ದಾವಣಗೆರೆ, ಸೆ.11- ನಗರದ ಪಶು ಆಸ್ಪತ್ರೆ ಆವರಣದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ತರ ಬೇತಿ ಕೇಂದ್ರದಲ್ಲಿ ಆಧುನಿಕ ಹೈನು ಗಾರಿಕೆ, ಕೋಳಿ, ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಆಧುನಿಕ ಹೈನುಗಾರಿಕೆ ತರ ಬೇತಿಯು ನಾಳೆ ದಿನಾಂಕ 12, 13, 25 ಮತ್ತು 26ಕ್ಕೆ, ಕೋಳಿ ಸಾಕಾಣಿಕೆ ಇದೇ ದಿನಾಂಕ 17 ಮತ್ತು 18ಕ್ಕೆ, ಕುರಿ ಮೇಕೆ ಸಾಕಾಣಿಕೆ ಇದೇ ದಿನಾಂಕ 20 ಮತ್ತು 21 ರಂದು ನಡೆಯ ಲಿವೆ. ಮಾಹಿತಿಗಾಗಿ 08192-233787 ಸಂಪರ್ಕಿಸಿ.