ಮಲೇಬೆನ್ನೂರು, ಜೂ.21- ಇಲ್ಲಿನ ನೀರಾವರಿ ಇಲಾಖೆಯ ರೈತ ಭವನದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಇಂದು ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಾರಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಯೋಗವು ಸಹಕರಿಯಾಗಲಿದ್ದು, ಪ್ರತಿಯೊಬ್ಬರೂ ಪ್ರತಿನಿತ್ಯ ಯೋಗಗಳನ್ನು ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ಮಾತನಾಡಿ, ಯೋಗಾಸನ ಸರ್ವ ರೋಗಗಳ ನಿವಾರಕವಾಗಿದ್ದು, ಯೋಗ, ಅಧ್ಯಾತ್ಮ ಉತ್ತಮ ಬದುಕಿಗೆ ನೆರವಾಗಲಿವೆ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಪುರಸಭೆ ಸದಸ್ಯರಾದ ಎ. ಆರೀಫ್ಅಲಿ, ಶಶಿಕಲಾ ಕೇಶವಾಚಾರಿ, ಎಂ.ಬಿ. ಫೈಜು, ಆದಾಪುರ ವಿಜಯಕುಮಾರ್, ಬೆಣ್ಣೆಹಳ್ಳಿ ಬಸವರಾಜ್ ಮತ್ತಿತರರು ಭಾಗವಹಿಸಿದ್ದರು. ನಂತರ ಪತಂಜಲಿ ಯೋಗ ಸಮಿತಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಅವರು ಯೋಗಾಭ್ಯಾಸ ನಡೆಸಿಕೊಟ್ಟರು.