ಅಪರಿಚಿತ ಯುವಕನ ಶವ ಪತ್ತೆ

ದಾವಣಗೆರೆ, ಆ. 12 – ಇಲ್ಲಿಗೆ ಸಮೀಪದ ಆಲೂರುಹಟ್ಟಿ ಗ್ರಾಮದಿಂದ ಕರೆತಂದ ಅನಾಮಧೇಯ ವ್ಯಕ್ತಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸುಮಾರು 30 ರಿಂದ 40 ವರ್ಷ ವಯಸ್ಸಾಗಿದ್ದು, ಕಪ್ಪು ಕೂದಲು, ಮೀಸೆ ಗಡ್ಡ ಇದೆ. ಮೇಲ್ಬಾಗದ ಒಂದು ಹಲ್ಲು ಮುರಿದಿರುತ್ತದೆ. ಬ್ರೌನ್‌ ಬಣ್ಣದ ಲೋಯರ್‌, ಹಳದಿ ಬಣ್ಣದ ಚಡ್ಡಿ ಧರಿಸಿರುತ್ತಾನೆ. ಸಂಬಂಧಪಟ್ಟವರು ಗ್ರಾಮಾಂತರ ಪೊಲಿಸ್‌ ಠಾಣೆ 08192 262555, 08192 253100, 9480803256, ಗೆ ಸಂಪರ್ಕಿಸಬಹುದು.

error: Content is protected !!