ಬೆಂಕಿಯಿಲ್ಲದೆ ಅಡುಗೆ ತಯಾರಿಸುವ ಕಲೆ

ಬೆಂಕಿಯಿಲ್ಲದೆ ಅಡುಗೆ ತಯಾರಿಸುವ ಕಲೆ

ರಾಣಿಬೆನ್ನೂರು, ಏ. 28 – ತಾಲ್ಲೂಕಿನ ಅಸುಂಡಿ ಗ್ರಾಮದ ಡಾ. ಕಡಕೋಳ ಪೋದಾರ್ ಲರ್ನ್ ಸ್ಕೂಲ್‌ನಲ್ಲಿ ಬೇಸಿಗೆ ಶಿಬಿರದ ಪ್ರಯುಕ್ತ ಮಕ್ಕಳಿಗಾಗಿ ಬೆಂಕಿಯಿಲ್ಲದೆ ಅಡುಗೆ ತಯಾರಿಸುವ ಕಲೆಯ ಬಗ್ಗೆ ತಿಳಿಸಲಾಯಿತು. 

ಈ ಸಮಯದಲ್ಲಿ ಶಿಕ್ಷಕಿ ರೂಪಾ ಘಾಟ್ಗೆ ಮಾತನಾಡಿ, ಜಿಡ್ಡು ಪದಾರ್ಥಗಳ ಸೇವನೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಸಿ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಎಂದರು.  

ರುಚಿಕರವಾದ ಸ್ಯಾಂಡ್‍ವಿಚ್ ಮತ್ತು ಸವಿಯಾದ ಫ್ರೂಟ್ ಸಲಾಡ್ ಮಾಡುವ ಬಗೆಯನ್ನು ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ಕಲಿಸಿ ಕೊಡಲಾಯಿತು. 

ಮಕ್ಕಳು ತಾವೇ ಮಾಡಿದ ಸ್ಯಾಂಡವಿಚ್ ಮತ್ತು ಫ್ರೂಟ್ ಸಲಾಡ್ ಸೇವಿಸಿ ಸಂತಸಗೊಂಡರು.
ಪ್ರಾ. ರೂಪೇಶ ಘಾಟ್ಗೆ, ಸುಮ ಬಿ. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.