ದಾವಣಗೆರೆ, ಸೆ. 2 – ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ನ್ಯೂ ಏಜ್ ಇನ್ನೋವೇಷನ್ ನೆಟ್ವರ್ಕ್ ಕೇಂದ್ರ ಸ್ಥಾಪಿಸಲು ನಗರದ ಬಿಐಇಟಿ ಕಾಲೇಜಿಗೆ 1.86 ಕೋಟಿ ರೂ., ಮಂಜೂರು ಮಾಡಿದೆ. ಇಲಾಖೆಯು ಸ್ಟಾರ್ಟಪ್ 22-27ರ ಅಡಿ 2.0 ಕೇಂದ್ರ ಸ್ಥಾಪಿಸಲು ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯವನ್ನು ಆಯ್ಕೆ ಮಾಡಿ, 1.86 ಕೋಟಿ ಅನುದಾನ ನೀಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಬಿ. ಅರವಿಂದ್ ತಿಳಿಸಿದ್ದಾರೆ.
September 14, 2024