ದಾವಣಗೆರೆ, ಮಾ.27- ನಗರದ ಪಿ.ಬಿ.ರಸ್ತೆಯ ಪಂಚದೇವಸ್ಥಾನಗಳ ಮಹಾಕ್ಷೇತ್ರದಲ್ಲಿ ಶನಿಮೌನಿ ಅಮಾವಾಸ್ಯೆ ಹಾಗೂ ಸೂರ್ಯಗ್ರಹಣ ಹಾಗೂ ವಿಶ್ವಾಸುನಾಮ ಸಂವತ್ಸರಂಭದ ಪ್ರಯುಕ್ತ ನಾಡಿದ್ದು ದಿನಾಂಕ 29 ರ ಶನಿವಾರ ಬೆಳಿಗ್ಗೆ ಪಂಚದೇವರಗಳಿಗೆ, ಶ್ರೀಕಾಶಿ ವಿಶ್ವನಾಥಲಿಂಗ ಶ್ರೀಶನೇಶ್ವರಸ್ವಾಮಿಗೆ ತೈಲಾಭಿಷೇಕ, ಬೆಳಿಗ್ಗೆ 9ಕ್ಕೆ ಶ್ರೀ ಶನೇಶ್ವರಸ್ವಾಮಿ ಸಹಿತ ಪಂಚದೇವರಗಳ ಪಲ್ಲಕ್ಕಿ ಉತ್ಸವ ಇರುತ್ತದೆ. ಬೆಳಿಗ್ಗೆ 9.30 ಗಂಟೆಗೆ ಪಂಚದೇವಸ್ಥಾನಗಳ ಆವರಣದಲ್ಲಿ ಶನೇಶ್ವರ ತಿಲ ಹೋಮ, ಹಾಗೂ, ಶನೇಶ್ವರಸಹಿತ ನವಗ್ರಹ ಶಾಂತಿ ಹೋಮವಿರುತ್ತದೆ.
March 31, 2025