ಹಳೇಬಾತಿಯಲ್ಲಿ ನಾಡಿದ್ದು ಆಂಜನೇಯ ಸ್ವಾಮಿ ರಥೋತ್ಸವ

ಹಳೇಬಾತಿಯಲ್ಲಿ ನಾಡಿದ್ದು   ಆಂಜನೇಯ ಸ್ವಾಮಿ ರಥೋತ್ಸವ

ದಾವಣಗೆರೆ ತಾಲ್ಲೂಕಿನ ಹಳೇಬಾತಿಯಲ್ಲಿ ನಡೆಯುವ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಇದೇ ದಿನಾಂಕ 6 ರ ಭಾನುವಾರ ರಾತ್ರಿ 10 ಗಂಟೆಗೆ ನಡೆಯಲಿದೆ.

ಇಂದು ಶ್ರೀ ಸ್ವಾಮಿಗೆ ಅರಿಶಿಣ ಎಣ್ಣೆ ಕಾರ್ಯಕ್ರಮ ನಂತರ ಗರುಡೋತ್ಸವ ನಡೆಯುತ್ತದೆ. ನಾಳೆ ಶನಿವಾರ ಕಳಸಾರೋಹಣ ಕಾರ್ಯಕ್ರಮದ ನಂತರ ಕುಣಿಯುವ ಕುದುರೋತ್ಸವ ನಡೆಯಲಿದೆ.

ದಿನಾಂಕ 6 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಸ್ವಾಮಿಯ ಆನೆ ಉತ್ಸವ ಮಧ್ಯಾಹ್ನ 3 ಗಂಟೆಗೆ ಹರಿಸೇವೆ, ಸಂಜೆ 4 ಗಂಟೆಗೆ ಬಾಯಿ ಬೀಗ, ಸಾಯಂಕಾಲ 6.30 ಗಂಟೆಗೆ ದೊಗ್ಗಳ್ಳಿ ಶ್ರೀ ಆಂಜನೇಯ ಸ್ವಾಮಿಯನ್ನು ದೇವಸ್ಥಾನಕ್ಕೆ ವಿಜೃಂಭಣೆಯಿಂದ ಕರೆತರುವುದು. ರಾತ್ರಿ 10 ಗಂಟೆಗೆ ಶ್ರೀ ಆಂಜನೇಯ ಸ್ವಾಮಿ ಮಹಾರಥೋತ್ಸವ ಜರಗುವುದು.

ದಿನಾಂಕ 7 ರಂದು ಸಂಜೆ ಕುಣಿಯುವ ಕುದುರೆಯ ಹನುಮಪ್ಪನ ಮೆರವಣಿಗೆ ಮತ್ತು ರಾತ್ರಿ ಓಕುಳಿ ಕಾರ್ಯಕ್ರಮ, ದಿನಾಂಕ 8 ರಂದು ಬೆಳಿಗ್ಗೆ ಭೂತ ದೇವರ ಸೇವೆ ನಂತರ ಗಂಗಾಪೂಜೆ ಮುಗಿಸಿಕೊಂಡು ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಬರುವುದು.

error: Content is protected !!