ದಾವಣಗೆರೆ, ಮಾ. 18- ಇಲ್ಲಿಗೆ ಸಮೀಪದ ಎಲೆಬೇತೂರು ಗ್ರಾಮದ ಶ್ರೀ ಸವಗದ್ದಿಗೆ ಸಂಗಮೇಶ್ವರ ದೇವಸ್ಥಾನದಲ್ಲಿ ಇಂದು ನಡೆದ ಕಮಿಟಿ ಸದಸ್ಯರ ಹಾಗೂ ಗ್ರಾಮಸ್ಥರ ಸಭೆಯಲ್ಲಿ ಬರುವ ಏಪ್ರಿಲ್ 7ರಂದು ಸೋಮವಾರ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿಯ ರಥೋತ್ಸವವನ್ನು ಸಂಜೆ 4:30ಕ್ಕೆ ನಡೆಸಲು ತೀರ್ಮಾನಿಸಲಾಯಿತು. ಏಪ್ರಿಲ್ 3ರ ಗುರುವಾರ ಗಾಲಿ ಹೊರಕ್ಕೆ ತೆಗೆಯುವುದು, 5ರ ಶನಿವಾರ ರಾತ್ರಿ 7.30ಕ್ಕೆ ಕಂಕಣಧಾರಣೆ, 7ರ ಸೋಮವಾರ ಬೆಳಿಗ್ಗೆ 6 ಗಂಟೆಗೆ ಉಚ್ಛಾಯ ರಥೋತ್ಸವ, ಸಂಜೆ 4.30ಕ್ಕೆ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿ ರಥೋತ್ಸವ ನಡೆಯು ವುದು. ದಿ. 8ರ ಮಂಗಳವಾರ ಬೆಳಿಗ್ಗೆ 8.30 ಕ್ಕೆ ಮತ್ತು ಸಂಜೆ 4 ಗಂಟೆಗೆ ಜಂಗಿ ಕುಸ್ತಿ ನಡೆಸಲಾಗುವುದು. ರಾತ್ರಿ 7.30ಕ್ಕೆ ಸ್ವಾಮಿ ಪಲ್ಕಕ್ಕಿ ಉತ್ಸವದೊಂದಿಗೆ ಓಕಳಿ ಕಾರ್ಯಕ್ರಮ ನಡೆಸಲಾಗುವುದು.
April 27, 2025