ದಾವಣಗೆರೆ, ಮಾ. 27 – ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ನಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಯುಗಾದಿ ಅಮಾವಾಸ್ಯೆ ಪ್ರಯುಕ್ತ ನಾಡಿದ್ದು ದಿನಾಂಕ 29ರ ಶನಿವಾರ ಬೆಳಿಗ್ಗೆ 6.30ಕ್ಕೆ ಅಭಿಷೇಕ – ಪೂಜೆ ನಡೆಯಲಿದೆ. ನಂತರ ಬೆಳಿಗ್ಗೆ 8 ರಿಂದ ಪ್ರಸಾದ ದಾಸೋಹ ಏರ್ಪಡಿಸಲಾಗಿದೆ ಎಂದು ಕಣಕುಪ್ಪಿ ಮುರುಗೇಶಪ್ಪ ತಿಳಿಸಿದ್ದಾರೆ.
March 31, 2025