ಕಬ್ಬೂರಿನಲ್ಲಿ ಇಂದು ಬಸವೇಶ್ವರ ಸ್ವಾಮಿ ಪ್ರಾಣ ಪ್ರತಿಷ್ಠಾಪನೆ

ಕಬ್ಬೂರು ಗ್ರಾಮದ ತುರುಮಂದಿ ಬಸವೇಶ್ವರ ಸ್ವಾಮಿ ಮತ್ತು ಚೌಡೇಶ್ವರಿ ದೇವಿಯ ಪ್ರಾಣ ಪ್ರತಿಷ್ಠಾಪನೆಯು ಇಂದು ಮತ್ತು ನಾಳೆ ನಡೆಯಲಿದೆ.

ಇಂದು ಸಂಜೆ ತುರುಮಂದಿ ಬಸವೇಶ್ವರ ಸ್ವಾಮಿಯ ಗ್ರಾಮ ದರ್ಶನ ದೇವಾಲಯ ಪ್ರವೇಶ ಗಣ ಹೋಮ ಮತ್ತು ರುದ್ರ ಹೋಮ ನಡೆಯಲಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಲಿದೆ. 

ನಾಳೆ ಸೋಮವಾರ ಬೆಳಗಿನ ಜಾವದಿಂದ ರುದ್ರಾಭಿಷೇಕ, ಕುಂಭಾಭಿಷೇಕ ಪುಷ್ಪಾಲಂಕಾರ ಮತ್ತು ವಿಶೇಷ ಪೂಜೆ ನಡೆಯ ಲಿದೆ. ಬೆಳಿಗ್ಗೆ 10ಕ್ಕೆ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ ಇರುತ್ತದೆ. ಹೆಬ್ಬಾಳಿನ ಮಹಾಂತರುದ್ರಸ್ವಾಮಿ ಅಧ್ಯಕ್ಷತೆಯಲ್ಲಿ ಪೂಜಾ ವಿಧಿ, ವಿಧಾನ ನಡೆಯಲಿದೆ. 

error: Content is protected !!