ಚಿತ್ರದುರ್ಗ, ಜ.8- ಇಲ್ಲಿನ ಮೆದೆಹಳ್ಳಿ ರಸ್ತೆಯಲ್ಲಿ ರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 25ನೇ ವರ್ಷದ 60 ದಿನಗಳ ಬ್ರಹ್ಮೋತ್ಸವವು ಆರಂಭಗೊಂ ಡಿದ್ದು, ಇದೇ ದಿನಾಂಕ 13 ರವರೆಗೆ ನಡೆಯಲಿದೆ. ಮಾಲಾ ಧಾರಿ ಗಳಿಗೆ ದೇವಸ್ಥಾನದಲ್ಲಿ ಪ್ರತಿನಿತ್ಯ ಉಚಿತ ಅನ್ನದಾನ ಕಾರ್ಯಕ್ರಮ ಜರುಗಲಿದೆ. ದಿನಾಂಕ 13ರ ಸೋಮವಾರ ಸಂಜೆ 6ಕ್ಕೆ ನಗರದಲ್ಲಿ ಅಯ್ಯಪ್ಪ ಸ್ವಾಮಿಯ ಆಭರಣ ಮೆರವಣಿಗೆ ಆಯೋಜಿಸಿದೆ. ದಿನಾಂಕ 14 ರಂದು ಮಕರ ಸಂಕ್ರಮಣದ ಅಂಗವಾಗಿ ಸ್ವಾಮಿ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ನಡೆಯಲಿದೆ.
January 9, 2025