ದಾವಣಗೆರೆ, ಫೆ. 3- ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಚುನಾವಣೆಯಲ್ಲಿ ಮತದಾರರಿಗೆ ಹಣ ಹಾಗೂ ಇತರೆ ಆಮಿಷಗಳನ್ನು ವೊಡ್ಡಿ ಆಯ್ಕೆಯಾಗಿರುವ ಬಗ್ಗೆ ನನ್ನ ಬಳಿ ಹಲವಾರು ದಾಖಲೆಗಳಿದ್ದು, ಇದೇ ದಿನಾಂಕ 7 ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಸುಭಾನ್ ಖಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದಿನ ಚುನಾವಣಾಧಿಕಾರಿಯಾಗಿದ್ದ ವೆಂಕಟೇಶ್ ಅವರು ಸಹ ನಾನು ಸಲ್ಲಿಸಿದ್ದ ನಾಮಪತ್ರವನ್ನು ತಿರಸ್ಕೃರಿಸಿದ್ದರು.
ಇದನ್ನು ವಿರೋಧಿಸಿ, ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಭಾ ಅವರ ಆಯ್ಕೆಯನ್ನು ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಲಾಬಕ್ಷಿ, ಹೆಚ್. ಪರ್ವೇಜ್ ತಸ್ಲಿಮ್ ಬಾನು, ಮೊಹಮದ್ ಸುಹೇಲ್ ಖಾನ್ ಮತ್ತಿತರರಿದ್ದರು.