13ರಂದು ವಿನೋಬ ನಗರದಲ್ಲಿ ಅನ್ನ ಸಂತರ್ಪಣೆ

ದಾವಣಗರೆ, ಸೆ. 10 – ವಿನೋಬನಗರದ ಶ್ರೀ ವರಸಿದ್ದಿ ವಿನಾಯಕ ಸೇವಾ ಸಮಿತಿಯ 32ನೇ ವರ್ಷದ ಗಣೇಶೋತ್ಸವ ಏರ್ಪಾಡಾಗಿದ್ದು, 8 ದಿವಸಗಳ ಕಾಲ ದೃಶ್ಯಾವಳಿಗಳು ಪ್ರತಿ ದಿನ ಸಂಜೆ 6.30ರಿಂದ ನಡೆಯುತ್ತಿವೆ. ನಾಡಿದ್ದು ದಿನಾಂಕ 13ರ ಶುಕ್ರವಾರ ದಾವಣಗೆರೆ-ಹರಿಹರ ಅರ್ಬನ್‌ ಸಹಕಾರ ಸಮುದಾಯ ಭವನದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ. ದಿನಾಂಕ 15ರ ಭಾನುವಾರ ಮಧ್ಯಾಹ್ನ 12ರಿಂದ ಶ್ರೀ ವಿನಾಯಕ ಮೂರ್ತಿಯನ್ನು ಮೆರವಣಿಗೆ ಮೂಲಕ ಬಾತಿ ಕೆರೆಯಲ್ಲಿ  ವಿಸರ್ಜಿಸಲಾಗುವುದು.

error: Content is protected !!