ದಾವಣಗೆರೆ, ಫೆ.17- ಹರಿಹರ ಮತ್ತು ಕುಮಾರಪಟ್ಟಣಂ ರೈಲ್ವೆ ನಿಲ್ದಾಣದ ಮಧ್ಯೆ ಅಪರಿಚಿತ ಗಂಡಸಿನ ಮೃತ ದೇಹ ಪತ್ತೆಯಾಗಿದೆ.
ಅಂದಾಜು 35ರಿಂದ 40 ವರ್ಷ, 5.5 ಅಡಿ ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ದುಂಡು ಮುಖ ಮತ್ತು ಕುರುಚಲು ಮೀಸೆ ಮತ್ತು ಗಡ್ಡ ಬಿಟ್ಟಿರುವ ಚಹರೆಯನ್ನು ಮೃತ ವ್ಯಕ್ತಿ ಹೊಂದಿದ್ದಾನೆ. ಸಂಬಂಧಪಟ್ಟವರು ಸಂಪರ್ಕಿಸಬಹುದಾದ ದೂರವಾಣಿ : 08192-259643, 9480802123 ಅಥವಾ 080-22871291.