ಉಚಿತ ವಿದ್ಯುತ್‌ ಹಿನ್ನೆಲೆ : ಬೆಸ್ಕಾಂನ ಸಂವಾದ ಸಭೆ ಕಡೆ ಮುಖಮಾಡದ ಜನತೆ

ಉಚಿತ ವಿದ್ಯುತ್‌ ಹಿನ್ನೆಲೆ : ಬೆಸ್ಕಾಂನ ಸಂವಾದ ಸಭೆ ಕಡೆ ಮುಖಮಾಡದ ಜನತೆ

ಹೊನ್ನಾಳಿ, ಮೇ 20- ಈವರೆಗೂ ನಮ್ಮ ಇಲಾಖೆಗೆ ಉಚಿತ ವಿದ್ಯುತ್‍ನ ಬಗ್ಗೆ ಲಿಖಿತ ಆದೇಶ ಇಲ್ಲದಿದ್ದರೂ ಸರ್ಕಾರದ ಆದೇಶದ ನಿರೀಕ್ಷೆಯಲ್ಲಿದ್ದು, ಇಲಾಖೆಯು ಸಿಬ್ಬಂದಿಗಳು ಸರ್ಕಾರದ ಆದೇಶದಡಿ ಕಾರ್ಯ ನಿರ್ವಹಿಸಲು ಬದ್ಧ ಇರುವುದಾಗಿ ಹೊನ್ನಾಳಿ ಬೆಸ್ಕಾಂನ ಕಿರಿಯ ಅಭಿಯಂತರ ಶಿವರಾಜ್‌ ಹೇಳಿದರು.

ಹೊನ್ನಾಳಿ ಬೆಸ್ಕಾಂ ಕಛೇರಿಯಲ್ಲಿ ಇಂದು ತಾಲ್ಲೂಕಿನ ವಿದ್ಯುತ್ ಗ್ರಾಹಕರ ಕುಂದು-ಕೊರತೆಗಳ ಸಂವಾದ ಸಭೆಯನ್ನುದ್ದೇಶಿಸಿ ಮಾತ ನಾಡಿದರು. ಇಂದಿನ  ಇಲಾಖೆಯ ಕುಂದು-ಕೊರತೆಗಳ ಲ್ಲಿನ ಸಂವಾದ ಸಭೆಗಳಲ್ಲಿ ಲಿಖಿತವಾಗಿ ಯಾವುದೇ ಅರ್ಜಿಗಳನ್ನು ಜನತೆ ಸಲ್ಲಿಸಿಲ್ಲವಾ ದರೂ ಪ್ರತಿದಿನ ಬರುವ ರೀತಿಯಲ್ಲಿ ಹಲವರು ಮೌಖಿಕವಾಗಿ ತಮ್ಮ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆಂದರು.

ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು 2022-23ನೇ ಸಾಲಿನಲ್ಲಿ ಇಲಾಖೆಯ ಗ್ರಾಹಕರಿಗೆ 151 ಕೇಸ್‍ಗಳನ್ನು ದಾಖಲಿಸಲಾಗಿದೆ. 16,33,135 ರೂ.ಗಳ ದಂಡದ ಮೊತ್ತವನ್ನು ವಿಧಿಸಿದ್ದು, 7,95,595 ರೂ.ಗಳು   ದಂಡ ವಸೂಲಿಯಾಗಿದ್ದು, ಉಳಿದ 8,37,556 ರೂ.ಗಳ ಬಾಕಿ ಬರಬೇಕಿದೆ ಎಂದರು. 

ತಾಲ್ಲೂಕಿನ  ಕೆಲವು ಗ್ರಾಮಗಳಲ್ಲಿ ಪ್ರತಿದಿನ ಬಳಕೆಯ ವಿದ್ಯುತ್ ಬಾಕಿ  ವಸೂಲಾತಿಗೆ ಕೆಂಚಿಕೊಪ್ಪ, ಹಿರೇಗೋಣಿಗೇರಿ, ಸೊರಟೂರುಗಳಲ್ಲಿ ನಮ್ಮ ಗ್ರಾಮ ವಿದ್ಯುತ್ ಪ್ರತಿನಿಧಿಗಳು  ಉಚಿತ ವಿದ್ಯುತ್ ಘೋಷಣೆ ಹಿನ್ನೆಲೆ ಸಮಸ್ಯೆ ಎದುರಿಸಿದ್ದನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಅಭಿಯಂತರ ರವಿಪ್ರಕಾಶ್, ಕುಂದೂರು ಅಭಿಯಂತರ ರುದ್ರೇಶ್, ರವಿಕಿರಣ್ ವಿವಿಧ ಗ್ರಾಮಗಳ ಸಾರ್ವಜನಿಕರಾದ ದೊಡ್ಡೇರಳ್ಳಿ ಶೇಖರಪ್ಪ, ಚಿಕ್ಕೇರಳ್ಳಿ ನಿಂಗಪ್ಪ, ಅರಕೆರೆ  ರಘು, ಗಿಡ್ಡಹಾಲಪ್ಪ, ಜಿ.ಲೋಹಿತ್ ಇನ್ನಿತರರಿದ್ದರು.

error: Content is protected !!