ದಾವಣಗೆರೆ, ಫೆ.18- ರಾಮಗಿರಿ ಮತ್ತು ಹೊಳಲ್ಕೆರೆ ರೈಲ್ವೆ ನಿಲ್ದಾಣದ ಮಧ್ಯೆ ಅಪರಿಚಿತ ಗಂಡಸಿನ ಮೃತ ದೇಹ ಪತ್ತೆಯಾಗಿದೆ. ಅಂದಾಜು 25 ರಿಂದ 30 ವರ್ಷದ ಈತ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ದುಂಡು ಮುಖ ಹಾಗೂ ಬಿಳಿ ಮಿಶ್ರಿತ ಕಪ್ಪು ಕೂದಲು ಇರುವ ತುಂಬು ತೋಳಿನ ಕಪ್ಪು ಶರ್ಟ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಸಂಬಂಧಪಟ್ಟವರು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ (08192-259643, 9480802123) ಸಂಪರ್ಕಿಸಬಹುದು.
February 21, 2025