ದಾವಣಗೆರೆ, ಸೆ. 30- ಲೋಕಿಕೆರೆ ಲೋಕನಾಯಕಿಪುರದ ಶ್ರೀ ವಿಜಯದುರ್ಗಾ ಪರಮೇಶ್ವರಿ ಅಮ್ಮನವರ ನವರಾತ್ರಿ ಮಹೋತ್ಸವವು ಇದೇ ದಿನಾಂಕ 3ರ ಗುರುವಾರದಿಂದ ದಿನಾಂಕ 12ರ ಶನಿವಾರದವರೆಗೆ ನಡೆಯಲಿದೆ. ಪ್ರತಿದಿನ ದೇವಿಗೆ ಉತ್ಸವ ನಡೆಯಲಿದ್ದು, ವಿಶೇಷ ಅಲಂಕಾರ, ಅಭಿಷೇಕ, ವಿಶೇಷ ಪೂಜೆ, ಕುಂಕುಮಾರ್ಚನೆ, ಕ್ಷೀರಾಭಿಷೇಕ, ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ.
ದಿನಾಂಕ 6ರ ಭಾನುವಾರ ಯುಗಧರ್ಮ ರಾಮಣ್ಣ ಅವರ ತತ್ವಪದಗಳ ಗಾಯನ, ಟಿವಿ, ಧಾರಾವಾಹಿ ನಟ ದಾಗಿನಕಟ್ಟೆ ಸಿದ್ದಪ್ಪ ಅವರಿಂದ ಭಕ್ತಿಗೀತೆ ಕಾರ್ಯಕ್ರಮಗಳು ನಡೆಯಲಿವೆ ಎಂದು ತ್ರಿಕೋಟ ದೇವಾಲಯ ಧರ್ಮದರ್ಶಿ ಕತ್ತಲಗೆರೆ ತಿಪ್ಪಣ್ಣ, ದೇವಾಲಯ ಉಸ್ತುವಾರಿ ಓಂಕಾರಪ್ಪ ತಿಳಿಸಿದ್ದಾರೆ.