ದಾವಣಗೆರೆ ಜಿಲ್ಲಾ ಪೋಟೋಗ್ರಾಫರ್, ವಿಡಿಯೋ ಗ್ರಾಫರ್ ಅಸೋಸಿಯೇಷನ್ ವತಿಯಿಂದ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇಂದು ಬೆಳಿಗ್ಗೆ 10.30ಕ್ಕೆ ಗುರಭವನದಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಜಾಧವ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಪ್ರೆಸ್‌ಕ್ಲಬ್ ಅಧ್ಯಕ್ಷ ನಾಗರಾಜ ಬಡದಾಳ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷ ತಿಲಕ್ ಬನುಖಂಡಿ, ವಕೀಲ ರಾಘವೇಂದ್ರ, ಕಾರ್ಯದರ್ಶಿ ಹೆಚ್.ಕೆ. ಚನ್ನಬಸವರಾಜು, ಖಜಾಂಚಿ ಬಸವರಾಜ ಜಿ.ಎನ್., ಶ್ರೀನಾಥ್ ಪಿ. ಅಗಡಿ, ಮಧುಸೂದನ, ಹನುಮಂತಪ್ಪ, ರಾಮಕೃಷ್ಣ, ಬಸವನಗೌಡ ಪಾಟೀಲ್, ಅಶೋಕ ಆಗಮಿಸಲಿದ್ದಾರೆ.