ದಾವಣಗೆರೆ, ಜು. 31 – ಕೊಂಡಜ್ಜಿ ರಸ್ತೆ ವಾಲ್ಮೀಕಿ ವೃತ್ತದ ಬಳಿ ಬಿದ್ದಿದ್ದ 35-40 ವರ್ಷದ ಅನಾಮ ಧೇಯ ವ್ಯಕ್ತಿಯನ್ನು ಸಿ.ಜಿ. ಆಸ್ಪತ್ರೆಗೆ ದಾಖಲಿಸಿದ್ದು, ವ್ಯಕ್ತಿ ಗುಣಮುಖ ನಾಗದೇ ನಿನ್ನೆ ಮೃತಪಟ್ಟಿದ್ದಾನೆ.
ದುಂಡು ಮುಖ, ಸಾಧಾರಣ ಮೈಕಟ್ಟು, ತಲೆಯಲ್ಲಿ 3 ಇಂಚು ಉದ್ದದ ಕಪ್ಪು ಕೂದಲು, ಕಪ್ಪು ಕುರುಚಲು ಗಡ್ಡ-ಮೀಸೆ ಇರುತ್ತದೆ. ಕೇಸರಿ ಗೆರೆಗಳಿರುವ ಕಪ್ಪು ಬಣ್ಣದ ಜರ್ಸಿ ಹಾಗೂ ಸಿಮೆಂಟ್ ಕಲರ್ ಪ್ಯಾಂಟ್ ಧರಿಸಿರುತ್ತಾನೆ. ಮೃತನ ಬಲಮುಂಗೈ ಮೇಲೆ ಮಾಧು, ರಾಧಮ್ಮ ಎಂಬ ಹಚ್ಚೆ ಗುರುತು ಇರುತ್ತದೆ. ಶವವನ್ನು ಸಿಜಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.