ಜ್ಞಾನದೀಪ ಪಬ್ಲಿಕ್ ಶಾಲೆಯ 11ನೇ ವರ್ಷದ `ಜ್ಞಾನದೀಪ ಸಂಭ್ರಮ’ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮ ದಾವಣಗೆರೆಯ ಕನ್ನಡ ಕುವೆಂಪು ಭವನದಲ್ಲಿ ಇಂದು ಮಧ್ಯಾಹ್ನ 3.10ಕ್ಕೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ|| ಕೆ. ಬಸವರಾಜಪ್ಪ, ಕಾರ್ಯದರ್ಶಿ, ಜ್ಞಾನದೀಪ್ ಪಬ್ಲಿಕ್ ಶಾಲೆ ಇವರು ವಹಿಸಲಿದ್ದು, ಶ್ರೀ ಡಾ. ಬಸವಪ್ರಭು ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ. ಎ. ಹನುಮಯ್ಯ, ಬಿ.ವಾಮ ದೇವಪ್ಪ, ಎಸ್.ಎನ್. ಕಿರಣ್ಕುಮಾರ್, ಎ.ಎಂ ಶಿವಕುಮಾರ್, ವಿ.ಷಣ್ಮುಖಚಾರ್, ಬಿ.ಎಂ. ಚೌಡಪ್ಪ, ಹೆಚ್.ಕೆ. ಲಿಂಗರಾಜನಾಯ್ಕ, ಎನ್.ಎಂ. ಕರಿಬಸಪ್ಪ, ಕೆ. ಪ್ರಭು, ಆರ್. ಶಿವಕುಮಾರ್ ಶೆಟ್ಟಿ, ಕೆ.ಎಸ್. ನಾಗರಾಜ್ ಸಿರಿಗೆರೆ., ಟಿ. ಅಣಬೇರು ಶಿವಮೂರ್ತಿ, ಡಾ. ವೀರೇಶ್ ಬಿರಾದಾರ್, ಟಿ. ಆರ್. ಹನುಮಂತಪ್ಪ, ಶ್ರೀಮತಿ ಮಂಜುಳಾ ಡಾ ಕೆ. ಬಸವರಾಜಪ್ಪ ಅವರುಗಳು ಪಾಲ್ಗೊಳ್ಳಲಿದ್ದಾರೆ.