ಸೃಜನಶೀಲತೆ, ಕ್ರಿಯಾಶೀಲತೆ ಬೆಳವಣಿಗೆಗೆ ಬೇಸಿಗೆ ಶಿಬಿರ ಪೂರಕ

ಸೃಜನಶೀಲತೆ, ಕ್ರಿಯಾಶೀಲತೆ ಬೆಳವಣಿಗೆಗೆ ಬೇಸಿಗೆ ಶಿಬಿರ ಪೂರಕ

ನ್ಯಾಮತಿಯಲ್ಲಿ ಬೇಸಿಗೆ ಶಿಬಿರದ ಸಮಾರೋಪ 

ನ್ಯಾಮತಿ, ಮೇ 19- ರಜಾ ದಿನಗಳಲ್ಲಿ ನಡೆಯುವ ಮಕ್ಕಳ ಬೇಸಿಗೆ ಶಿಬಿರದಿಂದ ನಮ್ಮಲ್ಲಿಯ ಸೃಜನಶೀಲತೆ, ಕ್ರಿಯಾಶೀಲತೆ ಬೆಳೆಯುವುದಕ್ಕೆ ಕಾರಣವಾಗುತ್ತದೆ. ಬದುಕಿಗೆ ಪೂರಕವಾದ ಶಿಕ್ಷಣ ಮುಂದಿನ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ಶಾಲಾ ಮುಖ್ಯ ಶಿಕ್ಷಕರಾದ ಜಾಕ್ಷಮ್ಮ ಹೇಳಿದರು.

ನ್ಯಾಮತಿ ತಾಲ್ಲೂಕು ಜೀನಹಳ್ಳಿ ಮತ್ತು ಕತ್ತಿಗೆ ಕ್ರಾಸ್ ಬಳಿಯಿರುವ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ತಿಂಗಳ ಕಾಲ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳು ಪಾಲಕರು ತಮ್ಮ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಬೇಕು ಎಂದು ಕರೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ  ಹೊನ್ನಾಳಿ ಘಟಕದ ಅಧ್ಯಕ್ಷ ಯೋಗೀಶ್ ಕೋರಿ ಕುಳಗಟ್ಟೆ ಮಾತನಾಡಿ, ಸಮಯದ ಸದುಪಯೋಗ ಬಹಳ ಮುಖ್ಯವಾಗಿದೆ. ರಜೆಯ ಅವಧಿಯಲ್ಲಿ ಮಕ್ಕಳು ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವುದ ರಿಂದ ಸೃಜನಾತ್ಮಕ ಕಲಿಕೆ ಸಾಧ್ಯವಿದ್ದು, ಮಕ್ಕಳನ್ನು ಪಾಲಕರು ಶೈಕ್ಷಣಿಕ ಜಾಗೃತಿಯಿಂದ ಬೆಳೆಸಬೇಕು ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ನ್ಯಾಮತಿ ಘಟಕದ ಸಂಚಾಲಕ ಎಂ.ಎಸ್.ಶಾಸ್ತ್ರಿ ಹೊಳೆಮಠ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಕನಸು ಕಂಡರೆ ದೊಡ್ಡವರಾದ ಮೇಲೆ ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪಾಲಕರು ತಮ್ಮ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಬೇಕು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಮಾತನಾಡಿ, ಪ್ರತಿ ವರ್ಷ ಮಕ್ಕಳ ಶಿಬಿರ ಸಂಘಟಿಸಿ, ಮಕ್ಕಳಿಗೆ ಮಣ್ಣಿನ ಮಾದರಿ, ಚಿತ್ರಕಲೆ, ನೃತ್ಯ , ಭರತ ನಾಟ್ಯ, ಸ್ಪೋಕನ್ ಇಂಗ್ಲಿಷ್‌, ಅಬಾಕಸ್ ಸೇರಿದಂತೆ ಮೊದಲಾದ ತರಬೇತಿ ಹಾಗೂ ಮಾಹಿತಿಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಹೇಳಿದರು. 

ವೇದಿಕೆಯಲ್ಲಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಹೊನ್ನಾಳಿ ಘಟಕದ ಮಾಜಿ ಅಧ್ಯಕ್ಷ ಮೃತ್ಯುಂಜಯ ಪಾಟೀಲ್, ಸ್ಪೋಕನ್ ಇಂಗ್ಲಿಷ್‌ ಶಿಕ್ಷಕಿ ಪವಿತ್ರ, ಭರತ ನಾಟ್ಯ ಶಿಕ್ಷಕಿ ಸ್ನೇಹ, ಶಿಬಿರಾರ್ಥಿಗಳಾದ ಛಾಯಾ, ಮೋಕ್ಷ, ಯೋಗೀಶ್ ಮಕ್ಕಳ ಬೇಸಿಗೆ ಶಿಬಿರ ಕುರಿತು ಮಾತನಾಡಿದರು.

error: Content is protected !!