನ ಪ್ರತಿನಿಧಿಯನ್ನು ಆರಿಸೋಣ. ಈ ನೆಲದ ಕಾನೂನು ಜನಸಾಮಾನ್ಯನ ಆಶಯಕ್ಕೆ ಧಕ್ಕೆ ಯಾಗದಿರಲಿ ಎಂಬುದು ನಮ್ಮಯ ಆಶಯ.
– ದಿದ್ದಿಗೆ ಮಹದೇವಪ್ಪ,
ಸಮಾನ ಮನಸ್ಕರು, 99726 99813