ಭದ್ರಾ ಮೇಲ್ದಂಡೆ ಯೋಜನೆ : ಶೀಘ್ರ ಅನುದಾನಕ್ಕೆ ಸಂಸತ್‌ನಲ್ಲಿ ಸಂಸದ ಗೋವಿಂದ ಕಾರಜೋಳ ಆಗ್ರಹ

ಚಿತ್ರದುರ್ಗ, ಮಾ.20-   ಚಿತ್ರದುರ್ಗ, ದಾವಣಗೆರೆ, ತುಮಕೂರು ಚಿಕ್ಕಮಗಳೂರು ಜಿಲ್ಲೆಗಳ ರೈತರ ಆಶಾಕಿರಣ ಭದ್ರಾ ಮೇಲ್ದಂಡೆ ಯೋಜನೆ  ಕೆಲಸವು ಕುಂಟುತ್ತಾ ಸಾಗಿದ್ದು,  ಮಧ್ಯ ಕರ್ನಾಟಕದ ಮಹತ್ವಾಕಾಂಕ್ಷೆಯ ಈ  ಯೋಜನೆಗೆ ಶೀಘ್ರ ಅನುದಾನ ಒದಗಿಸುವಂತೆ  ಸಂಸದ ಗೋವಿಂದ ಎಂ.ಕಾರಜೋಳ  ಒತ್ತಾಯಿಸಿದರು.

ಕಳೆದ ಬುಧವಾರ ಸಂಸತ್‌ನಲ್ಲಿ  ಮಾತನಾಡಿದ ಅವರು, ಈ ಯೋಜನೆಗೆ ಕೇಂದ್ರ ಸರ್ಕಾರ 2023-24 ನೇ ಸಾಲಿನ  ಆಯವ್ಯಯದಲ್ಲಿ ಘೋಷಿಸಿದ ರೂ.5300 ಕೋಟಿ ಸಹಾಯ ಧನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ  ಸರ್ಕಾರವನ್ನು ಒತ್ತಾಯಿಸಿದರು.   

error: Content is protected !!