ಶಾಸಕಿ ಎಂ.ಪಿ.ಲತಾ ರವರಿಗೆ ಅದ್ಧೂರಿ ಸ್ವಾಗತ

ಶಾಸಕಿ ಎಂ.ಪಿ.ಲತಾ ರವರಿಗೆ ಅದ್ಧೂರಿ ಸ್ವಾಗತ

ಹರಪನಹಳ್ಳಿ, ಮೇ 15- ಚುನಾವಣೆಯಲ್ಲಿ ಜಯ ಗಳಿಸಿ ಹೊಸಪೇಟೆಯಿಂದ ಹರಪನಹಳ್ಳಿಗೆ ಶನಿವಾರ ರಾತ್ರಿ ಆಗಮಿಸಿದ ನೂತನ ಪಕ್ಷೇತರ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಅವರಿಗೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಅಭಿಮಾನಿಗಳು, ಕಾರ್ಯ ಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.

ಹೊಸಪೇಟೆಯಿಂದ ಹೂವಿನಹಡಗಲಿಗೆ ತೆರಳಿ ದಿ. ಎಂ.ಪಿ.ಪ್ರಕಾಶ್, ಎಂ.ಪಿ.ರವೀಂದ್ರರವರ ಸಮಾಧಿಗೆ ಪೂಜೆ ಸಲ್ಲಿಸಿ, ಪಟ್ಟಣಕ್ಕೆ ಆಗಮಿಸಿದ ಅವರು, ಕೋಟೆ ಆಂಜನೇಯ ದೇವಸ್ಥಾನಕ್ಕೆ ತೆರಳಿ, ಸ್ವಾಮಿಯ ದರ್ಶನ ಪಡೆದು ಕೊಟ್ಟೂರು ರಸ್ತೆಯ ತಮ್ಮ ನಿವಾಸಕ್ಕೆ ತೆರಳಿ, ಬಳಿಕ ಪ್ರವಾಸಿ ಮಂದಿರ ವೃತ್ತಕ್ಕೆ ಆಗಮಿಸಿದರು.

ಐ.ಬಿ.ವೃತ್ತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು, ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂವಿನ ಮಳೆ ಸುರಿಸಿ, ಜಯಘೋಷ ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಲ್ಲಿಯವರೆಗೂ ಶಾಸಕರು ಇದ್ದರು. ಇದೇ ಪ್ರಥಮ ಬಾರಿಗೆ ಮಹಿಳಾ ಶಾಸಕಿಯಾಗಿ ಬಂದಿದ್ದೇನೆ. ಎಲ್ಲಾ ನಿಮ್ಮಿಂದಾಗಿರುವುದು. ಈ ಪ್ರೀತಿ ಕೊನೆಯವರೆಗೂ ಇರಲಿ ಎಂದರು. ನೀವೆ ಲ್ಲರೂ ಶಾಸಕರು ಇದ್ದ ಹಾಗೆ ಎಂದ ಅವರು, ಒಟ್ಟಾಗಿ ಕೆಲಸ ಮಾಡಿ ಹರಪನಹಳ್ಳಿಯನ್ನು ಅಭಿವೃದ್ಧಿಗೊಳಿಸೋಣ ಎಂದು ನುಡಿದರು.

ಇದಕ್ಕೂ ಪೂರ್ವದಲ್ಲಿ ಹರಪನಹಳ್ಳಿ ಗಡಿಭಾಗ ಕಾನಹಳ್ಳಿ ಗ್ರಾಮದಲ್ಲಿ ಮಹಿಳೆಯರು ಆರತಿ ಬೆಳಗಿ, ಹೂವಿನ ಹಾರ ಹಾಕಿ ಸ್ವಾಗತಿಸಿದರು. ದಾರಿಯುದ್ದಕ್ಕೂ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಎಂ.ಮಲ್ಲಿಕಾರ್ಜುನ, ಗೌತಮ ಪ್ರಭು, ಎಂ.ವಿ.ಅಂಜಿನಪ್ಪ, ಬಿ.ಕೆ.ಪ್ರಕಾಶ್, ಬಿ.ಬಿ.ಹೊಸೂರಪ್ಪ, ಅಬ್ದುಲ್ ರೆಹಮಾನ್, ಕಣಿವಿಹಳ್ಳಿ ಮಂಜುನಾಥ್, ಪಿ.ಮಹಾಬಲೇಶ್ವರಗೌಡ, ಎಂ.ಪಿ.ನಾಯ್ಕ, ನಿಟ್ಟೂರು ಸಣ್ಣಹಾಲಪ್ಪ, ವಕೀಲ ವೆಂಕಟೇಶ್, ವಸಂತಪ್ಪ, ಕೆ.ಎಂ.ಬಸವರಾಜಯ್ಯ, ಲಾಠಿ ದಾದಾಪೀರ್, ಗೊಂಗಡಿ ನಾಗರಾಜ್, ಉದ್ದಾರ ಗಣೇಶ, ವೈ.ಕೆ.ಬಿ.ದುರುಗಪ್ಪ, ಸೇರಿದಂತೆ ಇತರರು ಉಪಸ್ಥಿತರಿದ್ದರು.