ಶ್ರೀ ವಿನಾಯಕ ದೇವಸ್ಥಾನ ಅಭಿವೃದ್ಧಿಗೆ ಸಹಾಯ ಧನ

ದಾವಣಗೆರೆ, ಫೆ. 17- ನಗರದ ಶ್ರೀ ಶಂಕರ ವಿಹಾರ ಬಡಾವಣೆ ಬಿ ಬ್ಲಾಕ್‌ನ ಶ್ರೀ ಸರ್ವ ಸಿದ್ಧಿ ವಿನಾಯಕ ದೇವಸ್ಥಾನದ ಕಟ್ಟಡ ಅಭಿವೃದ್ಧಿಗಾಗಿ ಶ್ರೀಕ್ಷೇತ್ರ  ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ 1 ಲಕ್ಷ ರೂ.ಗಳನ್ನು
ಡಿ.ಡಿ. ಮುಖಾಂತರ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ್, ಸೇವಾ ಸಮಿತಿ ಗೌರವಾಧ್ಯಕ್ಷರಾದ ಆಶಾ ಉಮೇಶ್ ಹಾಗೂ ಅಧ್ಯಕ್ಷ ಮಹೇಶ್ವರಯ್ಯ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿಯ ಮೇಲ್ವಿಚಾರಕರಾದ ಮಾರುತಿ, ಪಾಟೀಲ್, ದೇವಮ್ಮ, ಸೇವಾ ಪ್ರತಿನಿಧಿಗಳಾದ ಪ್ರೇಮಾ, ಭಾಗ್ಯಮ್ಮ, ಒಕ್ಕೂಟದ ಅಧ್ಯಕ್ಷರಾದ ದಾಕಾಯಣಮ್ಮ, ಸೇವಾ ಸಮಿತಿ ಉಪಾಧ್ಯಕ್ಷರಾದ ಕಲ್ಲಪ್ಪ ಅರಳಿ, ಚಂದ್ರಪ್ಪ, ಬಿ.ಪಿ. ಹರೀಶ್, ನಿರ್ದೇಶಕರಾದ ರುದ್ರಪ್ಪ, ಕೆ.ಎಂ. ವೀರಯ್ಯಸ್ವಾಮಿ, ರಾಕೇಶ್, ಸಂತೋಷ್, ಗಿರೀಶ್, ಕರಿಬಸಪ್ಪ ದಾಪ್ಪೆರ್ ಇಂದ್ರಮ್ಮ ಉಪಸ್ಥಿತರಿದ್ದರು.

error: Content is protected !!