ನಾಳೆ ಸಿಪಿಐ ಶಾಖಾ ಕಾರ್ಯದರ್ಶಿಗಳಿಗೆ ಒಂದು ದಿನದ ಕಾರ್ಯಗಾರ

ದಾವಣಗೆರೆ, ಸೆ.30 – ಬುಧವಾರ ಜಿಲ್ಲೆಯ ಭಾರತ ಕಮ್ಯುನಿಸ್ಟ್ ಪಕ್ಷದ ಶಾಖಾ ಕಾರ್ಯದರ್ಶಿಗಳಿಗೆ ಮತ್ತು ಸಹಕಾರ್ಯದರ್ಶಿಗಳಿಗೆ ಒಂದು ದಿನದ ಶಾಖಾ ನಿರ್ವಹಣಾ ಕಾರ್ಯಾಗಾರ ನಡೆಯಲಿದೆ ಎಂದು ಸಿಪಿಐ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗುವ ಶಾಖಾ ನಿರ್ವಹಣಾ ಕಾರ್ಯಾಗಾರಕ್ಕೆ ಸಿಪಿಐ ರಾಜ್ಯ ಕಾರ್ಯದರ್ಶಿ ಕಾಂ. ಸಾತಿ ಸುಂದರೇಶ್ ಸಹಕಾರ್ಯದರ್ಶಿ ಕಾಂ. ಬಿ ಅಮ್ಜದ್ ರವರಗಳು ಆಗಮಿಸಿ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.

error: Content is protected !!