ರಾಣೇಬೆನ್ನೂರಿನಲ್ಲಿ ಅಭ್ಯರ್ಥಿಗಳ ಮತದಾನ

ರಾಣೇಬೆನ್ನೂರಿನಲ್ಲಿ ಅಭ್ಯರ್ಥಿಗಳ ಮತದಾನ

ರಾಣೇಬೆನ್ನೂರು, ಮೇ 10- ರಾಣೇಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕೋಳಿವಾಡ ಅವರು ಪತ್ನಿ ಪೂರ್ಣಿಮಾ ಜೊತೆ ಹುಟ್ಟೂರು ಗುಡಗೂರಿ ನಲ್ಲಿ, ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಅವರು ಪತ್ನಿ ಮಂಗಳಗೌರಿ ಜೊತೆ ಹುಟ್ಟೂರು ಕುಮಾರಪಟ್ನಂನಲ್ಲಿ ಮತದಾನ ಮಾಡಿದರು.

ಪಕ್ಷೇತರ ಅಭ್ಯರ್ಥಿ ಸಂತೋಷಕುಮಾರ ಪಾಟೀಲ, ಪತ್ನಿ ಚಂದನ ಜೊತೆ ಹುಟ್ಟೂರು ಕೋಟಿಹಾಳದಲ್ಲಿ, ಜೆಡಿಎಸ್ ಅಭ್ಯರ್ಥಿ ಮಂಜು ನಾಥ ಗೌಡ ಶಿವಣ್ಣನವರ ಅವರು ಪತ್ನಿ ಶಶಿಕಲಾ ಜೊತೆ, ಪಕ್ಷೇತರ ಅಭ್ಯರ್ಥಿ ಡಾ.ಮೋಹನ ಹಂಡೆ ಪತ್ನಿ ಸುಲೋಚನಾ ಜೊತೆ, ಎನ್ ಸಿಪಿ ಅಭ್ಯರ್ಥಿ ಆರ್. ಶಂಕರ್ ಪತ್ನಿ ಧನಲಕ್ಷ್ಮಿ ಜೊತೆ ರಾಣೇಬೆನ್ನೂರಿನಲ್ಲಿ ಮತದಾನ ಮಾಡಿದರು.