ದಾವಣಗೆರೆ, ಆ. 11- ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಕಾರ ರೂಪದಲ್ಲಿ `ಸೋದರ ವಾತ್ಸಲ್ಯ’ ಸಂಕಲನ ತರಲು ಆಯೋಜಿಸಿದ್ದು ಚುಟುಕು, ಕವನ ಹಾಗೂ ಸೋದರ ವಾತ್ಸಲ್ಯದ ಬಗ್ಗೆ ಲೇಖನವನ್ನು ಆಹ್ವಾನಿಸಲಾಗಿದೆ.
8 ಚುಟುಕುಗಳು, 20 ಸಾಲಿನ 2 ಕವನಗಳು ಮತ್ತು 2ಪುಟ ಮಿರದಂತೆ ಸೋದರ ವಾತ್ಸಲ್ಯದ ಬಗ್ಗೆ ಲೇಖನವನ್ನು ಸಹೋದರ-ಸಹೋದರಿಯರ ಜೊತೆಗಿರುವ ಪೋಟೋದೊಂದಿಗೆ ಕಳುಹಿಸಬಹುದಾಗಿದೆ. ಆಯ್ದ 10 ಜನ ಸಹೋದರಿಯರಿಗೆ ಗೌರವಿಸಲಾಗುವುದು.
ಜಿ.ಹೆಚ್. ರಾಜಶೇಖರ ಗುಂಡಗಟ್ಟಿ, ಜಿಲ್ಲಾ ಅಧ್ಯಕ್ಷರು ಚುಟುಕು ಸಾಹಿತ್ಯ ಪರಿಷತ್, 1948/16ಎ 3ನೇ ಮುಖ್ಯ ರಸ್ತೆ, 8ನೇ ಅಡ್ಡ ರಸ್ತೆ, ವಿನೋಬನಗರ, ದಾವಣಗೆರೆ – 06. (9844718412. 7019353970) ಅವರನ್ನು ಸಂಪರ್ಕಿಸಬಹುದು.