ನಗರದಲ್ಲಿ ನಾಳೆ ಮಾಂಸ ಮಾರಾಟ, ಪ್ರಾಣಿ ವಧೆ ನಿಷೇದ

ದಾವಣಗೆರೆ, ಸೆ. 30 – ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಾಂಸದ ಉದ್ಯಮ ನಡೆಸುತ್ತಿರುವ ಉದ್ದಿಮೆದಾರರು ನಾಡಿದ್ದು ದಿನಾಂಕ 2  ರ ಬುಧವಾರ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಪ್ರಾಣಿ ವಧೆ, ಪ್ರಾಣಿ ಮಾಂಸ ಹಾಗೂ ಮೀನಿನ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಮಾಂಸ ಮಾರಾಟ ಮಾಡಬಾರದು, ತಪ್ಪಿದಲ್ಲಿ ಮಹಾನಗರಪಾಲಿಕೆ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಜರುಗಿಸಲಾ ಗುವುದು ಎಂದು ಆಯುಕ್ತರಾದ ಶ್ರೀಮತಿ ರೇಣುಕಾ ಎಚ್ಚರಿಸಿದ್ದಾರೆ.

error: Content is protected !!