ದಾವಣಗೆರೆ, ಆ. 13 – ನಗರದ ಆರ್.ಎಲ್. ಹನುಮಂತಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಶೇ. 85ರಷ್ಟು ಅಂಕ ಗಳಿಸಿದ ಕುರುಹಿನಶೆಟ್ಟಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ಅರ್ಜಿ ಸಲ್ಲಿಸಲು ಇದೇ ದಿನಾಂಕ 31 ಕೊನೆ ದಿನವಾಗಿದೆ. ಅರ್ಹ ವಿದ್ಯಾರ್ಥಿಗಳು ಶ್ರೀ ನೀಲಕಂಠೇಶ್ವರ ದೇವಸ್ಥಾನ, ಕುರುಹಿನಶೆಟ್ಟಿ ಸಮಾಜ, ಕೆ.ಟಿ.ಜೆ. ನಗರ, 14ನೇ ಕ್ರಾಸ್, 4ನೇ ಮೇನ್, ದಾವಣಗೆರೆ, ಮೊ : 94492 93249 ಅಥವಾ 86604 60744 ಕ್ಕೆ ಸಂಪರ್ಕಿಸಬಹುದು.