ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಎಸ್‍ಸಿ, ಎಸ್‍ಪಿ ಯೋಜನೆಯಡಿ ಹಾಗೂ ರಾಜ್ಯ ಶೈಕ್ಷಣಿಕ ಪ್ರವಾಸ ಕರ್ನಾಟಕ ದರ್ಶನ ಕಾರ್ಯಕ್ರಮದಡಿ ಎಸ್ಟಿ, ಎಸ್ಟಿ ವಿದ್ಯಾರ್ಥಿಗಳಿಗೆ ರಾಜ್ಯದ ವಿವಿಧ ಸ್ಥಳಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಗುವುದು. ಇಂದು ಬೆಳಿಗ್ಗೆ 6ಕ್ಕೆ ದಾವಣಗೆರೆ ದಕ್ಷಿಣ ವಲಯದ ಸರ್ಕಾರಿ ಪ್ರೌಢ ಶಾಲೆಯ ಒಟ್ಟು 89 ವಿದ್ಯಾರ್ಥಿಗಳನ್ನು ಜೋಗ ಪಾಲ್ಸ್, ಶ್ರೀರಂಗಪಟ್ಟಣ, ಮೈಸೂರು, ಮುರುಡೇಶ್ವರ, ಉಡುಪಿ, ಕಟೀಲು, ಮಂಗಳೂರು, ಭಾಗಮಂಡಲ ಮತ್ತು ಮಡಿಕೇರಿ ಸ್ಥಳಗಳಲ್ಲಿ ಪ್ರವಾಸ ಕೈಗೊಳ್ಳಲಾಗುವುದೆಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ. ಚೌಡಪ್ಪ ತಿಳಿಸಿದ್ದಾರೆ.
March 14, 2025