ಬ್ರಾಹ್ಮಣ ಸಮಾಜ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ

ದಾವಣಗೆರೆ, ಮಾ. 11 – ನಗರದ ಬ್ರಾಹ್ಮಣ ಸಮಾಜ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ ಮತ್ತು ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಬ್ರಾಹ್ಮಣ ಸಮಾಜದ ಮಹಿಳೆಯರಿಗಾಗಿ ಏರ್ಪಡಿಸಲಾಗಿದೆ ಎಂದು ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ನಳಿನಿ ಅಚ್ಯುತ್ ತಿಳಿಸಿದ್ದಾರೆ. 

ನಾಡಿದ್ದು ದಿನಾಂಕ 13ರ ಗುರುವಾರ ಸಂಜೆ 4 ಗಂಟೆಗೆ ಬ್ರಾಹ್ಮಣ ಸಮಾಜ ವಿದ್ಯಾರ್ಥಿ ನಿಲಯ (ನಾಟ್ಯಾಚಾರ್ಯ ಕುಲಕರ್ಣಿ ರಸ್ತೆ) ದಲ್ಲಿ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯು ದಾವಣಗೆರೆ ತಾಲ್ಲೂಕಿನವರಿಗೆ ಮಾತ್ರ. ಸ್ಪರ್ಧೆಯಲ್ಲಿ ರಸಪ್ರಶ್ನೆ, ಅಂತ್ಯಾಕ್ಷರಿ ಅಲ್ಲದೆ ಇನ್ನೂ ಅನೇಕ ಸ್ಪರ್ಧೆಗಳು ಇರುತ್ತವೆ. ವಿವರಕ್ಕೆ (9964027146) ಶ್ರೀಮತಿ ಚಂದ್ರಶೇಖರ ಅಡಿಗ, (9886058866) ಅವರನ್ನು ಸಂಪರ್ಕಿಸಬಹುದು.

error: Content is protected !!