ರಾಣೇಬೆನ್ನೂರು : ಶನೇಶ್ವರ ಮಂದಿರದಲ್ಲಿ ಇಂದು ದೀಪೋತ್ಸವ

ರಂಭಾಪುರಿ ಶ್ರೀಗಳು, ನಟ  ದೊಡ್ಡಣ್ಣ ಆಗಮನ

ಶನೇಶ್ವರ ಸ್ವಾಮಿ ಬಯಲು ಆಲಯದ ಅಷ್ಟ ಬಂಧ ಬ್ರಹ್ಮ ಕಲಶೋತ್ಸವ ನಿಮಿತ್ತ ಲೋಕ ಕಲ್ಯಾಣಾರ್ಥ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಗಾಗಿ ನಾಳೆ ಶನಿವಾರ ದೀಪೋತ್ಸವ ಜರುಗಲಿದೆ.

ನ. 30 ರಂದು ಮಧ್ಯಾಹ್ನ 3.30ಕ್ಕೆ ರಂಭಾಪುರಿ ಪೀಠದ ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ  ಮನುಕುಲ ಸದ್ಭಾವನಾ ಬೆಳಕಿನ ಧರ್ಮ ಸಮಾರಂಭ ಜರುಗಲಿದೆ.

ಬಂಕಾಪುರದ ರೇವಣಸಿದ್ದೇಶ್ವರ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಕಾರ್ಯಕ್ರಮ ಉದ್ಘಾಟಿಸುವರು. ಉದ್ಯಮಿ ಆನಂದ ಸ್ವಾಮಿ ಗಡ್ಡದ ದೇವರ ಮಠ ಆಶಯ ನುಡಿ ನುಡಿಯುವರು. ಉದ್ಯಮಿ ಪಿ. ಶಿವಕುಮಾರರಿಗೆ ಹಾಗೂ ಹಿರಿಯ ಸಿನಿಮಾ ನಟ ದೊಡ್ಡಣ್ಣನವರಿಗೆ ಮನುಕುಲ ಸದ್ಬಾವನಾ ರಾಷ್ಟ್ರೀಯ ಪ್ರಶಸ್ತಿ ವಿತರಿಸಲಾಗುವುದು. 

ಅನಂತರ ಸಂಜೆ  7 ಗಂಟೆಗೆ ಉದ್ಯಮಿ ಡಾ. ವಿಎಸ್‌ವಿ ಪ್ರಸಾದ್‌ರವರು ದೀಪೋತ್ಸವಕ್ಕೆ ಚಾಲನೆ ನೀಡುವರು. ದೀಪೋತ್ಸವಕ್ಕೂ ಮುನ್ನಾದಿನವಾದ ಇಂದು ಮಧ್ಯಾಹ್ನ 3 ಗಂಟೆಗೆ ಮಾತೃ ಸಂಗಮ ಹಾಗೂ ಜಯಶ್ರೀ ಹೊಸ ಮನಿಯವರಿಗೆ ಮಾತೃ ದೀಪ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವುದು.

error: Content is protected !!