ಚಿಂತನ ಪ್ರತಿಷ್ಠಾನದ ನಾಲ್ವರಿಗೆ ಪ್ರಶಸ್ತಿ

ಹರಿಹರ, ಮಾ.27- ಕನ್ನಡ ಸಾಹಿತ್ಯ ಪರಿಷತ್ತು ಮುಂಬರುವ ದಿನಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಿದೆ ಎಂದು ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ ತಿಳಿಸಿದರು.

ನಗರದ ಚಿಂತನ ಪ್ರತಿಷ್ಠಾನದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ನೇಹಕೂಟ ಕಾರ್ಯಕ್ರಮದಲ್ಲಿ ಮಾತನಾಡಿ, ಚಿಂತನ ಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್ ಅವರಿಗೆ ಮೈಸೂರಿನ ಪ್ರತಿಷ್ಠಿತ ರಾಜ್ಯಮಟ್ಟದ ಹೊಯ್ಸಳ ಕನ್ನಡ ಪ್ರಶಸ್ತಿ, ಸುಕ್ಷೇತ್ರ ಅಟವಿ ಪ್ರಶಸ್ತಿ, ಕಾರ್ಯದರ್ಶಿ ಡಿ.ಫ್ರಾನ್ಸಿಸ್ ಅವರಿಗೆ ಸಾಗರದ ಸಾಗರ ಸುತ್ತ ಪತ್ರಿಕೆ, ಸಹೃದಯ ಬಳಗ, ಇತಿಹಾಸ ವೇದಿಕೆ ಬಹುಮುಖ ಪ್ರತಿಭೆ ಪ್ರಶಸ್ತಿ ಮತ್ತು ಸುಕ್ಷೇತ್ರ ಅಟವಿ ಪ್ರಶಸ್ತಿ, ಶ್ರೀಮತಿ ಮಂಜಮ್ಮ ಮತ್ತು ಶ್ರೀಮತಿ ವಸಂತಿ.ಡಿ.ಫ್ರಾನ್ಸಿಸ್ ಅವರಿಗೆ ತುಮಕೂರಿನ ಬಸವ ಯೋಗಿಗಳ ಸುಕ್ಷೇತ್ರ ಅಟವಿ ಕೊಡ ಮಾಡುವ ರಾಜ್ಯಮಟ್ಟದ ಸಮಾಜ ಸೇವಾ ಪ್ರಶಸ್ತಿ ಬಂದಿರುವುದು ಹರಿಹರದ ಸಾಹಿತ್ಯ ಲೋಕಕ್ಕೆ ಮೆರಗು ತಂದಿದೆ ಎಂದರು.

ಸ್ನೇಹಕೂಟದಲ್ಲಿ ಕಾರ್ಮಿಕ ಮುಖಂಡರಾದ ಹೆಚ್.ಕೆ.ಕೊಟ್ಟಪ್ಪ, ಸಾಹಿತ್ಯ ಸಂಗಮ ಅಧ್ಯಕ್ಷ ವಿ.ಬಿ.ಕೊಟ್ರೇಶಪ್ಪ, ಶಿಕ್ಷಕ ರಾಜಶೇಖರ ರೆಡ್ಡಿ, ಶ್ರೀಮತಿ ಎ.ಬಿ.ಮಂಜಮ್ಮ, ಶ್ರೀಮತಿ ವಸಂತಿ.ಡಿ.ಫ್ರಾನ್ಸಿಸ್, ಹವ್ಯಾಸಿ ಬರಹಗಾರ ಹರವೇ ಪ್ರಕಾಶ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸ್ನೇಹಕೂಟದಲ್ಲಿ ನೂತನವಾಗಿ ಕಸಾಪ ತಾಲ್ಲೂಕು ಅಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಎಂ.ಮಂಜುನಾಥಯ್ಯ ಅವರನ್ನು ಚಿಂತನ ಪ್ರತಿಷ್ಠಾನದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಕಸಾಪ ತಾಲ್ಲೂಕು ಘಟಕದ ಗೌ.ಕಾರ್ಯದರ್ಶಿ ಮತ್ತು ಜನತಾವಾಣಿ ವರದಿಗಾರ ಚಿದಾನಂದ ಕಂಚಿಕೇರಿ ಮತ್ತು ಸಮಾಜ ಸೇವಕ ಸೈಯದ್ ಅಹ್ಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  

ಶ್ರೀಮತಿ ನಾಗರತ್ನ ಮತ್ತು ಶ್ರೀಮತಿ ಸೌಮ್ಯ ರಾಮಕೃಷ್ಣ ಪ್ರಾರ್ಥಿಸಿದರು. ಡಿ.ಫ್ರಾನ್ಸಿಸ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಬ್ರಹ್ಮಣ್ಯ ನಾಡಿಗೇರ್ ವಂದಿಸಿದರು.

error: Content is protected !!