ಮಾನ್ಯರೇ,
ನಗರದ ಪ್ರತಿ ವಾರ್ಡ್ಗಳಲ್ಲಿ ಕಸ ಸಂಗ್ರಹಿಸುವ ವಾಹನಗಳಲ್ಲಿ ಇನ್ನು ಮುಂದೆ ವಚನಕಾರರ `ವಚನ ಗೀತೆ’ ಬಳಸಲು ಅಧಿಕಾರಿಗಳು ಸೂಚಿಸಬೇಕು.
ಸಮಾಜ ಸುಧಾರಣೆಗಾಗಿ 12ನೇ ಶತಮಾನದಲ್ಲಿ ಶ್ರಮಿಸಿದ ವಚನಕಾರರ ವಚನಗಳನ್ನು ಧ್ವನಿ ಸುರಳಿ ಮೂಲಕ ಬಳಸಿದರೆ, ನಾಗರಿಕರಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆ ಬೆಳೆಯಲಿದೆ.
ಪೌರಾಡಳಿತದ ಸಚಿವರು, ಪಂಚಾಯತ್, ಪುರಸಭೆ, ನಗರಸಭೆ ಹಾಗೂ ಪಾಲಿಕೆಯ ಸದಸ್ಯರು, ಅಧಿಕಾರಿಗಳು ಮತ್ತು ನೌಕರರು ಈ ಸಲಹೆಗೆ ಸ್ಪಂದಿಸುವಂತೆ ವಿನಂತಿ.
– ಕೊಟ್ರೇಶ್ ಪಿ. ಐರಣಿ, ದಾವಣಗೆರೆ