ಮತದಾರರ ತೀರ್ಪು ಸ್ವಾಗತಿಸುತ್ತೇವೆ

ಮತದಾರರ ತೀರ್ಪು ಸ್ವಾಗತಿಸುತ್ತೇವೆ

ಜಗಳೂರು: ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ. ಮಹೇಶ್

ಜಗಳೂರು, ಮೇ 16- ವಿಧಾನಸಭಾ ಚುನಾವಣೆಯಲ್ಲಿ ಕೇವಲ 874 ಅಲ್ಪ ಮತಗಳ‌ ಅಂತರದಲ್ಲಿ ಬಿಜೆಪಿ ಸೋಲು ಅನುಭವಿಸಿದ್ದು, ಮತದಾರರ ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್ ತಿಳಿಸಿದರು.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತಾರೂಢ ಸರ್ಕಾರದ ಫಲವಾಗಿ ತಾಲ್ಲೂಕಿಗೆ ಮೂರು ಶಾಶ್ವತ ನೀರಾವರಿ ಯೋಜನೆಗಳು ಸಾಕಾರ ಗೊಂಡು ಕಾಮಗಾರಿ ಗಳು ಪ್ರಗತಿಯಲ್ಲಿವೆ. ಮತ್ತೊಮ್ಮೆ ಆಡಳಿತಕ್ಕೆ ಬಂದು ಕಾಮ ಗಾರಿ ಮುಂದುವರೆಸಲು ನಿರೀಕ್ಷೆಯಿಟ್ಟಿದ್ದೆವು ಎಂದರು.

ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ  ರಾಮಚಂದ್ರ ಅವರಿಗೆ 49,891 ಮತಗಳನ್ನು ನೀಡಿದ ಮತದಾರರಿಗೆ ಹಾಗೂ ಚುನಾವಣೆಯಲ್ಲಿ ಶ್ರಮಿಸಿದ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಪಕ್ಷೇತರ ಅಭ್ಯರ್ಥಿಗಳ ತ್ರಿಕೋನ‌ ಸ್ಪರ್ಧೆಯಲ್ಲಿ ಕಾಂಗ್ರೆಸ್ ಪಕ್ಷ ಅಲ್ಪಮತಗಳಲ್ಲಿ ಗೆಲುವು ಸಾಧಿಸಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಬಹುಮತ ಪಡೆದಿದ್ದು, ಅಭಿವೃದ್ದಿ ಕಾಮಗಾರಿ ಕೈಗೊಳ್ಳಬೇಕು. ನೀರಾವರಿ ಯೋಜನೆಗಳ ಕಾಮಗಾರಿಗಳನ್ನು  ಪೂರ್ಣಗೊಳಿಸಲು ನಮ್ಮ ಸಹಕಾರ ವಿದೆ. ಆದರೆ ಭ್ರಷ್ಟಾಚಾರದ ಆಡಳಿತ, ಅಭಿವೃದ್ದಿ ಕುಂಠಿತವಾದಲ್ಲಿ ವಿರೋಧ ಪಕ್ಷದವರಾದ ನಾವು  ಜನಪರವಾದ ಹೋರಾಟ ನಡೆಸುತ್ತೇವೆ ಎಂದು  ಮಹೇಶ್ ಎಚ್ಚರಿಸಿದರು.

ಮುಖಂಡ ರಾದ ಬಿದರಕೆರೆ ರವಿಕುಮಾರ್, ವಕೀಲ‌ ಹನುಮಂತಪ್ಪ, ಹೊನ್ನಮರಡಿ ಬಾಲರಾಜ್, ಬಸವರಾಜ್, ಯೋಗಾ ನಂದ, ರವಿಕುಮಾರ್  ಗೋಷ್ಠಿಯಲ್ಲಿದ್ದರು.

error: Content is protected !!