ಸೇಂಟ್ ಪೌಲ್ಸ್ ಪ್ರಿ-ಯೂನಿವರ್ಸಿಟಿ ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ಪ್ರದರ್ಶನ 2024-25, ಥೀಮ್: ವೀಕ್ಷಿತ್ ಭಾರತ್-2047 ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಸೇಂಟ್ ಪಾಲ್ಸ್ ಪಿ.ಯು. ಕಾಲೇಜು ಆಡಳಿತಾಧಿಕಾರಿ ಮೆಟ್ಟಿಲ್ಡಾ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕ ಆರ್. ವಿಶ್ವನಾಥ್ ಥೀಮ್ ವಿವರಣೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆ (ಪಿಯು) ಉಪ ನಿರ್ದೇಶಕ ಎಸ್. ಜಿ. ಕರಿಸಿದ್ದಪ್ಪ ಪಾಲ್ಗೊಳ್ಳಲಿದ್ದು, ಸೇಂಟ್ ಪಾಲ್ಸ್ ಸಂಸ್ಥೆಯ ಮ್ಯಾನೇಜರ್ ಮಾರ್ಜೋರಿ, ಸೇಂಟ್ ಪಾಲ್ಸ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವೆನೆಸ್ಸಾ, ಸೇಂಟ್ ಪಾಲ್ಸ್ ಎಚ್.ಪಿ.ಕಾನ್. ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಪ್ರಿಯಾ, ಸೇಂಟ್ ಪಾಲ್ಸ್ ನರ್ಸರಿ ಶಾಲೆಯ ಪ್ರಭಾರಿ ಲಿಂಡಾ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು.